ಹೆಮ್ಮುಂಜೆ ಸ.ಹಿ.ಪ್ರಾ.ಶಾಲೆಗೆ ಕುಂದಾಪುರ ರೋಟರಿ ಕ್ಲಬ್ ವತಿಯಿಂದ ವಿದ್ಯಾರ್ಥಿ ಪರಿಕರಗಳ ಕೊಡುಗೆ
ಬೈಂದೂರು: ಹೆಮ್ಮುಂಜೆ ಸ, ಹಿ, ಪ್ರಾ, ಶಾಲೆಯ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಶಾಲಾ ಪರಿಕರಗಳನ್ನು ರೋಟರಿ ಕ್ಲಬ್ ಕುಂದಾಪುರದ ವತಿಯಿಂದ ನೀಡಲಾಯಿತು.
ವಿದ್ಯಾರ್ಥಿ ಪರಿಕರಗಳನ್ನು ನೀಡಿ ಮಾತನಾಡಿದ ಅಧ್ಯಕ್ಷರಾದ ರಾಘವೇಂದ್ರ ಸಿ ನಾವುಡರು ಶಾಲೆಗೆ ಇನ್ನೂ ಹೆಚ್ಚಿನ ಸವಲತ್ತನ್ನು ಒದಗಿಸುವ ಮೂಲಕ ಮಕ್ಕಳ ಬರುವಿಕೆ ಸಂಖ್ಯೆ ಹೆಚ್ಚಾಗಲಿ ಎಂದು ಹಾರೈಸುತ್ತೇನೆ ಎಂದರು.
ಶಾಲಾ ಸ್ಥಾಪಕ ಕುಟುಂಬದ ಸದಸ್ಯರು, ಹಿರಿಯ ವಿದ್ಯಾರ್ಥಿಯು ಹಾಗೂ ಅತ್ಯುತ್ತಮ ಜಿಲ್ಲಾ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಆದ ನಿವೃತ್ತ ಶಿಕ್ಷಕರಾದ ಸಾಲ್ಗದ್ದೆ ಶಶಿಧರ ಶೆಟ್ಟಿ (ಮಾಜಿ ರೋಟರಿ ವಲಯ ಸೇನಾನಿ) ಮಾಜಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಶಿಕ್ಷಕ ವೃಂದದವರು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕ ನಾಗರಾಜ ಶೆಟ್ಟಿ ಸ್ವಾಗತಿಸಿ ವಂದಿಸಿದರು.