Home 2023 November (Page 3)

ಮಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ, ಮಹಿಳೆಗೆ ಗಂಭೀರ ಗಾಯ

ಮಂಗಳೂರಿನ ಅತ್ತಾವರದ ಐವರಿ ಟವರ್‌ನಲ್ಲಿ ಶಾರ್ಟ್ ಸರ್ಕೂಟ್‌ನಿಂದ ಬೆಂಕಿ ಅವಘಡ ಸಂಭವಿಸಿದ್ದು, ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೆಯಲ್ಲಿ ಹಲವು ಮಂದಿಯಿದ್ದು, ಘಟನೆ ಸಂಭವಿಸಿದ ತಕ್ಷಣ ಹೊರಗೆ ಬಂದು ಅಪಾಯದಿಂದ ಪಾರಾಗಿದ್ದಾರೆ. ಆದರೆ ಮಹಿಳೆಯೊಬ್ಬರು ಬಾತ್ ರೂಮ್‌ನಲ್ಲಿದ್ದ ಕಾರಣ ಹೊರಗೆ

ಬೆಳ್ತಂಗಡಿ: ಚಲಿಸುತ್ತಿದ್ದ ಕಾರಿನ ಮೇಲೆ ಕಾಡಾನೆ ದಾಳಿ: ಕಾರಿನಲ್ಲಿದ್ದ ಓರ್ವರಿಗೆ ಗಾಯ

ಬೆಳ್ತಂಗಡಿ ತಾಲೂಕಿನ ನೆರಿಯ-ಕಕ್ಕಿಂಜೆರಸ್ತೆಯ ಬಯಲು ಬಸ್ತಿ ಎಂಬಲ್ಲಿ ಒಂಟಿ ಸಲಗವೊಂದು ಕಾರಿಗೆ ಹಾನಿ ಮಾಡಿ ಓರ್ವನನ್ನು ಗಾಯಗೊಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಆನೆಯು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಆಗಮಿಸಿದ ಆಲ್ಟೋ ಕಾರನ್ನು ಚಾಲಕ ಆತಂಕಗೊಂಡು ನಿಲ್ಲಿಸಿದ್ದಾರೆ. ನಿಂತ ಕಾರಿನ ಬಳಿಗೆ ಆಗಮಿಸಿದ ಆನೆಯು ತನ್ನ ಸೊಂಡಿಲ ಮೂಲಕ ಕಾರನ್ನು

🛑ಉರುಳಿದ 80 ವರುಷಗಳ ಬಿಬಿಎಂಪಿ ಶಾಲೆ

ಬೆಂಗಳೂರು ಶಿವಾಜಿನಗರದ ಕುಕ್ಸ್ ರಸ್ತೆಯ ಬಿ ಅಡ್ಡ ರಸ್ತೆಯ ಬಿಬಿಎಂಪಿ ನರ್ಸರಿ ಶಾಲೆ ಮಧ್ಯ ರಾತ್ರಿ ಬಿದ್ದು ಹೋಗಿದೆ. ಮಕ್ಕಳಾಗಲಿ, ಜನರಿಗಾಗಲಿ ಅಪಾಯವಾಗಿಲ್ಲ ಎಂಬುದು ಸಮಾಧಾನಕರ. 80 ವರ್ಷಗಳಷ್ಟು ಹಳೆಯ ಈ ಶಾಲೆಯಲ್ಲಿ ವ 80ರಷ್ಟು ಮಕ್ಕಳು ಇದ್ದರು. ಶಾಲೆಯ ಎಲ್ಲ, ಪರಿಕರ, ಮಕ್ಕಳ ಆಟದ ಸಾಮಾನುಗಳು ಮಾತ್ರವಲ್ಲ ಅಕ್ಕಪಕ್ಕಗಳಲ್ಲಿ ನಿಲ್ಲಿಸಿದ್ದ ಹಲವು ವಾಹನಗಳು

ವಿಚಿತ್ರ ತಿರುವು ಪಡೆಯುವ ಊರಿನ ಹೆಸರುಗಳು

ಭತ್ತ ಅನ್ನಕ್ಕೆಂದು ಪಿಡಿದರೆ ಬಾಳೆ ಹಣ್ಣದು ಆಯ್ತು ದೈವವೆ! ಮಂಗಳೂರಿನಲ್ಲಿ ಒಂದು ಬಾಳೆ ಬಯ್ಲು (ಬಯಲು) ಇದೆ. ಈ ಭತ್ತ ಬೆಳೆಯುವ ತುಳು ಜಾಗದ ನೆಲದ ಹೆಸರು ಬದಲಾದುದು ಬರೇ ಶತಮಾನದ ಕತೆ. ಬಾರ ಬಯ್ಲ್ ಎಂದರೆ ಭತ್ತದ ಬಯಲು. ರಾಷ್ಟ್ರೀಯ ಹೆದ್ದಾರಿ ಮಾಜೀ 17 ಹಾಲಿ 66 ಇದರ ನಡುವೆ ಹೋಗಿ, ಈಗ ಇಲ್ಲಿ ಕಟ್ಟಡಗಳು ಬೆಳೆದಿವೆ. ತುಳು ಕನ್ನಡದಲ್ಲಿ ರ ಳ ಲ ಬದಲಾವಣೆ ಬಹಳ

ಮಂಗಳೂರಿನಲ್ಲಿ `ಕ್ರಿಸ್ತ ಜಯಂತಿ ಜುಬಿಲಿ ಸಂಭ್ರಮಾಚರಣೆ

ಜಗತ್ತಿನಾದ್ಯಂತ ಕ್ರೈಸ್ತ ಧರ್ಮಸಭೆಯಲ್ಲಿ ಯೇಸು ಕ್ರಿಸ್ತರ ಜನನದ 2025 ವರ್ಷಗಳ ಸ್ಮರಣಾರ್ಥ `ಕ್ರಿಸ್ತ ಜಯಂತಿ ಜುಬಿಲಿ2025′ ಸಂಭ್ರಮಾಚರಣೆಯ ಪೂರ್ವ ಸಿದ್ಧತೆಗಳು ನಡೆಯುತ್ತಿದ್ದು, ಮಂಗಳೂರಿನ ರೋಮನ್ ಕೆಥೊಲಿಕ್ ಧರ್ಮಕ್ಷೇತ್ರದಲ್ಲೂ ಎರಡು ವರ್ಷಗಳ ಪೂರ್ವ ತಯಾರಿಗಳಿಗೆ ಬಿಷಪ್ ಅ.ವಂ. ಡಾ.ಪೀಟರ್ ಪಾವ್ಲ್ ಸಲ್ಡಾನ ಚಾಲನೆ ನೀಡಿದರು. ನಗರದ ಹೋಲಿ ರೋಜರಿ

ಸಿಎಂ ಅಪರ ಮುಖ್ಯ ಕಾರ್ಯದರ್ಶಿಯಾಗಿ ಎಲ್.ಕೆ ಅತೀಖ್ ನೇಮಕ

ರಾಜ್ಯ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದ ಹಿರಿಯ ಐಎಎಸ್ ಅಧಿಕಾರಿ ಎಲ್ ಕೆ ಅತೀಖ್ ಅವರನ್ನು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿಯಾಗಿ ತಕ್ಷಣ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಈವರೆಗೆ ಆ ಹುದ್ದೆಯಲ್ಲಿದ್ದ ಡಾ. ರಜನೀಶ್ ಗೋಯಲ್ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಎಲ್ ಕೆ ಅತೀಖ್ ಅವರು ಆರ್ಥಿಕ ಇಲಾಖೆಯ ಅಪರ ಮುಖ್ಯ

ಕಾಂತಾರ ಚಾಪ್ಟರ್-1 ಫಸ್ಟ್ ಲುಕ್, ಟೀಸರ್ ಬಿಡುಗಡೆ

ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್ ಕಾಂತಾರ ಚಾಪ್ಟರ್ ಫಸ್ಟ್ ಲುಕ್ ಹಾಗೂ ಟೀಸರ್ ಬಿಡುಗಡೆಯಾಗಿದೆ. ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಹೊಂಬಾಳೆ ಫಿಲ್ಮ್ಸ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ. ಯುಟ್ಯೂಬ್‍ನಲ್ಲಿ ಟೀಸರ್

ಕೊಟ್ಟಾರಚೌಕಿ ಸರ್ಕಲ್‍ಗೆ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಹೆಸರು

ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್‍ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.

ಬೆಂಗಳೂರು ಕಂಬಳದಲ್ಲಿ ಕಾಂತಾರ ಕೋಣಕ್ಕೆ ಚಿನ್ನದ ಪದಕ

ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಿತ್ರದಲ್ಲಿ ಬಳಸಿಕೊಂಡಿದ್ದ ಕೋಣಗಳು ಚಿನ್ನದ ಪದಕಕ್ಕೆ ಭಾಜನವಾಗಿದೆ. ಬೆಂಗಳೂರು ಕಂಬಳದಲ್ಲಿ ಬೈಂದೂರಿನ ಕೋಣ ಪ್ರಥಮ ಚಿನ್ನ ಗೆದ್ದ ಕೋಣ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದೆ. ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಕೋಣಗಳು 6.5 ಕೋಲು ನೀರು ಎತ್ತರಕ್ಕೆ ನೀರು ಚಿಮ್ಮಿಸಿ ಚಿನ್ನದ ಪಡೆದಿವೆ. ಬಾನೆತ್ತರಕ್ಕೆ ನೀರು

ಪಡುಬಿದ್ರಿ: ಆದ್ಯಾ ಫೌಂಡೇಷನ್ ವತಿಯಿಂದ ಉದ್ಯೋಗ ಮೇಳ

ನಿರಂತರ ಸಮಜೋಮುಖಿ ಕಾರ್ಯಗಳನ್ನೇ ತನ್ನ ಉಸಿರಾಗಿಸಿಕೊಂಡ ಪಡುಬಿದ್ರಿಯ ಆದ್ಯಾ ಫೌಂಡೇಷನ್ ವತಿಯಿಂದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಪಡುಬಿದ್ರಿ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಈ ಉದ್ಯೋಗ ಮೇಳದ ಉದ್ಘಾಟನೆಯನ್ನು ಸರಳ ಸಭಾ ಕಾರ್ಯಕ್ರಮದಲ್ಲಿ ಸ್ಥಳೀಯ ಪಾದೆಬೆಟ್ಟು ಸುಬ್ರಹ್ಮಣ್ಯ ದೇವಸ್ಥಾನ ಮುಕ್ತೇಸರರಾದ ಜೀತೇಂದ್ರ ಶೆಟ್ಟಿ ದೀಪ