Home 2022 November (Page 7)

ಕಸದ ಗುಂಡಿಯಲ್ಲಿ 2 ದಿನದ ಮಗು ಪತ್ತೆ

ಬೆಳಗಾವಿ: ಎರಡು ದಿನದ ಹಸುಗೂಸನ್ನು ಬಾಸ್ಕೆಟ್​ನಲ್ಲಿ ಹಾಕಿ ರಸ್ತೆ ಪಕ್ಕದ ಗುಂಡಿಯಲ್ಲಿ ಬಿಟ್ಟು ಹೋದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಕೆಎಲ್‌ಇ ಸ್ಕೂಲ್ ಬಳಿ ನಡೆದಿದೆ. ಕೇವಲ 2 ದಿನದ ‌ಹಸುಗೂಸನ್ನು ಗುಂಡಿಯಲ್ಲಿ ಬಿಸಾಡಿ ಹೋಗಿದ್ದಾರೆ. ಸದ್ಯ ರಸ್ತೆ ಪಕ್ಕದ ಗುಂಡಿಯಲ್ಲಿದ್ದ ಮಗುವನ್ನ ಸ್ಥಳೀಯರು ರಕ್ಷಿಸಿ ಆಸ್ಪತ್ರಗೆ ದಾಖಲಿಸಿದ್ದಾರೆ. ಸ್ಥಳಕ್ಕೆ

ಕತಾರ್: ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ತುಳುನಾಡಿನ ಮಹಿಳೆ ಆಯ್ಕೆ.

ಬಂಟ್ವಾಳ: ಕತಾರ್ ಪಿಫಾ ವರ್ಲ್ಡ್ ಕಪ್ ಮೆಡಿಕಲ್ ಟೀಮಿಗೆ ಸೇವೆ ಸಲ್ಲಿಸಲು ತುಳುನಾಡಿನ ಮಹಿಳೆಯೊರ್ವರು ಆಯ್ಕೆಯಾಗಿದ್ದಾರೆ.ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಕುಡಂಬೆಟ್ಟು ಗ್ರಾಮದ ದೋಟ ದರ್ಖಾಸು ನಿವಾಸಿ ನವೀನ್ ಪೂಜಾರಿಯವರ ಪತ್ನಿ ಪ್ರತಿಭಾ ಎನ್.ದರ್ಖಾಸು ಎಂಬವರು ಇದೀಗ ಕತಾರಿನ ವರ್ಲ್ಡ್ ಕಪ್ ಮೆಡಿಕಲ್ ಟೀಮಿನಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾದವರು. ಈ ಮೂಲಕ ಇವರು

ADGP ಅಲೋಕ್​ ಕುಮಾರ್​ಗೆ ಬೆದರಿಕೆ

ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣೆಯ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟದ ಹಿಂದೆ ಉಗ್ರರ ನಂಟು ಇರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ಸ್ಫೋಟ ಪ್ರಕರಣದ ಇಡೀ ದೇಶದಾದ್ಯಂತ ಸದ್ದು ಮಾಡುತ್ತಿದೆ. ಇದರ ಮಧ್ಯೆ ಇದೀಗ ಆರೋಪಿ ಶಾರೀಕ್​​ನನ್ನು ಬೆಂಬಲಿಸಿ ಇಸ್ಲಾಮಿಕ್​​​ ರೆಸಿಸ್ಟೆನ್ಸ್​ ಕೌನ್ಸಿಲ್​ ಮಾಧ್ಯಮ ಹೇಳಿಕೆಯೊಂದನ್ನು

ಉಡುಪಿ : ರೋಸ್ ಸಮಾರಂಭದಲ್ಲಿ ಕುಸಿದು ಬಿದ್ದು ಯುವತಿ ಮೃತ್ಯು

ಉಡುಪಿಯಲ್ಲಿ ನಡೆದ ರೋಸ್ ಸಮಾರಂಭದಲ್ಲಿ ಯುವತಿಯೊಬ್ಬಳು ಕುಸಿದು ಬಿದ್ದು ಸಾವನ್ಪದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಿವಾಸಿ ಜೋಸ್ನಾ ಲೂವಿಸ್ (23) ಮೃತ ಯುವತಿಯಾಗಿದ್ದು ಈಕೆ, ಸಂಬಂಧಿಕರ ರೋಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದಳು. ಕೊಳಲಗಿರಿ ಹಾವಂಜೆಯ ತನ್ನ ಸಂಬಂಧಿಕರ ಮನೆಯಲ್ಲಿ ನಡೆದ ರೋಸ್ ಕಾರ್ಯಕ್ರಮದಲ್ಲಿ ರೋಸ್ ಸಂಪ್ರದಾಯದಂತೆ ತರಕಾರಿ

ನ.26ಕ್ಕೆ ಕಟಪಾಡಿ ತ್ರಿಶಾ ಕಾಲೇಜಿನ ವಿದ್ಯಾರ್ಥಿ ನಿಲಯ ಉದ್ಘಾಟನೆ

ವಿದ್ಯೆ ಎನ್ನುವುದು ವ್ಯಾಪಾರವಲ್ಲ, ಕಲಿಯಲು ಆಸಕ್ತಿ ಹೊಂದಿರುವ ಬಡ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆ ಯವತಿಯಿಂದ ವಿದ್ಯಾರ್ಥಿ ವೇತನ ಸಹಿತ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ದೊರಕುವ ಸವಲತ್ತುಗಳನ್ನು ಸಂಸ್ಥೆ ನಿಗ ವಹಿಸಿ ಅವರಿಗೆ ತೆಗೆಸಿಕೊಳ್ಳುವ ಮೂಲಕ ಮಕ್ಕಳ ವಿದ್ಯಾರ್ಜನೆ ಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂಬುದಾಗಿ ಸಂಸ್ಥೆಯ ಪ್ರಾಂಶುಪಾಲ ಗುರುಪ್ರಸಾದ್

ನಾಲ್ಕು ವಾರ ಪೂರ್ತಿಗೊಳಿಸಿದ ಹಗಲು ರಾತ್ರಿ ಧರಣಿ

ಟೋಲ್ ಗೇಟ್ ತೆರವಿಗೆ ಆಗ್ರಹಿಸಿ‌ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಇಂದು 28 ದಿನಗಳನ್ನು ಪೂರ್ಣಗೊಳಿಸಿತು. ವಿವಿಧ ರಾಜಕೀಯ ಪಕ್ಷ ಹಾಗೂ ಸಂಘಟನೆಗಳ ಕಾರ್ಯಕರ್ತರು ಇಂದಿನ ಧರಣಿಯಲ್ಲಿ ಪಾಲ್ಗೊಂಡರು. ಅಧಿಸೂಚನೆ ಹೊರಟು ಹನ್ನೆರಡು ದಿನ ದಾಟಿದರೂ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ದ ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.

3 ದಿನಗಳಲ್ಲಿ ಟೋಲ್‍ಗೇಟ್ ತೆರವು ಅಂತಿಮ ಆದೇಶ : ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್ ಭರವಸೆ

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚಲು ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಒಂದು ತಿಂಗಳು ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಹಾಗೂ ಟೋಲ್ ಗೇಟ್ ತೆರವು ಆದ್ಯಾದೇಶ ಹೊರಟು ಹತ್ತು ದಿನಗಳು ದಾಟಿದರೂ ಟೋಲ್ ಸಂಗ್ರಹ ಸ್ಥಗಿತಗೊಳಿಸದಿರುವ ಕುರಿತು ಚರ್ಚಿಸಲು ದ.ಕ. ಜಿಲ್ಲಾ ಜಾತ್ಯಾತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಜಂಟಿ ವೇದಿಕೆಯ ನಿಯೋಗ ದ.ಕ.

ಪಾದಚಾರಿಗೆ ಬೈಕ್ ಢಿಕ್ಕಿ, ಗಾಯಾಳು ಆಸ್ಪತ್ರೆಯಲ್ಲಿ ಮೃತ್ಯು

ಎರ್ಮಾಳು ಕಲ್ಯಾಣ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪಾದಚಾರಿಗೆ ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಆಸ್ಪತ್ರೆಯಲ್ಲಿ ಮೃತ್ತ ಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.ಮೃತ್ತ ವ್ಯಕ್ತಿಯನ್ನು ಉತ್ತರ ಕನ್ನಡ ಮೂಲದ 46 ವರ್ಷದ ದೇವಪ್ಪ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡ ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ

500 KG ಗಾಂಜಾ ಇಲಿ ತಿಂದಿದೆ!’ ವಿಚಿತ್ರ ಹೇಳಿಕೆ ನೀಡಿದ ಯುಪಿ ಪೊಲೀಸರು

ಶೇರ್‌ಗಡ್‌ ಮತ್ತು ಹೈವೇ ಪೊಲೀಸ್ ಠಾಣೆಯ ಗೋದಾಮುಗಳಲ್ಲಿ ವಶಕ್ಕೆ ಪಡೆದು ಇರಿಸಿದ್ದ 500 ಕೆಜಿಗೂ ಹೆಚ್ಚು ಗಾಂಜಾವನ್ನು ಇಲಿಗಳು ತಿಂದಿವೆ ಎಂದು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್-1985 (ಎನ್‌ಡಿಪಿಎಸ್) ಅಡಿಯಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಉತ್ತರ ಪ್ರದೇಶದ ಮಥುರಾ ಪೊಲೀಸರು ವರದಿ ಸಲ್ಲಿಸಿದ್ದಾರೆ. ಈ ವರ್ಷದ ಆರಂಭದಲ್ಲಿ

ಉಚ್ಚಿಲ ಶ್ರೀ ಮಹಾಲಕ್ಷ್ಮೀಯ ದರ್ಶನ ಪಡೆದ ಗೃಹ ಸಚಿವರು

ಇತ್ತೀಚೆಗೆ ನವಿಕೃತಗೊಂಡ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ರಾಜ್ಯ ಗ್ರೃಹ ಸಚಿವ ಆರಗ ಜ್ಞಾನೇಂದ್ರರವರು ಬುಧವಾರ ಸಂಜೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮಿಯ ದರ್ಶನ ಪಡೆದರು.ದೇವಳದ ವತಿಯಿಂದ ಅವರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಮುಖ್ಯ ಅರ್ಚಕ ಕೆ ವಿ ರಾಘವೇಂದ್ರ ಉಪಾಧ್ಯಾಯ ಹಾಗೂ ವಿಷ್ಣುಮೂರ್ತಿ ಉಪಾಧ್ಯಾಯರವರು