ಟೋಕಿಯೊ ಪ್ಯಾರಾಲಿಂಪಿಕ್ಸ್: ಬ್ಯಾಡ್ಮಿಂಟನ್ ನಲ್ಲಿ ಪ್ರಮೋದ್ ಭಗತ್ ಗೆ ಚಿನ್ನದ ಪದಕ

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯ ಪುರುಷರ ಸಿಂಗಲ್ಸ್‌ನಲ್ಲಿ  ಹಾಲಿ ವಿಶ್ವ ಚಾಂಪಿಯನ್ ಪ್ರಮೋದ್ ಭಗತ್  ಚಿನ್ನದ ಪದಕವನ್ನು ಜಯಿಸಿದರು.

ಶನಿವಾರ ನಡೆದ ಫೈನಲ್ ನಲ್ಲಿ ಬ್ರಿಟನ್ ನ ಡೇನಿಯಲ್ ಬೆಥೆಲ್ ಅವರನ್ನು 21-14, 21-17  ಗೇಮ್ ಗಳಿಂದ ಸೋಲಿಸಿದರು. 33ರ ಹರೆಯದ ಪ್ರಮೋದ್ ವಿಶ್ವದ ನಂ.1 ಆಟಗಾರನಾಗಿದ್ದು, ಹಾಲಿ ಏಶ್ಯನ್ ಚಾಂಪಿಯನ್ ಆಗಿದ್ದಾರೆ. ಶನಿವಾರ 36 ನಿಮಿಷಗಳಲ್ಲಿ ಅಂತ್ಯಗೊಂಡ ಪುರುಷರ ಸಿಂಗಲ್ಸ್ ಎಸ್ ಎಲ್ 3 ಕ್ಲಾಸ್ ಸೆಮಿ ಫೈನಲ್ ನಲ್ಲಿ ಜಪಾನ್ ಆಟಗಾರನನ್ನು 21-11, 21-16 ಗೇಮ್ ಗಳ ಅಂತರದಿಂದ ಸೋಲಿಸಿದ್ದರು.

ಬ್ಯಾಡ್ಮಿಂಟನ್ ನ  ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಭಾರತದ  ಮನೋಜ್ ಸರ್ಕಾರ್ ಜಪಾನ್‌ನ ಆಟಗಾರ ಡೈಸುಕೆ ಫುಜಿಹರಾ ಅವರನ್ನು 22-20, 21-13 ಗೇಮ್ ಗಳ ಅಂತರದಿಂದ ಸೋಲಿಸಿ ಕಂಚಿನ ಪದಕ ಗೆದ್ದರು. ಈ ಮೂಲಕ ಪುರುಷರ ಸಿಂಗಲ್ಸ್ ಎಸ್ ಎಲ್ 3 ಕ್ಲಾಸ್ ವಿಭಾಗದಲ್ಲಿ ಭಾರತವು ಚಿನ್ನ ಹಾಗೂ ಕಂಚಿನ ಪದಕ ತನ್ನದಾಗಿಸಿಕೊಂಡಿದೆ.

 

Related Posts

Leave a Reply

Your email address will not be published.