ದರೋಡೆ ಪ್ರಕರಣ – ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಪುತ್ತೂರು ಪೊಲೀಸರು

ಪುತ್ತೂರು: 26 ವರ್ಷಗಳ ಹಿಂದೆ ಸಾಲ್ಮರದಲ್ಲಿ ನಿವೃತ್ತ ತಹಸೀಲ್ದಾರ್ ಲಿಂಗಪ್ಪ ಗೌಡ ಅವರ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.

ಕೇರಳದ ಎರ್ನಾಕುಲಂ ನಿವಾಸಿ ಜೊಡ್‌ಸನ್ ಎಂಬವರು ಆರೋಪಿ. ಜೊಡ್‌ಸನ್ ಅವರು 1995 ರಲ್ಲಿ ಪುತ್ತೂರು ಸಾಲ್ಮರದಲ್ಲಿ ನಿವೃತ್ತ ತಹಶೀಲ್ದಾರ್ ಲಿಂಗಪ್ಪ ಗೌಡ ಅವರ ಮನೆಗೆ ಹೋಗಿ ನೀರು ಕೇಳುವ ನೆಪದಲ್ಲಿ ಲಿಂಗಪ್ಪ ಗೌಡರ ಪತ್ನಿ ಗೀತಾ ಅವರಿಗೆ ಚೂರಿ ತೋರಿಸಿ ಕೈಯಲ್ಲಿದ್ದ ಬಂಗಾರದ ಬಳೆಯನ್ನು ದರೋಡೆ ಮಾಡಿದ್ದರು. ಪ್ರಕರಣದ ಆರೋಪಿ ಜೊಡ್‌ಸನ್ ಅವರನ್ನು ಕಬಕದಲ್ಲಿ ಅದೇ ದಿನ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಜಾಮೀನು ಪಡೆದ ಬಳಿಕ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಆರೋಪಿ ವಿರುದ್ಧ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಈ ವಿಚಾರವಾಗಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವನೆ, ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರ ಮಾರ್ಗದರ್ಶನದಂತೆ, ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕ ಗೋಪಾಲ್ ನಾಯ್ಕ್, ಎಸ್.ಐಗಳಾದ ಸುತೇಶ್ ಮತ್ತು ನಸ್ರೀನ್ ತಾಜ್ ಚಟ್ಟರಕಿ ಅವರ ನಿರ್ದೇಶನದಲ್ಲಿ ಎ.ಎಸ್.ಐ ಚಂದ್ರ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಪರಮೇಶ್ವರ ಮತ್ತು ಜಗದೀಶ್ ಅವರು ಆರೋಪಿಯನ್ನು ಸೆ.26ರಂದು ಕೇರಳದ ಎರ್ನಾಕುಲಂ ವರುಪುರು ಪುತ್ತನ್ ಕೈತಡ್ಕಚಾಲಿ ಎಂಬಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಸೆ.27ರಂದು ನಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Related Posts

Leave a Reply

Your email address will not be published.