ಮಂಗಳೂರಿನ ಅಗ್ನಿಶಾಮಕ ಸಿಬ್ಬಂದಿಗೆ ಮುಖ್ಯಮಂತ್ರಿ ಪದಕ
ಕರ್ನಾಟಕ ರಾಜ್ಯ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳಲ್ಲಿ ಉತ್ತಮ ಸೇವೆಯನ್ನು ಗುರುತಿಸಿ ಚಂದ್ರಹಾಸ್ ಆರ್ ಸಾಲ್ಯಾನ್ ಬೈಕಂಪಾಡಿ ಹಾಗೂ ನಿವೃತ್ತರಾದ ನೂತನ್ ಕುಮಾರ್ ಸಸಿಹಿತ್ಲು ಅವರು 2019ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಪದಕ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪದಕ ಪ್ರದಾನ ಮಾಡಿದರು. ಚಂದ್ರಹಾಸ್ ಆರ್. ಸಾಲ್ಯಾನ್ ಅವರು, ಬೈಕಂಪಾಡಿಯ ಮೀನಕಳಿಯ ನಿವಾಸಿಯಾಗಿದ್ದಯ, ಶ್ರೀರಾಮ ಸಾಲ್ಯಾನ್ ಹೆಜಮಾಡಿ ಹಾಗೂ ಶ್ರೀಮತಿ ಆನಂದಿ ಅವರ ಸುಪುತ್ರರಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿಯಾಗಿ ಕಳೆದ 24ವರ್ಷಗಳಿಂದ ಸೇವಯನ್ನು ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಪಾಂಡೇಶ್ವರ, ಕದ್ರಿ, ಶೃಂಗೇರಿಯ ಕೊಪ್ಪದಲ್ಲಿ ಸೇವೆ ಸಲ್ಲಿಸಿ ಇದೀಗ ಕುಶಾಲನಗರದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ನೂತನ್ ಕುಮಾರ್ ಅವರು ಪಾಂಡೇಶ್ವರ, ಉಡುಪಿ ಹಾಗೂ ಕುಂದಾಪುರದಲ್ಲಿ ಅಗ್ನಿಶಾಮಕದ ಪ್ರಮುಖ ಸಿಬ್ಬಂದಿಯಾಗಿ ನಿವೃತ್ತಿ ಹೊಂದಿದ್ದಾರೆ. ಕಳೆದ ೨೪ ವರ್ಷಗಳಿಂದ ಅಗ್ನಿಶಾಮಕ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ.