Home 2023 May (Page 22)

ಸಕಲೇಶಪುರ : 99 ವರ್ಷದ ವೃದ್ಧೆ ಸಿದ್ದಮ್ಮ ನಡೆದು ಕೊಂಡು ಬಂದು ಮತದಾನ

ಸಕಲೇಶಪುರ ಆಲೂರು ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಇಂದು 90 ವರ್ಷ ಮೇಲ್ಪಟ್ಟ ವೃದ್ದೆಯರು ಮತದಾನ ಮಾಡಿದರು.ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯ ಹಸಗವಳ್ಳಿಯ ರಂಗನಾಥ ಪ್ರೌಡಶಾಲೆಯ ಮತಗಟ್ಟೆ ಸಂಖ್ಯೆ 135 ರಲ್ಲಿ 99 ವರ್ಷದ ವೃದ್ಧೆ ಸಿದ್ದಮ್ಮ ನೆಡೆದು ಕೊಂಡು ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. ಯಸಳೂರು ಹೋಬಳಿಯ ಚಂಗಡಹಳ್ಳಇ ಪಂಚಾಯತಿ ವ್ಯಾಪ್ತಿಯ ಬಸ್ಕಲ್

ಹೆಜಮಾಡಿ : ಮತ ಚಲಾಯಿಸಿದ ಕೆಲವೇ ಹೊತ್ತಲ್ಲಿ ವೃದ್ಧೆ ವಿಧಿವಶ

ತನ್ನ ಹಕ್ಕನ್ನು ಚಲಾಯಿಸಿ ಮನೆಗೆ ತೆರಳಿದ 93ರ ಹರೆಯದ ವಯೋವೃದ್ದೆಯೊರ್ವರು ಹೃದಯಾಘಾತಕ್ಕೆ ಬಲಿಯಾದ ಘಟನೆ ಹೆಜಮಾಡಿಯಲ್ಲಿ ನಡೆದಿದೆ. ಮೃತರು ಹೆಜಮಾಡಿ ನಿವಾಸಿ ಮರಿಯಮ್ಮ 94 ವರ್ಷ ಮುಂಜಾನೆ ಹೆಜಮಾಡಿಯ ಪೇಟೆ ಸಮೀಪದ ಸರ್ಕಾರಿ ಶಾಲಾ ಬೂತಲ್ಲಿ ತನ್ನವರೊಂದಿಗೆ ವೀಲ್ಹ್ ಚಯರ್ ಸಹಕಾರದಿಂದ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದರು. ವಿಶೇಷವೆಂದರೆ ವಯೋವೃದ್ದೆಯನ್ನು ಕಂಡ

ಮತದಾನದ ಹಕ್ಕನ್ನು ಚಲಾಯಿಸಿದ ಚಿತ್ರನಟ, ನಿರ್ದೇಶಕ ರಕ್ಷಿತ್ ಶೆಟ್ಟಿ

ಉಡುಪಿ: ಚಿತ್ರನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಉಡುಪಿಯಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, “ಮತದಾನ ಮಾಡುವುದು ಬಹಳ ಮುಖ್ಯ. ಅದು ನಮ್ಮ ಜವಾಬ್ದಾರಿ. ನನಗೆ ಪಕ್ಷದ ಮೇಲೆ ಒಲವಿದೆ. ಪ್ರಚಾರಕ್ಕೆ ಹೋಗಲ್ಲ. ಆ ಕ್ಷೇತ್ರದಲ್ಲಿ ಜನರಿಗಾಗಿ ಕೆಲಸ ಮಾಡುವ ನಾಯಕರನ್ನು ಆಯ್ಕೆ ಮಾಡುವುದು ಒಳ್ಳೆಯದು.” ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ಬೇಲೂರು : ಮತದಾನದ ನಂತರ ವ್ಯಕ್ತಿಗೆ ಹೃದಯಘಾತ

ಬೇಲೂರು ತಾಲೂಕಿನ ಕೋಗಿಲೆ ಮನೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಚಿಕ್ಕೋಲೆ ಗ್ರಾಮದ ಮತಗಟ್ಟೆ ಸಂಖ್ಯೆ 211 ರಲ್ಲಿ ಮತದಾನ ಮಾಡಿದ ಜಯಣ್ಣ ಎಂಬುವ 48 ವರ್ಷದ ವ್ಯಕ್ತಿ ಮತದಾನದ ನಂತರ ಮತದಾನ ಕೇಂದ್ರದ ಹೊರಗಡೆ ಹೃದಯಘಾತದಿಂದ ಮೃತಪಟ್ಟಿದ್ದಾರೆ

ದಿ.ಆಸ್ಕರ್ ಫೆರ್ನಾಂಡಿಸ್ ಪತ್ನಿ ಬ್ಲೋಸಮ್ ಮತದಾನ

ಕೇಂದ್ರದ ಮಾಜಿ ಸಚಿವರಾಗಿದ್ದ ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರ ಪತ್ನಿ ಬ್ಲೋಸಮ್ ಮತ್ತು ಮಗಳು ಓಶಾನಿ ಫರ್ನಾಂಡಿಸ್ ಅವರು ಮತಚಲಾಯಿಸಿದರು. ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮತದಾನ

ಕೋಟ:ಉಡುಪಿ ಜಿಲ್ಲೆಯ ಕುಂದಾಪುರ ವಿಧಾನ ಸಭಾ ಕ್ಷೇತ್ರದ ಕೋಟತಟ್ಟು ಗ್ರಾಮ ಪಂಚಾಯಿತಿನ ಬೂತ್ ನಂಬರ್ 165 ರಲ್ಲಿ ಸರತಿ ಸಾಲಿನಲ್ಲಿ ನಿಂತು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮತದಾನ ಮಾಡಿದರು.

ಬೈಂದೂರು : ಮತ ಚಲಾಯಿಸಿದ ರಿಷಬ್ ಶೆಟ್ಟಿ

ಬೈಂದೂರು ವಿಧಾನಸಭಾ ಕ್ಷೇತ್ರದ ಕೆರಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೂತ್ನಲ್ಲಿ ಮತ ಚಲಾಯಿಸಿದ ಅವರು, ಮತದಾನ ನಮ್ಮೆಲ್ಲರ ಹಕ್ಕು, ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಯಾಗಿರುವುದು ನಮಗೆ ಹೆಮ್ಮೆ. ಹಾಗೆಯೇ, ಮತ ಹಾಕುವುದು ನಮ್ಮ ಹಕ್ಕು ಮಾತ್ರವಲ್ಲ, ಜವಾಬ್ದಾರಿ ಕೂಡ.. ಉತ್ತಮ ಸಮಾಜದ ನಿರ್ಮಾಣಕ್ಕಾಗಿ, ಸಮರ್ಥ ಜನಪ್ರತಿನಿಧಿಯ ಆಯ್ಕೆಗಾಗಿ ತಪ್ಪದೇ ಮತ ಚಲಾಯಿಸಿ

ಮತದಾನ ಮಾಡದವರಿಗೆ ರಾಜ್ಯದ ಕೆಲವು ಪ್ರವಾಸಿ ತಾಣಗಳ ಪ್ರವೇಶ ನಿರ್ಬಂಧ

ಮತದಾನ ಮಾಡದವರಿಗೆ ರಾಜ್ಯದ ಕೆಲವು ಪ್ರವಾಸಿ ತಾಣಗಳಲ್ಲಿ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಮತದಾನ ದಿನದ ಮೊದಲೇ ಕೆಲವು ಸ್ಥಳಗಳಲ್ಲಿ ಮೇ 10ರಂದು ಪ್ರವೇಶವಿಲ್ಲ ಎಂಬ ಬೋರ್ಡ್‌ ಲಗತ್ತಿಸಲಾಗಿದ್ದು, ಪ್ರಮುಖವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಬೆಳಗ್ಗೆಯಿಂದಲೇ ಇಲ್ಲಿ ಪ್ರವೇಶಕ್ಕೆ