ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ
ಮಂಗಳೂರು: ಶ್ರೀನಿವಾಸ್ ವಿಶ್ವವಿದ್ಯಾಲಯದ ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಆಂಡ್ ಹ್ಯೂಮಾನಿಟಿಸ್, ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಇನ್ಫಾರ್ಮೇಶನ್ ಸೈನ್ಸ್, ಕಾಲೇಜ್ ಆಪ್ ಏವಿಯೇಶನ್ ಸ್ಟಡೀಸ್ನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮವನ್ನು ಪಾಂಡೇಶ್ವರದ ಸಿಟಿ ಕ್ಯಾಂಪಸ್ನಲ್ಲಿ ಆಯೋಜಿಸಲಾಯಿತು.
ಸಹಕುಲಾಧಿಪತಿಗಳಾದ ಡಾ. ಎ. ಶ್ರೀನಿವಾಸ್ ರಾವ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಈ ವೇಳೇ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ನಿಜ ಜೀವನದಲ್ಲಿ ಹಾಗೂ ಪ್ರಸ್ತುತ ಸಮಾಜಕ್ಕೆಬೇಕಾಗಿರುವ ಅಂಶಗಳನ್ನು ನಮ್ಮ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಸಹಕಾರ ದೊರಕಲಿದೆ ಎಂದರು.
ಕುಲಪತಿಡಾ. ಪಿ. ಎಸ್ ಐತಾಳ್ ಮಾತನಾಡಿ, ಶ್ರೀನಿವಾಸ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳನ್ನು ಮುಂದಿನ ಸಮಾಜಕ್ಕಾಗಿ ರೂಪಿಸುತ್ತಿದೆ. ಮುಂದಿನ ದಿನಗಳಲ್ಲಿ ಬೆಳೆಯುತ್ತಿರುವ ಉದ್ದಿಮೆಗಳಿಗೆ ಸರಿಸಮವಾಗಿ ಕಾರ್ಯ ಮಾಡಲು ಉತ್ತೇಜನೆಯನ್ನು ನೀಡುತ್ತಿದೆ ಎಂದರು. ಈ ವೇಳೆ ವಿದ್ಯಾರ್ಥಿಗಳು ಕಾಲೇಜಿನ ನೀತಿಗಳಿಗಣುವಾಗಿ ಕಾರ್ಯನಿರ್ವಹಿಸುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಿದರು.
ಈ ವೇಳೆ ವೇದಿಕೆಯಲ್ಲಿ ಕಾಲೇಜ್ ಆಫ್ ಸೋಶಿಯಲ್ ಸೈನ್ಸ್ ಆಂಡ್ ಹ್ಯೂಮಾನಿಟಿಸ್ನ ಡೀನ್ ಡಾ. ಲವೀನ ಡಿಮೆಲ್ಲೋ, ಕಾಲೇಜ್ ಆಫ್ ಕಂಪ್ಯೂಟರ್ ಸೈನ್ಸ್ ಅಂಡ್ ಇನ್ಫಾರ್ಮೇಶನ್ ಸೈನ್ಸ್ನಡೀನ್ ಪೆÇ್ರ. ಸುಬ್ರಮಣ್ಯಭಟ್, ಕಾಲೇಜ್ ಆಪ್ ಏವಿಯೇಶನ್ ಸ್ಟಡೀಸ್ನಡೀನ್ ಪೆÇ್ರ. ಪವಿತ್ರಕುಮಾರಿ ಉಪಸ್ಥಿತರಿದ್ದರು.

















