ಮಂಗಳೂರು:ಕರಾವಳಿ ಮೈದಾನದಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭ

ಕರಾವಳಿಯ ಪ್ರಮುಖ ಜನಾಕರ್ಷಣೆಯ ಮೇಳ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭವಾಗಿದ್ದು, ಕರಾವಳಿಯ ಉತ್ಸವ ಮೈದಾನದಲ್ಲಿ ವೈಭವದ ಚಾಲನೆ ದೊರಕಿದೆ. 17 ವರ್ಷಗಳಿಂದ ಮಂಗಳೂರಿಗೆ ಬರುತ್ತಿರುವ ರಾಷ್ಟ್ರೀಯ ಗ್ರಾಹಕರ ಮೇಳದಲ್ಲಿ ಈ ಬಾರಿ ಅಂತರ್ಜಲ ಸುರಂಗ ಮಾರ್ಗದಲ್ಲಿ ನಾನಾ ಪ್ರಭೇದದ ಮೀನುಗಳೊಂದಿಗೆ ರೋಬಾಟಿಕೆ ಅನಿಮಲ್ ಶೋಗೆ ಆದ್ಯತೆ ನೀಡಲಾಗಿದೆ. ಗ್ರಾಹಕರು ಅಂತರ್ಜಲ ಸುರಂಗ ಮಾರ್ಗದ ಮೂಲಕ ಮೇಳಕ್ಕೆ ಪ್ರವೇಶ ಪಡೆಯುವಾಗ ಸುಮಾರು 200ಕ್ಕೂ ಅಧಿಕ ಮೀನುಗಳ ಪರಿಚಯವಾಗಲಿದೆ.

ಇದರ ಜೊತೆ ರೋಬಾಟಿಕ್ ಅನಿಮಲ್ ಶೋನಲ್ಲಿ ದೈತ್ಯಾಕಾರದ ವನ್ಯಮೃಗಗಳು ಹಾಗೂ ಅವುಗಳ ಘರ್ಜನೆ ದಟ್ಟಾರಣ್ಯದಲ್ಲಿ ವಿಹರಿಸಿದ ಅನುಭವ ನೀಡಲಿದೆ. ಶಾಸಕ ವೇದವ್ಯಾಸ ಕಾಮತ್ ಅವರು ಮೇಳವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರು ನಗರ ಅಥವಾ ಹೊರಭಾಗದಲ್ಲಿ 50 ಸೆಂಟ್ಸ್ ಅಥವಾ ಒಂದು ಎಕರೆಯಲ್ಲಿ ಅಕ್ವೇರಿಯಂ ಮ್ಯೂಸಿಯಂ ಮಾಡುವ ಕುರಿತು ಕೇಂದ್ರ ಸಚಿವ ಪುರುಷೋತ್ತಮ ರೂಪಾಲ ಅವರಿಗೆ ಮನವಿ ಮಾಡಲಾಗಿದೆ ಎಂದರು.

ಇದೇ ವೇಳೆ ಮಂಗಳೂರು ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಕರಾವಳಿ ಉತ್ಸವ ಮೈದಾನದಲ್ಲಿ ರಾಷ್ಟ್ರೀಯ ಗ್ರಾಹಕರ ಮೇಳ ಆರಂಭವಾಗಿದ್ದು, ಈ ಬಾರಿ ವಿಶೇಷವಾಗಿ ಅಂತರ್ಜಲ ಸುರಂಗ ಮಾರ್ಗದಲ್ಲಿ ವಿವಿಧ ಪ್ರಭೇದದ ಮೀನುಗಳು ಆಕರ್ಷಣೀಯವಾಗಿದೆ. ಎಲ್ಲರೂ ಬಂದು ಈ ವಿನೂತನ ಆಕರ್ಷಣೆಯನ್ನು ವೀಕ್ಷಿಸಿ ಎಂದರು.

ಗ್ರಾಹಕರು ಮೇಳದಲ್ಲಿ ಶಾಪಿಂಗ್ ಮಾಡಿಕೊಳ್ಳಬಹುದು, ಸರಿಸುಮಾರು 40ಕ್ಕೂ ಅಧಿಕ ಸ್ಟಾಲ್‍ಗಳು ಮೇಳದಲ್ಲಿದ್ದು, ಅತ್ಯಧಿಕ ರಿಯಾಯಿತಿ ದರದಲ್ಲಿ ಗೃಹಬಳಕೆಯ ಉತ್ಪನ್ನಗಳು, ಅಡುಗೆ ಮನೆ ಉತ್ಪನ್ನಗಳು, ಕೈಮಗ್ಗದ, ಕರಕುಶಲ, ಡ್ರೆಸ್ ಮೆಟೀರಿಯಲ್ಸ್, ಫ್ಯಾಶನ್ ಪಾದರಕ್ಷಗೆಳು, ಆಟಿಕೆಗಳು ಆಹಾರೋತ್ಪನ್ನಗಳು ಗ್ರಾಹಕರಿಗೆ ಸಿಗಲಿದೆ.

ಮನೋರಂಜನಾ ವಿಭಾಗದಲ್ಲಿ ಟೋರಾ. ಟೋರಾ, ಡ್ಯಾಶಿಂಗ್ ಕಾರ್, ಜಾಯಿಂಟ್ ವೀಲ್, ಡ್ರ್ಯಾಗನ್ ಟ್ರೈನ್, ಮೆರ್ರಿ ಕೊಲಂಬಸ್, 3ಡಿ ಶೋಸ್, ಸ್ಕೇರಿ ಹೌಸ್, ಏರ್‍ಶಾಟ್, ಸ್ಪೇಸ್ ಜೆಟ್ ಇತ್ಯಾದಿಗಳು ಸಂಜೆ 4ರಿಂದ ರಾತ್ರಿ 9ರ ವರೆಗೆ ಗ್ರಾಹಕರಿಗೆ ಸಿಗಲಿದೆ.ಈ ಸಂದರ್ಭದಲ್ಲಿ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ್, ಎನ್‍ಸಿಎಫ್‍ನ ಗೌತಮ್ ಅಗರ್‍ವಾಲ್, ಚೈತನ್ಯ, ವಿಜಯ್ ಹಾಗೂ ನಿಸರ್ಗ ಪಬ್ಲಿಸಿಟಿಯ ಮಂಜುನಾಥ್ ಡಿ ಮೊದಲಾದವರು ಉಪಸ್ಥಿತರಿದ್ದರು.v

Related Posts

Leave a Reply

Your email address will not be published.