ಲಂಡನ್ನಲ್ಲಿ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ ಸಮಾವೇಶ

ಲಂಡನ್ ನಗರದಲ್ಲಿ ವಿಶ್ವ ಪ್ರವಾಸೋದ್ಯಮ ಮಾರುಕಟ್ಟೆ ಸಮಾವೇಶದಲ್ಲಿ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಮಳಿಗೆಯನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಅಧ್ಯಕ್ಷರಾದ ಶ್ರೀ ಅಪ್ಪಣ್ಣ ರವರು ಉದ್ಘಾಟಿಸಿದರು.
ಇವರೊಂದಿಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವಿಜಯ್ ಶರ್ಮ, ನಿರ್ದೇಶಕರಾದ ಶ್ರೀಮತಿ ಸಿಂಧು ಬಿ ರೂಪೇಶ್ ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಪ್ರಧಾನ ವ್ಯವಸ್ಥಾಪಕರಾದ ಯುವರಾಜ್ ರವರು ಭಾಗವಹಿಸಿದ್ದರು. ಕೋವಿಡ್ ನಂತರ ಮೊದಲ ಬಾರಿ ನಡೆಯುತ್ತಿರುವ ವಿಶ್ವದರ್ಜೆಯ ಪ್ರವಾಸೋದ್ಯಮ ಸಮಾವೇಶದಲ್ಲಿ ವಿಶ್ವದ ನಾನಾ ದೇಶಗಳಿಂದ ಪ್ರವಾಸೋದ್ಯಮ ಉತ್ತೇಜಿಸಲು ಅನೇಕರು ಭಾಗವಹಿಸಿದ್ದರು