Home 2021 August (Page 8)

ಮೂಡುಬಿದಿರೆಯ ಪುರಸಭೆ- ಗ್ರಾ.ಪಂ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಕಾರ್ಯಕ್ರಮ

ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ಮೂಲ್ಕಿ-ಮೂಡುಬಿದಿರೆ ಮಂಡಲದ ವತಿಯಿಂದ ಪುರಸಭೆ ಮತ್ತು ಗ್ರಾ.ಪಂಚಾಯತ್ ಸದಸ್ಯರಿಗೆ ಪ್ರಶಿಕ್ಷಣ ವರ್ಗ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ  ನಡೆಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಂಘಟನೆಯ ಆಧಾರ ಕಾರ್ಯಕರ್ತರು. ಕಾರ್ಯಕರ್ತರನ್ನು ಸಜ್ಜುಗೊಳಿಸಬೇಕು ಮತ್ತು ವಿಚಾರವಂತರಾಗಿ

ಆ.27ರಂದು ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನಕ್ಕೆ ಭೂಮಿ ಪೂಜೆ

ಬಹುನಿರೀಕ್ಷಿತ ಇಸ್ಕಾನ್ ಶ್ರೀ ರಾಧಾ ಗೋವಿಂದ ದೇವಸ್ಥಾನವು ಮಂಗಳೂರಿನ ಪ್ರಶಾಂತವಾದ ಕುಳಾಯಿ ಕೋಡಿಕೆರೆ ಎಂಬಲ್ಲಿ 1.5 ಎಕರೆ ಭೂಮಿಯಲ್ಲಿ ನಿರ್ಮಾಣವಾಗಲಿದೆ. ಆಗಸ್ಟ್ 27ರಂದು ಭೂಮಿ ಪೂಜೆಯನ್ನು ನೆರವೇರಿಸಲು ತೀರ್ಮಾನಿಸಿದ್ದಾರೆ. ಈ ಬಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಶ್ರೀ ರಾಧಾ ಗೋವಿಂದ ದೇವಸ್ಥಾನದ ನಾಮ ನಿಷ್ಠ ದಾಸ್

ಕೊಲೆ ಯತ್ನ ಪ್ರಕರಣ – 6 ಆರೋಪಿಗಳ ಬಂಧನ

ಪುತ್ತೂರು: ಆ 24 ರಂದು ರಾತ್ರಿ ಪುತ್ತೂರಿನ ದರ್ಬೆಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್’ಹಾಕಿಸುತ್ತಿದ್ದ ಸಂದರ್ಭ ತಂಡವೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಕೃತ್ಯವೊಂದರ ಸಾಕ್ಷಿ ನುಡಿಯುವ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ತನಿಖೆಯಿಂದ

ಲೈನ್ ಮ್ಯಾನ್ ಕೆಲಸದ ಜೊತೆಗೆ ಪರಿಸರ ಉಳಿಸುವ ಮಹತ್ಕಾರ್ಯ

ಪರಿಸರ ಉಳಿಸಬೇಕು, ಪರಿಸರ ಬೆಳೆಸಬೇಕು ಎನ್ನುವುದು ಕೇವಲ ಭಾಷಣ ಹಾಗೂ ಸೆಮಿನಾರ್ ಗಳಿಗೆ ಸೀಮಿತವಾಗಿದೆ. ಫೀಲ್ಡ್ ಗೆ ಇಳಿದು ಪ್ರಕೃತಿಯನ್ನು ಸಂರಕ್ಷಿಸುವ ಕೆಲಸಗಳು ಕೇವಲ ಬೆರಳೆಣಿಕೆಯ ಜನರಿಂದ ಮಾತ್ರ ಆಗುತ್ತಿದೆ. ಇಂಥಹುದೇ ಒರ್ವ ಪರಿಸರ ಸಂರಕ್ಷಕ ಹಾಗೂ ಕೃತಕ ಕಾಡುಗಳ ಸೃಷ್ಟಿಕರ್ತ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದಾರೆ. ಮನೆಯ ಸಣ್ಣ ಜಾಗದಲ್ಲೇ ದಟ್ಟ ಕಾಡುಗಳನ್ನು

ಪುತ್ತೂರಿನಲ್ಲಿ ಆರೋಗ್ಯ ರಕ್ಷಾ ಸಮಿತಿ ವಾರ್ಷಿಕ ಮಹಾಸಭೆ

ಪುತ್ತೂರು: ಕೋವಿಡ್ ಬಂದ ಮೇಲೆ ಸಾರ್ವಜನಿಕರಲ್ಲಿ ಸರಕಾರಿ ಆಸ್ಪತ್ರೆಯ ಬಗ್ಗೆ ಹೆಚ್ಚು ವಿಶ್ವಾಸ ಬರುವಂತೆ ನಮ್ಮ ವೈದ್ಯರು ಮಾಡಿದ್ದಾರೆ ಈ ನಿಟ್ಟಿನಲ್ಲಿ ಅವರಿಗೆ ಮೊದಲಾಗಿ ಅಭಿನಂದನೆ ಸಲ್ಲಿಸಬೇಕು. ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ಕಡಿಮೆ ಶೇ.1.94 ಪಾಸಿಟಿವ್ ರೇಟ್ ಇರುವುದು ನಮ್ಮ ತಾಲೂಕಿನಲ್ಲಿ ಈ ನಿಟ್ಟನಲ್ಲಿ ಮುಂಬರುವ ದಿನಗಳಲ್ಲಿ ಶಾಲೆಯನ್ನು

ಪಣಂಬೂರಿನ ಸಮುದ್ರ ತೀರದಲ್ಲಿ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ:ಮಹಾನಗರ ಪಾಲಿಕೆ ಸಿಬ್ಬಂದಿಗಳಿಂದ ಸ್ವಚ್ಚತಾ ಕಾರ್ಯ

ಮಂಗಳೂರಿನ ಪಣಂಬೂರಿನ ಸಮುದ್ರ ತೀರದಲ್ಲಿ ತ್ಯಾಜ್ಯ ರಾಶಿಗೆ ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ. ವಿ4 ನ್ಯೂಸ್‌ನ ವರದಿಗೆ ಎಚ್ಚೆತ್ತು ಮಂಗಳೂರು ಮಹಾನಗರ ಪಾಲಿಕೆ ಸ್ವಚ್ಛತಾ ಕಾರ್ಯವನ್ನ ಕೈಗೊಂಡಿದೆ. ಇನ್ನು ನಗರ ಪಾಲಿಕೆ ಸಿಬ್ಬಂದಿಗಳು ಸ್ವಚ್ಛ ಕಾರ್ಯವನ್ನು ಕೈಗೊಂಡಿದ್ದಾರೆ. ಪಣಂಬೂರು ಸಮುದ್ರ ತೀರದಲ್ಲಿ ಕಳೆದ ಮೂರು ದಿನಗಳಿಂದ ಎಲ್ಲೆಂದರಲ್ಲಿ ಕಸದ ರಾಶಿ

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಎಎಚ್‌ಪಿಐನಿಂದ 2021 ರ ಸಾಲಿನ ನರ್ಸಿಂಗ್ ಎಕ್ಸಲೆನ್ಸ್ ಪ್ರಶಸ್ತಿ

ಮಣಿಪಾಲ: ಎಎಚ್‌ಪಿಐ -ಅಸೋಸಿಯೇಷನ್ ​​ಆಫ್ ಹೆಲ್ತ್‌ಕೇರ್ ಪ್ರೊವೈಡರ್ಸ್ (ಭಾರತ) ದಿಂದ ಆರೋಗ್ಯದ ಶ್ರೇಷ್ಠತೆಗಾಗಿ ಕೊಡಲ್ಪಡುವ 2021 ರ ಸಾಲಿನ ನರ್ಸಿಂಗ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದಿದೆ. ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ, ಮಣಿಪಾಲದ ಡೀನ್ ಡಾ. ಶರತ್ ಕೆ ರಾವ್ ಅವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನರ್ಸಿಂಗ್ ಸೇವೆಗಳ ಮುಖ್ಯಸ್ಥರಾದ ಶ್ರೀಮತಿ ಶುಭ

ಅಪ್ಘಾನಿಸ್ತಾನದಿಂದ ಮಂಗಳೂರಿಗೆ ಆಗಮಿಸಿದ ಡೆಮ್ಸಿ ಮೊಂತೆರೋ

ಉಳ್ಳಾಲ ಉಳಿಯದ ನಿವಾಸಿ ಮೆಲ್ವಿನ್ ಮೊಂತೇರೊ ಅಫ್ಘಾನಿಸ್ತಾನದಿಂದ ಕಳೆದ ವಾರ ಪಾರಾಗಿ ಬಂದಿದ್ದರು. ಇದೀಗ ಉದ್ಯೋಗಕ್ಕಾಗಿ ತೆರಳಿ ಸಿಕ್ಕಿಬಿದ್ದಿದ್ದ ಮೆಲ್ವಿನ್ ಸಹೋದರ ಡೆಮ್ಸಿ ಮೊಂತೆರೊ ಕೂಡ ಇಂದು ಅಪ್ಘನ್ ರಾಷ್ಟ್ರದಿಂದ ತಾಯ್ನಾಡಿಗೆ ವಾಪಸಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಕಾಬೂಲಿನ ಮಿಲಿಟರಿ ಬೇಸ್ ನಲ್ಲಿ ಇಕೊಲೊಗ್ ಇಂಟರ್ನ್ಯಾಷನಲ್ ಕಂಪನಿಯಲ್ಲಿ ಎ.ಸಿ

ಮಂಗಳೂರಿನ ಖಾಸಗಿ ಕಟ್ಟಡದ ನೆಲಮಹಡಿಯಲ್ಲಿ ವ್ಯಕ್ತಿಯ ಶವ ಪತ್ತೆ

ಮಂಗಳೂರಿನ ರಾವ್ ಆಂಡ್ ರಾವ್ ಸರ್ಕಲ್ ಬಳಿಯ ಖಾಸಗಿ ಸ್ಟಾರ್ ಕಟ್ಟಡದ ನೆಲ ಮಹಡಿಯಲ್ಲಿ ಗಂಡಸಿನ ಶವ ಪತ್ತೆಯಾಗಿದೆ. ಸುಮಾರು 45ವರ್ಷ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಬಂದರು ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಪುತ್ತೂರು ದೇವಳದ ವಠಾರದಲ್ಲಿ ಮೃತದೇಹ ಪತ್ತೆ

ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವಿಟ್ಲ ಮೂಲದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಪುತ್ತೂರು: ಮಹಾಲಿಂಗೇಶ್ವರ ದೇವಳ ವಠಾರದಲ್ಲಿನ ಪಂಚಾಕ್ಷರಿ ಮಂಟಪದಲ್ಲಿ ವೃದ್ದರೊಬ್ಬರು ಅಸು ನೀಗಿದ ಘಟನೆ ನಡೆದಿದೆ. ಮೃತರನ್ನು ಕೇಶವ ನಾಯ್ಕ ಎಂದು ಗುರುತಿಸಲಾಗಿದೆ. ಮೃತರ ಸಂಬಂಧಿಕರು ವಿಟ್ಲ ಮೂಲದವರು