ಯಕ್ಷಮಿತ್ರರು ದುಬೈ ವತಿಯಿಂದ ಯಕ್ಷಗಾನದ ದ್ರುವತಾರೆ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ
ಯಕ್ಷಗಾನದ ದ್ರುವತಾರೆ, ಯಕ್ಷ ಭೀಮ, ಅಭಿನವ ವಾಲ್ಮೀಕಿ ಕೀರ್ತಿಶೇಷ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ಭಾವಪೂರ್ವ ಶ್ರದಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಯಕ್ಷಮಿತ್ರರು ದುಬೈ ಇವರ ವತಿಯಿಂದ ಈ ಕಾರ್ಯಕ್ರಮ ದುಬೈಯ ಹೋಟೆಲ್ ಒಂದರಲ್ಲಿ ಕಾರ್ಯಕ್ರಮ ನಡೆಯಿತು. ತಂಡದ ಹಿರಿಯ ಸದಸ್ಯರಾದ ವೆಂಕಟೇಶ ಶಾಸ್ತ್ರಿ, ಭವಾನಿ ಶಂಕರ್ ಶರ್ಮ, ಕೃಷ್ಣ ಪ್ರಸಾದ್ ರಾವ್ ದೀಪ ಬೆಳಗಿಸಿ ಪ್ರಾರ್ಥನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ತಂಡದ ಸ್ಥಾಪಕರಾದ ಚಿದಾನಂದ ಪೂಜಾರಿ, ಹಿರಿಯ ಸದಸ್ಯರಾದ ದಯಾ ಕಿರೋಡಿಯನ್, ಕಿಶೋರ್ ಗಟ್ಟಿ, ದಿನೇಶ್ ಪೂಜಾರಿ, ವಿಶ್ವನಾಥ್ ಶೆಟ್ಟಿ, ರವಿ ಕೋಟ್ಯಾನ್, ಜಯಂತ ಶೆಟ್ಟಿ, ಅಶೋಕ್ ತೋನ್ಸೆ, ಸಂದೀಪ್ ದೇವಾಡಿಗ, ರಮೇಶ್ ಸುವರ್ಣ, ಜನಾರ್ದನ ಪೂಜಾರಿ, ಪ್ರೇಮಶ್ರೀ ಪೂಜಾರಿ, ದೀಪ ಜಗನಾಥ್ , ಸ್ಮಿತಾ ಅಶೋಕ್ ತೋನ್ಸೆ ಉಪಸ್ಥಿತರಿದ್ದು ನುಡಿ ನಮನಗಳನ್ನು ಸಲ್ಲಿಸಿದರು.
ಶ್ರೀಯುತರು ಕಳೆದ ಎರಡು ದಶಕಗಳಿಂದ ಯಕ್ಷಮಿತ್ರರು ದುಬೈಯ ತಂಡಕ್ಕೆ ಕೊಟ್ಟ ಕೊಡುಗೆ ಅಪಾರ. ತಂಡದಿಂದ ಪ್ರದರ್ಶನಗೊಂಡ ಎಲ್ಲಾ ಯಕ್ಷಗಾನಕ್ಕೂ ಅರ್ಥ ಸಹಿತವಾದ ಕೃತಿಯನ್ನು ಒದಗಿಸಿಕೊಟ್ಟು, ಅದರಲ್ಲೂ ಕೆಲವು ಕಾರ್ಯಕ್ರಮಗಳಿಗೆ ಶ್ರೀಯುತರನ್ನು ದುಬೈಗೆ ಕರೆಸಿ ಅವರೇ ಭಾಗವತರಾಗಿ, ನಿರ್ದೇಶಕರಾಗಿ ಯಕ್ಶಮಿತ್ರರು ದುಬೈಯ ಯಕ್ಷಗಾನ ಕಾರ್ಯಕ್ರಮವನ್ನು ಯಶಶ್ವಿಗೊಳಿಸಿದ ಕೀರ್ತಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾರಿಗೆ ಸಲ್ಲುತ್ತದೆ.
ವರದಿ: ರಮೇಶ್ ಸುವರ್ಣ ವಿ4 ನ್ಯೂಸ್ ಯುಎಇ