Home 2023 September (Page 24)

ಬೆಳ್ತಂಗಡಿ: ಸ್ವರಾಜ್ ಆತ್ಮಹತ್ಯೆಗೆ ಲೋನ್ ಆ್ಯಪ್ ಕಿರುಕುಳ ಕಾರಣವೇ?

ಬೆಳ್ತಂಗಡಿಯ ಪುದುವೆಟ್ಟುನಲ್ಲಿ ಗುರುವಾರ ಕಬಡ್ಡಿ ಆಟಗಾರ, 24ರ ಹರೆಯದ ಸ್ವರಾಜ್ ಆತ್ಮಹತ್ಯೆ ಮಾಡಿಕೊಳ್ಳಲು ಲೋನ್ ಆ್ಯಪ್ ಕಿರುಕುಳವೇ ಕಾರಣ ಎನ್ನುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಿಲ್ಲಾ ಮಟ್ಟದ ಕಬಡ್ಡಿ ಆಟಗಾರ, ಉಜಿರೆಯ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಸ್ವರಾಜ್ ನಿನ್ನೆ ಬೆಳ್ತಂಗಡಿಯ ಪುದುವೆಟ್ಟುವಿನಲ್ಲಿರುವ ತನ್ನ ಮನೆಯ ಸ್ನಾನದ ಕೊಠಡಿಯಲ್ಲಿ

ಸೆ.2-6 ಆಳ್ವಾಸ್ ನಲ್ಲಿ ನಾಯಿಮರಿ ನಾಟಕ ಪ್ರದರ್ಶನ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ.) ಮೂಡುಬಿದಿರೆ ಇದರ ಆಶ್ರಯದಲ್ಲಿ ಸೆ.02 ರಿಂದ ಸೆ.06 ರ ವರೆಗೆ ವಿದ್ಯಾಗಿರಿಯ ಕೃಷಿ ಸಿರಿ ವೇದಿಕೆಯಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸುವ, ಡಾ| ಜೀವನ್ ರಾಂ ಸುಳ್ಯ ನಿರ್ದೇಶನದ ನಾಯಿಮರಿ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಶ್ರೀಮತಿ ವೈದೇಹಿ ರಚಿಸಿರುವ ಈ ನಾಟಕವು ಈಗಾಗಲೇ

ಬಿಲ್ಲವ ಸೇವಾ ಸಂಘ ಕಾಸರಗೋಡು ; ಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಬಿಲ್ಲವ ಸೇವಾ ಸಂಘ(ರಿ ) ಕರಂದಕ್ಕಾಡ್ ಕಾಸರಗೋಡು, ಇದರ ಆಶ್ರಯದಲ್ಲಿ 169ನೇ ಶ್ರೀ ನಾರಾಯಣ ಗುರು ಜಯಂತಿಯನ್ನು ಶ್ರೀ ನಾರಾಯಣ ಗುರು ಸಭಾ ಮಂಟಪದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಸಭೆಯಲ್ಲಿ ಶ್ರೀ ಕೇಶವ ಎ ಅಧ್ಯಕ್ಷತೆ ವಹಿಸಿದರು, ಹಿರಿಯ ವ್ಯಕ್ತಿತ್ವ ವಾದ ಸಂತನಡ್ಕ ತರವಾಡಿನ, ಬಾಡೂರ್ ಜಟಾದಾರಿ ದೈವದ ಪೂಜಾರಿಯಾದ ಕರಿಯಪ್ಪ ಪೂಜಾರಿ ಅವರನ್ನು ಫಲ ಪುಷ್ಪಗಳನ್ನು

ಅವಧಿ ಪೂರ್ವದಲ್ಲೇ ತುಂಬೆ ವೆಂಟೆಡ್ ಡ್ಯಾಂನಲ್ಲಿ ಗೇಟ್‍ಗಳನ್ನು ಮುಚ್ಚಿ ನೀರು ಸಂಗ್ರಹಣೆ

ಇನ್ನೂ ಮಳೆಗಾಲ ಮುಗಿದಿಲ್ಲ. ಅದಾಗಲೇ ತುಂಬೆ ವೆಂಟೆಡ್ ಡ್ಯಾಂನಲ್ಲಿ ಗೇಟ್‍ಗಳನ್ನು ಮುಚ್ಚಿ ನೀರು ಸಂಗ್ರಹಣೆ ಆರಂಭಿಸಲಾಗಿದೆ. ಪ್ರತೀ ವರ್ಷ ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿ ಡ್ಯಾಂಲ್ಲಿ ನೀರು ಸಂಗ್ರಹಣ ಆರಂಭವಾಗುತ್ತಿದ್ದರೆ ಈ ಬಾರಿ ಅವಧಿಗಿಂತ ಮೊದಲೇ ನೀರು ಸಂಗ್ರಹಣೆ ಆರಂಭಗೊಂಡಿದೆ. ಈ ಬಾರಿ ಮಳೆಯಿಲ್ಲದೆ ಮಳೆಗಾಲದಲ್ಲಿಯೇ ನದಿ ಬರಡಾಗಿ ಮುಂದಿನ

ಉಡುಪಿ: ಬಿಜೆಪಿಯವರಿಂದಲೇ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ-ಗಾಯಾಳು ಅಸ್ಪತ್ರೆಗೆ ದಾಖಲು

ಉಡುಪಿಯ ಜಿಲ್ಲೆಯ ಮುದ್ದೂರು ಎಂಬಲ್ಲಿ ಬಿಜೆಪಿಯವರಿಂದಲೇ ಬಿಜೆಪಿ ಕಾರ್ಯಕರ್ತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆದಿದ್ದು ಗಂಭೀರ ಗಾಯಗೊಂಡಿರುವ ಬಿಜೆಪಿ ಕಾರ್ಯಕರ್ತ ನೆಂಚಾರು ನಿವಾಸಿ ಪ್ರಭಾಕರ ಪೂಜಾರಿ (51) ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು ಮೊದಲಿನಿಂದಲೂ ಬಿಜೆಪಿಯ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ದಯಾನಂದ ಕಲ್ನಾರ್ ಆಯ್ಕೆ

ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ 2023-24ನೇ ಸಾಲಿನ ಅಧ್ಯಕ್ಷರಾಗಿ ದಯಾನಂದ ಕಲ್ನಾರ್ ಆಯ್ಕೆಯಾಗಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ವಾರ್ಷಿಕ ಮಹಾ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ಪದ್ಮನಾಭ ಅರಂಬೂರು,ಪ್ರಧಾನ ಕಾರ್ಯದರ್ಶಿಯಾಗಿ ತೇಜೇಶ್ವರ ಕುಂದಲ್ಪಾಡಿ, ಜೊತೆ ಕಾರ್ಯದರ್ಶಿಯಾಗಿ ಜಯದೀಪ್ ಕುದ್ಕುಳಿ,