ಹಾನಗಲ್ ಕ್ಷೇತ್ರದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಬಿರುಸಿನ ಪ್ರಚಾರ
ಉಪ ಚುನಾವಣಾ ನಡೆಯುತ್ತಿರುವ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರು ಸೋಮವಾರದಿಂದ ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಕ್ಷೇತ್ರದ ಎಲ್ಲಾ ಬ್ಲಾಕ್ , ವಾರ್ಡ್ ಗಳಿಗೂ ಪಾದಯಾತ್ರೆ ಮೂಲಕ ತೆರಲಿ ರಮೇಶ್ ಜಾರಕಿಹೋಳಿ ಮತ ಯಾಚನೆ ನಡೆಸುತ್ತಿದ್ದಾರೆ.ಕ್ಷೇತ್ರದಾದ್ಯಂತ ಮತದಾರರನ್ನು ಭೇಟಿಯಾಗುತ್ತಿರುವ ರಮೇಶ್ ಜಾರಕಿಹೋಳಿ ಅವರು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ.
ಉಪ ಚುನಾವಣೆಯಲ್ಲಿ ಕೊನೆಯ ಹಂತದ ಪ್ರಚಾರ ಮಾಡುವುದಾಗಿ ಚುನಾವಣೆ ಘೋಷಣೆ ಆದ ಸಂದರ್ಭದಲ್ಲಿ ಪ್ರಕಟಿಸಿದ್ದೆ , ಅದರಂತೆ ಕೊನೆ ಹಂತದ ಪ್ರಚಾರದಲ್ಲಿ ಭಾಗಿಯಾಗಿದ್ದೇನೆ, ಜನ ಬಿಜೆಪಿಗೆ ಪೂರ್ಣ ಬೆಂಬಲ ನೀಡಲಿದ್ದಾರೆ, ಮುಖ್ಯ ಮಂತ್ರಿ ಬೊಮ್ಮಾಯಿ ಅವರ ಕಾರ್ಯವೈಖರಿ ಬಗ್ಗೆ ಜನತೆಗೆ ವಿಶ್ವಾಸ ಮೂಡಿದೆ ಎಂದು ಜಾರಕಿಹೋಳಿ ಅಭಿಪ್ರಾಯ ಪಟ್ಟರು .ಮಾಜಿ ಸಚಿವ ರಮೇಶ್ ಜಾರಕಿಹೋಳಿ ಅವರಿಗೆ ರಾಜ್ಯ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಅಧ್ಯಕ್ಷ ಹಾಗೂ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ಎಂ.ಅಪ್ಪಣ್ಣ ಅವರು ಸಾಥ್ ನೀಡುತ್ತಿದ್ದಾರೆ.ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿ ಪರವಾದ ಅಲೆ ಇರುವುದಾಗಿ ಎಂ.ಅಪ್ಪಣ್ಣ ಅವರು ಅಭಿಪ್ರಾಯ ಪಟ್ಟಿದ್ದಾರೆ.