ಕಾರ್ಕಳದಲ್ಲಿ ನಡೆದ ಪಂಜಿನ ಪೊಲೀಸ್ ಕವಾಯತು

ಕಾರ್ಕಳ: ರಾಜ್ಯದ ಪ್ರಮುಖ ನಗರವಾದ ಮೈಸೂರು ಹಾಗೂ ಬೆಂಗಳೂರಿಗೆ ಸೀಮಿತವಾಗಿದ್ದ ಪೊಲೀಸ್ ಕವಾಯತು ಕಾರ್ಕಳದಲ್ಲಿ ನಡೆಯುತ್ತಿದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು .

ಅವರು ಸ್ವರಾಜ್ ಮೈದಾನದಲ್ಲಿ ನಡೆದ ವಿಶ್ವವಿಖ್ಯಾತ ಬೈಲೂರಿನ ಪರಶುರಾಮ ಧಿಂ ಪಾರ್ಕ್ ಲೋಕಾರ್ಪಣೆಗೆ ಪ್ರಯುಕ್ತ ಪೊಲೀಸ್ ಇಲಾಖೆ ಶ್ರೀ ಭುವನೇಂದ್ರ ಕಾಲೇಜು ಇವರ ಸಹಯೋಗದಲ್ಲಿ ನಡೆದ ಆಕರ್ಷಕ ಪಂಜಿನ ಕವಾಯತು ಉದ್ಘಾಟಿಸಿ ಮಾತನಾಡಿದರು. ಅಭಿವೃದ್ಧಿ ಸಾಂಸ್ಕೃತಿಕತೆ ಜನತೆಗೆ ಎಲ್ಲ ಆಯಾಮಗಳಲ್ಲಿನ ಹೊಸತನ ಕಾರ್ಕಳದ ಜನತೆಗೆ ಸಿಗಬೇಕು .ಯಾವುದರಿಂದಲೂ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಪೊಲೀಸ್ ಪಂಜಿನ ಕವಾಯತು ಆಯೋಜಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಬಂಡಾರಿ ಮಾತನಾಡಿ ಜನ ಪ್ರತಿನಿಧಿಯಾಗಿ ತನ್ನ ಕ್ಷೇತ್ರಕ್ಕೆ ಏನು ಮಾಡಬಹುದು ಎನ್ನುವುದನ್ನು ರಾಜ್ಯಕ್ಕೆ ತೋರ್ಪಡಿಸಿದಕ್ಕೆ ಸಚಿವ ಸುನಿಲ್ ಕುಮಾರ್ ಉದಾಹರಣೆ ಎಂದರು.

ವಿವೇಕ್ ಬಿ ಮನಮೋಹನ್ ರಾವ್ ಕಾರ್ಯಕ್ರಮ ನಿರ್ವಹಿಸಿದರು ಸಚಿವ ಸುನಿಲ್ ಕುಮಾರ್, ಶಾಸಕ ಮಂಜುನಾಥ ಭಂಡಾರಿ, ಪ್ರಾಂಶುಪಾಲ ಮಂಜುನಾಥ ಕೋಟ್ಯಾನ್, ಮೈಸೂರಿನ ದ್ವಾರಕನಾಥ್ ತರಬೇತುದಾರರು ಹಾಗೂ ಇಲಾಖೆಗೆ ಸಹಕರಿಸಿದ ಸುಮಿತ್ ನಲ್ಲೂರು ಮುಸ್ತಫ ಕಾರ್ಕಳ ಇವರನ್ನು ಸನ್ಮಾನಿಸಲಾಯಿತು.

ಉಡುಪಿ ಜಿಲ್ಲಾಧಿಕಾರಿ ಕೊರ್ಮರಾವ್, ಎಸ್ ಪಿ ಅಕ್ಷಯ ಮಚ್ಚಿಂದ್ರ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹೆಚ್, ಕಾರ್ಕಳ ನಕ್ಸಲ್ ನಿಗ್ರಹ ಪೊಲೀಸ್ ಅಧೀಕ್ಷಕ ನಿಕಂ ಪ್ರಕಾಶ್, ಅಮೃತ್ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ ಮಣಿ ರಾಜ್ಯ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷ ಸುಮಾ ಕೇಶವ್, ಭುವನೇಂದ್ರ ಕಾಲೇಜಿನಪ್ರಾಂಶುಪಾಲ ಮಂಜುನಾಥ ಎ ಕೋಟ್ಯಾನ್, ಪೆರುವಾಜೆಶಾಲೆ ಮುಖ್ಯ ಶಿಕ್ಷಕಿ ಹರ್ಷಿಣಿ ಉಪಸ್ಥಿತರಿದ್ದರು.

ಪಂಜಿನ ಆಕರ್ಷಕ ಕವಾಯತು ಪರಶುರಾಮ ಲೋಕಾರ್ಪಣೆವು ಕೊನೆಯ ಕಾರ್ಯಕ್ರಮವಾಗಿದ್ದರಿಂದ ಇದನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ಮೈಸೂರು ಮಂಗಳೂರು ಉಡುಪಿ ಜಿಲ್ಲೆಗಳ ಪೊಲೀಸ್ ಪಡೆಯ ತರಬೇತಿ ಪೊಲೀಸರು ಮೈದಾನದಲ್ಲಿ ಶ್ವಾನ ಕವಾಯತು ಇಂಗ್ಲಿಷ್ ಕ್ಲಾಸಿಕಲ್ ಬ್ಯಾಂಡ್ ವಾದ್ಯಗಳೊಂದಿಗೆ ನಡೆಸಿದರು.

Related Posts

Leave a Reply

Your email address will not be published.