ಕಡಬ : ಕಾರು, ಬೈಕ್ ಡಿಕ್ಕಿ-ಬೈಕ್ ಸವಾರರಿಗೆ ಗಾಯ
ಕಡಬ: ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಮರ್ದಾಳ ಸಮೀಪದ ಕೆಂಚಭಟ್ರೆ ಎಂಬಲ್ಲಿ ನಡೆದಿದೆ.
ನೆಕ್ಕಿತ್ತಡ್ಕ ನಿವಾಸಿ ಜಗನ್ನಾಥ ರೈ ಎಂಬವರು ತನ್ನ ಕಾರಿನಲ್ಲಿ ಕಡಬದಿಂದ ಮರ್ದಾಳಕ್ಕೆ ಹೋಗುತ್ತಿದ್ದ ವೇಳೆ ಮರ್ದಾಳದಿಂದ ಕಡಬ ಕಡೆಗೆ ಬರುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಬೈಕ್ ಸವಾರ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನದಿಂದ ಕಾರಿಗೆ ಡಿಕ್ಕಿಯುಂಟಾಗಿದ್ದು, ಕಾರು ಚಾಲಕ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಅಫ್ರಾನ್ ಹಾಗೂ ಸಹಸವಾರ ಸೈಯ್ಯದ್ ರುವನ್ ಎಂಬವರು ಗಾಯಗೊಂಡಿದ್ದಾರೆ. ಘಟನೆ ಕುರಿತು ಕಾರು ಚಾಲಕ ಜಗನ್ನಾಥ ರೈಯವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.