ಬಂಟ್ವಾಳ: ಸೇತುವೆಯಲ್ಲಿ ಬೈಕನ್ನು ಚಾಲನೆ ಸ್ಥಿತಿಯಲ್ಲಿಯೇ ಇಟ್ಟು ಯವಕ ನಾಪತ್ತೆ
ಬೆಂಗಳೂರು ಮೂಲದ ಯುವಕನೋರ್ವ ಪಾಣೆಮಂಗಳೂರಿನ ಹೊಸ ಸೇತುವೆಯಲ್ಲಿ ಬೈಕನ್ನು ಚಾಲನೆ ಸ್ಥಿತಿಯಲ್ಲಿಯೇ ಇಟ್ಟು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ದಾಸರಹಳ್ಳಿ ನಿವಾಸಿ ಸತ್ಯವೇಲು(29) ನಾಪತ್ತೆಯಾದ ಯವಕನಾಗಿದ್ದು ಬಂಟ್ವಾಳ ಪೊಲೀಸರು ಬೈಕನ್ನ ವಶಕ್ಕೆ ಪಡೆದುಕೊಂಡು ಯುವಕನಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಈತ ಎರಡು ವಾರಗಳ ಹಿಂದೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಬೆಂಗಳೂರಿನಿಂದ ಪಾಣೆಮಂಗಳೂರಿಗೆ ಬಂದಿದ್ದ. ಆದರೆ ಸ್ಥಳೀಯರು ಈತನ್ನು ರಕ್ಷಿಸಿದ್ದರು. ಬಳಿಕ ಪೊಲೀಸರು ಆತನ ಮನೆಯವರನ್ನು ಕರೆಸಿ ಬುದ್ದಿ ಹೇಳಿ ವಾಪಸ್ಸು ಕಳುಹಿಸಿ ಕೊಟ್ಟಿದ್ದರು. ಬುಧವಾರ ಮುಂಜಾನೆ ಮತ್ತೆ ಆತನ ಬೈಕ್ ಪಾಣೆಮಂಗಳೂರು ಸೇತುವೆಯ ಮೇಲೆ ಕಂಡು ಬಂದಿದ್ದು ನದಿಗೆ ಹಾರಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಆನ್ಲೈನ್ ಗೇಮ್ ಮೂಲಕ ಹಣ ಕಳೆದುಕೊಂಡು ಈ ರೀತಿ ವರ್ತಿಸುತ್ತಿರುವುದಾಗಿ ಪೋಷಕರು ಪೊಲೀಸರಿಗೆ ತಿಳಿಸಿದ್ದಾರೆ.