ವಾರಾಂತ್ಯದ ಕರ್ಫ್ಯೂಗೆ ವಿಟ್ಲ ಪೇಟೆ ಸಂಪೂರ್ಣ ಬಂದ್
ವಿಟ್ಲ: ವಿಟ್ಲದಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಪಟ್ಟಣ ಪಂಚಾಯಿತಿ ನಿರ್ಣಯದಂತೆ ಶನಿವಾರ ಮತ್ತು ಭಾನುವಾರ ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರಾಂತ್ಯ ಕರ್ಫ್ಯೂ ವಿಧಿಸಿದ್ದು, ಶನಿವಾರ ವಿಟ್ಲ ಪೇಟೆ ಸಂಪೂರ್ಣವಾಗಿ ಸ್ತಬ್ಧ ಗೊಂಡಿದೆ.
ಅಗತ್ಯ ವಸ್ತುಗಳು ಸೇರಿದಂತೆ ಎಲ್ಲಾ ಅಂಗಡಿಗಳು ಬಂದ್ ಮಾಡುವಂತೆ ಸೂಚಿಸಲಾಗಿತ್ತು. ಅದರಂತೆ ಯಾವುದೇ ಅಂಗಡಿಗಳು ಬಾಗಿಲು ತೆರೆದಿಲ್ಲ. ಜನರು ಪೇಟೆಗೆ ಕಾಲಿಟ್ಟಿಲ್ಲ. ತುರ್ತು ಅವಶ್ಯಕತೆ ತೆರಳುವರಿಗೆ ವಿನಾಯಿತಿ ನೀಡಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ಬೆಳಗ್ಗೆ 9 ಗಂಟೆವರೆಗೆ ಹಾಲಿನ ಅಂಗಡಿ ತೆರೆದಿತ್ತು. ಔಷಧಿ ಅಂಗಡಿ ಮಾತ್ರಗಳು ಎಂದಿನಂತೆ ಕಾರ್ಯಾಚರಿಸಿದೆ. ವಿಟ್ಲದ ಮಂಗಳೂರು ರಸ್ತೆಯ ಬೊಬ್ಬೆಕೇರಿಯಲ್ಲಿ ರಸ್ತೆಯನ್ನು ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದೆ. ಸರಿಯಾದ ಕಾರಣ ನೀಡಿದವರಿಗೆ ಮಾತ್ರ ತೆರಳಲು ಅವಕಾಶ ನೀಡಲಾಗಿದೆ.