ಬದುಕು ಭಾರವಲ್ಲ ಕೃತಿ ಬಿಡುಗಡೆ
ಮಂಗಳೂರಿನ ಆಕೃತಿ ಆಶಯ ಪಬ್ಲಿಕೇಶನ್ಸ್ ಪ್ರಕಟಿಸಿರುವ ಲೇಖನಗಳ ಸಂಕಲನ ‘ಬದುಕು ಭಾರವಲ್ಲ’ ಕೃತಿಯನ್ನು ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಬಿಡುಗಡೆಗೊಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಹರೀಶ್ ಕುಮಾರ್ ಕುಡ್ತಡ್ಕ ಅವರ ಚೊಚ್ಚಲ ಸಾಹಿತ್ಯ ಕೃತಿ ಇದಾಗಿದ್ದು, ಬದುಕು ಬಹಳ ತೂಕದ್ದಾಗಿದ್ದು, ಅದನ್ನು ಕಡೆಗಣಿಸಬಾರದು ಎಂಬ ಆಶಯವನ್ನು ಈ ಕೃತಿಯಲ್ಲಿ ಓದುಗರ ಮನ ಮುಟ್ಟುವಂತೆ ಬರೆಯಲಾಗಿದೆ ಎಂದು ಡಾ. ಚಿನ್ನಪ್ಪ ಗೌಡ ಹೇಳಿದರು.
ಕೃತಿ ಬಿಡುಗಡೆ ಸಂದರ್ಭ ಲೇಖಕ ಹರೀಶ್ ಕುಮಾರ್ ಕುಡ್ತಡ್ಕ, ಆಕೃತಿ ಆಶಯ ಪಬ್ಲಿಕೇಶನ್ಸ್ನ ಕಲ್ಲೂರು ನಾಗೇಶ್ ಉಪಸ್ಥಿತರಿದ್ದರು.