ಗ್ರಂಥಾಲಯದಲ್ಲೇ ತ್ಯಾಜ್ಯಗಳ ರಾಶಿ..

ಗ್ರಾಮದಲ್ಲಿ ಸಂಗ್ರಹಿಸಿದ ತ್ಯಾಜ್ಯಗಳನ್ನ ವಿಲೇವಾರಿ ಮಾಡೋ ಬದಲು ಗ್ರಾಮ ಪಂಚಾಯಿತಿನ ಗ್ರಂಥಾಲಯದಲ್ಲಿ ತುಂಬಿಸಿಟ್ಟಿದ್ದಾರೆ.ಇಲ್ಲಿ ಗ್ರಾಮಸ್ಥರು ಪುಸ್ತಕಗಳನ್ನು ದಿನಪತ್ರಿಕೆಗಳನ್ನ ಓದಬೇಕಾದರೆ ಈ ಕಸದ ರಾಶಿಗಳ ಮಧ್ಯೆ ಹಾಕಿರುವ ಟೇಬಲ್ ನಲ್ಲಿ ಮೂಗುಮುಚ್ಚಿಕೊಂಡು ಓದಬೇಕಾದ ಪರಿಸ್ಥಿತಿ ನಿರ್ಮಿಸಿದೆ. ಇದು ಅಂಬಲಪಾಡಿ ಗ್ರಾಮ ಪಂಚಯತ್ ವ್ಯಾಪ್ತಿಯ ಅವ್ಯವಸ್ಥೆ.

 


ಸ್ವಚ್ಚ ಭಾರತ ಯೋಜನೆಯಡಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಕಾದ ಗ್ರಾಮ ಪಂಚಯತ್ ಅಧಿಕಾರಿಗಳು ಗ್ರಾಮ ಪಂಚಯತ್ ಕಟ್ಡಡದ ಮೊದಲ ಮಹಡಿಯಲ್ಲಿರುವ ಗ್ರಂಥಾಲಯದಲ್ಲಿ ಕಸಗಳನ್ನು ತುಂಬಿಸಿರುವುದಕ್ಕೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ.ಅಷ್ಟೇ ಅಲ್ಲದೇ ಪಕ್ಕದಲ್ಲೇ ನೂರಾರು ಮನೆಗಳಿರುವ ಅಪಾರ್ಟ್‌ಮೆಂಟ್ ಇದೆ. ಹತ್ತಾರು ಮನೆಗಳು ಕೂಡ ಇದೆ.ತ್ಯಾಜ್ಯಗಳ ಸಂಗ್ರಹದಿಂದ ಗಬ್ಬು ನಾಥ ಪರಿಸರದಲ್ಲಿ ಹರಡಿದ್ದು ,ಸೊಳ್ಳೆಗಳ ಉತ್ಪಾತ್ತಿ ಕೇಂದ್ರವಾಗಿದ್ದು .ಸಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಗ್ರಾಮ ಪಂಚಾಯತ್ ಅಂಗಳದಲ್ಲೇ ದೈವದ ಕ್ಷೇತ್ರವಿದ್ದು ,ದೈವದ ಕಾರ್ಯಗಳು ನಡೆಯುತ್ತಿರುತ್ತವೆ.ಈ ಕಸಗಳ ರಾಶಿಯಿಂದಾಗಿ ಇಡೀ ಕ್ಷೇತ್ರದ ಪವಿತ್ರತ್ಯೆಗೂ ದಕ್ಕೆಯುಂಟಾಗಿದೆ.ಹೀಗಾಗಿ ಗ್ರಾಮ ಪಂಚಯತ್ ಕೂಡಲೇ ಈ ತ್ಯಾಜ್ಯಗಳನ್ಬು ಇಲ್ಲಿಂದ ಸ್ಥಳಾಂತರಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Related Posts

Leave a Reply

Your email address will not be published.