ಮಂಗಳೂರಿನಲ್ಲಿ ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಚಳವಳಿ
ದಕ್ಷಿಣ ಕನ್ನಡ ಜಿಲ್ಲೆಯ ಸಂಯುಕ್ತ ಕಿಸಾನ್ ಮೋರ್ಚಾ ಘಟಕದಿಂದ ರೈತ ವಿರೋಧಿ ಕರಾಳ ಕೃಷಿ ಕಾಯ್ದೆ ವಾಪಸ್ಸಾತಿಗೆ ಆಗ್ರಹಿಸಿ ಮತ್ತು ಕನಿಷ್ಟ ಬೆಂಬಲ ಬೆಲೆ ಖಾತ್ರಿ ಕಾಯ್ದೆ, ಋಣಮುಕ್ತ ಕಾಯ್ದೆ ಜಾರಿಗೆ ಬರಲಿ ಎಂದು ಆಗ್ರಹಿಸಿ ಕೃಷಿ ಉಳಿಸಿ-ಪ್ರಜಾಪ್ರಭುತ್ವ ರಕ್ಷಿಸಿ ಚಳವಳಿಯು ಮಂಗಳೂರಿನ ಹಂಪನಕಟ್ಟೆಯ ಮುಖ್ಯ ವೃತ್ತದಲ್ಲಿ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ರವಿಕಿರಣ ಪುಣಚ ಅವರು, ಕೃಷಿ ಹೆಸರಿನಲ್ಲಿ ಜಾರಿಗೆ ಬಂದ ಮಸೂದೆಗಳು ಕೃಷಿಗೆ ಸಂಬಂಧಿಸಿದ ಮಸೂದೆಗಳಲ್ಲ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಸೂದೆಗಳು ರೈತ ವಿರೋಧಿಯಾಗಿದೆ. ಈ ಮೂರು ಕೃಷಿ ಮಸೂದೆಗಳನ್ನು ಹಿಂಪಡೆಯಬೇಕೆಂದಯ ಒತ್ತಾಯಿಸಿ ಚಳವಳಿಯನ್ನು ಆರಂಭಿಸಿದ್ದೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ದಲಿತ, ಕಾರ್ಮಿಕ, ಜನಪರ ಚಳುವಳಿ ಒಕ್ಕೂಟದವರು ಪಾಲ್ಗೊಂಡಿದ್ದರು.