ಪುತ್ತೂರಿನ ಕೊಡನೀರು ಎಂಬಲ್ಲಿ ರಸ್ತೆ ಅಪಘಾತ : ದ್ವಿಚಕ್ರ ಸವಾರ ಮೃತ್ಯು
ಪುತ್ತೂರು – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕೊಡನೀರು ಎಂಬಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿ ಚಕ್ರ ವಾಹನ ಸವಾರ ಮೃತಪಟ್ಟ ಘಟನೆ ನ .1 ರಂದು ನಡೆದಿದೆ.ಪೆರಮೊಗರಿನ ಕೋಳಿ ಅಂಗಡಿಯ ಸೋಮಶೇಖರ್ ರೈ ಮೃತಪಟ್ಟವರು.ಇವರು ಮೂಲತ: ಸವಣೂರು ಪುಣ್ಚಪ್ಪಾಡಿ ನಿವಾಸಿಯಾಗಿದ್ದು ಸದ್ಯ ಪೆರಮೊಗರಿನಲ್ಲಿ ವಾಸವಾಗಿದ್ದರು . ಇವರಿಗೆ ಪುಣ್ಚಪ್ಪಾಡಿಯಲ್ಲಿ ತೋಟವಿದ್ದು ಅಲ್ಲಿ ಕೆಲಸ ಮಾಡಿಸಿ ವಾಪಸ್ಸು ಪೆರಮೊಗರುವಿಗೆ ವಾಪಸ್ಸಾಗುತಿದ್ದ ವೇಳೆ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಮಾರುತಿ ಡಿಸೈರ್ ಕಾರು ಹಾಗೂ ಅಕ್ಟಿವಾ ವಾಹನಗಳ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ಅಕ್ಟಿವಾ ಸವಾರ ಗಂಭೀರವಾಗಿ ಗಾಯಗೊಂಡಿದ್ದು ,ಕೂಡಲೇ ಸ್ಥಳೀಯರು ಕಾರಿನಲ್ಲಿ ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಮಾರ್ಗ ಮಧ್ಯೆ ಮುಕ್ವೆ ಬಳಿ ಕಾರಿನಿಂದ ಗಾಯಾಳುವನ್ನು ಅಂಬ್ಯುಲೆನ್ಸ್ ಗೆ ಶಿಪ್ಟ್ ಮಾಡಿ ಆಸ್ಪತ್ರೆಗೆ ರವಾನಿಸಲಲಾಗಿದೆ.ಆದರೇ ಆಸ್ಪತ್ರೆ ತಲುಪುತ್ತಲೇ ಗಾಯಾಳು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಅಪಘಾತ ನಡೆದ ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆ ಪೆÇಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.