ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ಶೇಖರ್ ಬಂಗೇರ ನಿಧನ
ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ, ಉಡುಪಿ ಮೂಲದ ಶೇಖರ್ ಬಂಗೇರ (74) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಶೇಖರ್ ಬಂಗೇರ ಅವರು ಬ್ರಹ್ಮಾವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೆ ಗುರುವಾರ ಬೆಳಗ್ಗೆ ಅವರು ಕೊನೆಯುಸಿರೆಳೆದಿದ್ದಾರೆ. ಉಡುಪಿಯ ಬಡಾನಿಡಿಯೂರು ಮೂಲದ ಶೇಖರ್ ಬಂಗೇರ ಅವರು ಭಾರತೀಯ ಫುಟ್ಬಾಲ್ ತಂಡದ ಗೋಲ್ ಕೀಪರ್ ಆಗಿದ್ದರು. ಇದೇವೇಳೆ ಅವರು ತಂಡದ ನಾಯಕರೂ ಆಗಿದ್ದರು.
ಬಹುಕಾಲ ಮುಂಬೈಯಲ್ಲೇ ವಾಸವಾಗಿದ್ದ ಅವರು, ಹಲವು ಫುಟ್ಬಾಲ್ ಸಂಘಸಂಸ್ಥೆಗಳಲ್ಲಿ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಮೃತರ ಅಂತ್ಯಕ್ರಿಯೆ ಇಂದು ಉಡುಪಿಯಲ್ಲಿ ನೆರವೇರಲಿದೆ.ಶೇಖರ್ ಬಂಗೇರಾ ನಿಧನಕ್ಕೆ ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷರಾದ ಡಿ.ಎಂ ಅಸ್ಲಂ, ರಾಜ್ಯ ಫುಟ್ಬಾಲ್ ಸಂಸ್ಥೆಯ ಸದಸ್ಯ ವಿಜಯ ಸುವರ್ಣ, ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷರಾದ ಚೇತನ್ ಬೆಂಗರೆ, ಕಾರ್ಯದರ್ಶಿ ಹುಸೇನ್ ಬೋಳಾರ, ಖಜಾಂಚಿ ಅನಿಲ್ ಪಿ.ವಿ, ಯುನೈಟೆಡ್ ಉಚ್ಚಿಲ ತಡದ ಉಮೇಶ್ ಉಚ್ಚಿಲ, ಬ್ರದರ್ಸ್ ಉಚ್ಚಿಲ ತಂಡದ ಆರಿಫ್ ಉಚ್ಚಿಲ, ಬೆಂಗರೆ ತಂಡದ ಯುವರಾಜ್ ಬೆಂಗರೆ, ಜೆಮ್ ತಂಡದ ನೋರ್ಬರ್ಟ್ ಸಾಲ್ಡಾನ, ಮಂಗಳೂರು ಸ್ಪೋರ್ಟಿಂಗ್ ತಂಡದ ಜೀವನ್, ಫಯಾಝ್,ಸೋಕರ್ ತಂಡದ ಫಿರೋಝ್, ಯೆನಪೋಯ ಯುನಿವರ್ಸಿಟಿ ತಂಡದ ಬಿಭಿ ಥೋಮಸ್, ಕಸಬಾ ಬೆಂಗರೆ ತಂಡದ ಅಬ್ದುಲ್ ಲತೀಫ್, ಅಝಾರಿಯಾ ತಂಡದ ಅಬ್ದುಲ್ ಸಲಾಂ ಮುಂತಾದವರು ಸಂತಾಪ ಸೂಚಿಸಿದ್ದಾರೆ.