ಪಣಂಬೂರು ಬೀಚ್ನಲ್ಲಿ ಮೀನುಗಾರಿಕಾ ಬೋಟ್ ಅವಘಡ: ಓರ್ವ ಸಮುದ್ರಪಾಲು:ನಾಲ್ವರ ರಕ್ಷಣೆ
ಮಂಗಳೂರು: ನಗರದ ಪಣಂಬೂರು ಬೀಚ್ ಬಳಿ ಮೀನುಗಾರಿಕೆಗೆಂದು ತೆರಳಿದ್ದ ಬೋಟ್ ಇಂದು ಬೆಳಗ್ಗೆ ದುರಂತಕ್ಕೀಡಾಗಿದೆ. ಪರಿಣಾಮ ಓರ್ವ ಮೀನುಗಾರ ನಾಪತ್ತೆಯಾಗಿದ್ದು, ನಾಲ್ವರನ್ನು ರಕ್ಷಿಸಲಾಗಿದೆ.
ಮೀನುಗಾರಿಕೆಗೆ ತೆರಳಿರುವ ಶರೀಫ್ ನಾಪತ್ತೆಯಾದವರು. ಮೀನುಗಾರಿಕೆ ನಡೆಸಲು ಅಝರ್ ಎಂಬವರ ಮಾಲಕತ್ವದ ಎಫ್.ಎನ್.ಚಿಲ್ಡ್ರನ್ಸ್ ಗಿಲ್ ನೆಟ್ ದೋಣಿಯು ಸಮುದ್ರಕ್ಕೆ ತೆರಳಿತ್ತು. ಆದರೆ ಇಂದು ಬೆಳಗ್ಗೆ 7.30 ಸುಮಾರಿಗೆ ಈ ದೋಣಿಯು ಪಣಂಬೂರು ಬೀಚ್ ಬಳಿ ಬಿರುಗಾಳಿಯ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ಪರಿಣಾಮ ದೋಣಿಯಲ್ಲಿದ್ದ ಎಲ್ಲಾ ಮೀನುಗಾರರು ಸಮುದ್ರಪಾಲಾಗಿದ್ದರು. ತಕ್ಷಣ ಸ್ಥಳೀಯರು ಕಾರ್ಯಾಚರಣೆ ನಡೆಸಿ ಅಬ್ದುಲ್ ಅಜೀಜ್, ಇಮ್ತಿಯಾಝ್, ಸಿನಾನ್, ಫಿರೋಝ್ ರಕ್ಷಿಸಿದ್ದಾರೆ. ಆದರೆ ಶರೀಫ್ ಎಂಬವರು ಇನ್ನೂ ಪತ್ತೆಯಾಗಿಲ್ಲ. ಅವರ ಶೋಧ ಕಾರ್ಯ ಮುಂದುವರಿದಿದೆ. ದುರಂತಕ್ಕೀಡಾದ ದೋಣಿಯನ್ನು ದಡಕ್ಕೆ ತರಲಾಗಿದೆ.