Home 2024 February (Page 3)

ರಾಜಕೀಯ ಇಂದು ಸಂಪಾದನೆಗೆ ದಾರಿ || Politian’s earn today || V4NEWS

2004ರಿಂದ 2019ರ ನಡುವೆ ಸಂಸದರ ಸಂಪತ್ತು ಏರಿಕೆಯಲ್ಲಿ ಕರ್ನಾಟಕದ ಸಂಸದ ರಮೇಶ ಜಿಗಜಿಣಗಿ ಮೊದಲ ಸ್ಥಾನದಲ್ಲಿ ಇದ್ದಾರೆ. ಅವರ ಸಂಪತ್ತು 2004ರಲ್ಲಿ 54.8 ಲಕ್ಷ ಇದ್ದುದು 2019ಕ್ಕೆ 51.41 ಕೋಟಿಗೆ ಎಂದರೆ 9,098 ಶೇಕಡಾ ಏರಿಕೆ ಆಗಿತ್ತು. ಇಂದೆಲ್ಲ ಬಡವರು ಚುನಾವಣೆಗೆ ನಿಲ್ಲುವುದು ಸಾಧ್ಯವಿಲ್ಲ. 1975ರವರೆಗೆ ಕಾಸಿಲ್ಲದವರು ಕೂಡ ಚುನಾವಣೆಗೆ ನಿಂತುದಿದೆ.

 ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿ ಬಂಟ್ವಾಳದ ಅನಿಲ್ ಸಿಕ್ವೇರಾ ಆಯ್ಕೆ

ಬಂಟ್ವಾಳ ತಾಲೂಕಿನ ಅನಿಲ್ ಜಾನ್ ಸಿಕ್ವೇರಾ ತನ್ನ 25ನೇ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ರಾಜ್ಯದ ಅತ್ಯಂತ ಚಿಕ್ಕ ವಯಸ್ಸಿನ ನ್ಯಾಯಾಧೀಶ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಕರಾವಳಿ ಜಿಲ್ಲೆಯ ಅನಿಲ್ ಅಪರೂಪದ ಸಾಧಕರಾಗಿ ಗುರುತಿಸಲ್ಪಟ್ಟಿದ್ದಾರೆ. ಅನಿಲ್ ಜಾನ್ ಸಿಕ್ವೇರಾ ಅವರು ಪ್ರಿಲಿಮ್ಸ್, ಮೇನ್ಸ್ ಹಾಗೂ ಸಂದರ್ಶನ ಹೀಗೆ 2023ರ

ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್: ಕಬಡ್ಡಿ ಚಾಂಪಿಯನ್‌ಶಿಫ್ :ಮಂಗಳೂರು ವಿವಿಗೆ ಚಾಂಪಿಯನ್ಸ್ ಪಟ್ಟ

ಮೂಡುಬಿದಿರೆ: ಅಸ್ಸಾಂನ ಗೌಹಾಟಿಯಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿರ್ಸಿಟಿ ಗೇಮ್ಸ್‌ನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಕಬಡ್ಡಿ ತಂಡವು ಚಿನ್ನದ ಪದಕವನ್ನು ಗಳಿಸಿದೆ. ಅಂತರ್ ವಿಶ್ವಿದ್ಯಾಲಯಗಳ ಕಬಡ್ಡಿ ಚಾಂಪಿಯನ್‌ಶಿಫ್‌ನಲ್ಲಿ ಅಂತಿಮ ಎಂಟರ ಘಟ್ಟಕ್ಕೆ ಆಯ್ಕೆಯಾದ ತಂಡಗಳು ಭಾಗವಹಿಸಿದ್ದವು. ಲೀಗ್ ಹಂತದಲ್ಲಿ ಮಂಗಳೂರು ವಿವಿಯು ದ್ವಿತೀಯ ಸ್ಥಾನವನ್ನು

ದುಬೈ ರಸ್ತೆ ಅಪಘಾತಕ್ಕೆ ತಾ.ಪಂ ಮಾಜಿ ಉಪಾಧ್ಯಕ್ಷೆ ಏಕೈಕ ಪುತ್ರಿ ದಾರುಣ ಸಾವು

ಉಳ್ಳಾಲ : ದುಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಮೃತಪಟ್ಟಿದ್ದಾರೆ. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿಯಾಗಿರುವ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು

ನಾಪತ್ತೆಯಾದ ವಿವಾಹಿತನ ಮೃತದೇಹ ಪತ್ತೆ

ಉಳ್ಳಾಲ: ಕಳೆದ ಸೋಮವಾರದಿಂದ ಮನೆಯಿಂದ ನಾಪತ್ತೆಯಾಗಿದ್ದ ಸೋಮೇಶ್ವರದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ. ಉಳ್ಳಾಲ ತಾಲೂಕಿನ ಸೋಮೇಶ್ವರ ಮೂಡ ಬಡಾವಣೆ ನಿವಾಸಿ ಗೌತಮ್ ಎಮ್(30) ಮೃತ ಯುವಕ. ಫೈನಾನ್ಸ್ ಸೀಸರ್ ಆಗಿದ್ದ ಗೌತಮ್ ಕಳೆದ ಸೋಮವಾರ ಸಂಜೆ ತೊಕ್ಕೊಟ್ಟಿನಲ್ಲಿ ನಡೆದಿದ್ದ ಬಬ್ಬುಸ್ವಾಮಿ ದೈವದ ಪುನರ್ ಪ್ರತಿಷ್ಠೆ , ಕಲಶಾಭಿಷೇಕದ

ಮೂಡುಬಿದಿರೆ: ನಿಮೋನಿಯಾಕ್ಕೆ ವಿದ್ಯಾರ್ಥಿನಿ ಬಲಿ

ಮೂಡುಬಿದಿರೆ: ತಾಲೂಕಿನ ಶಿರ್ತಾಡಿ ಮೌಂಟ್ ಕಾರ್ಮೆಲ್ ಶಿಕ್ಷಣ ಸಂಸ್ಥೆಯ ಒಂದನೇ ತರಗತಿಯ ವಿದ್ಯಾರ್ಥಿನಿ ಅಶ್ರಿಜಾ ನಿಮೋನಿಯಾಕ್ಕೆ ತುತ್ತಾಗಿ ಮೃತಪಟ್ಟಿದ್ದಾಳೆ.ಬೆಳ್ತಂಗಡಿ ತಾಲೂಕಿನ ನಿವಾಸಿ ಮರೋಡಿ ನಿವಾಸಿಗಳಾದ ಜಯಾನಂದ ರಾಜಶ್ರೀ ದಂಪತಿಯ ಪುತ್ರಿಯಾಗಿರುವ ಈಕೆ ನಿಮೋನಿಯಾಕ್ಕೆ ತುತ್ತಾಗಿ ಮಂಗಳೂರು ಅತ್ತಾವರ ಕೆಎಂಸಿ ಆಸ್ಪತ್ರೆಯ ತುರ್ತುನಿಗಾ ವಿಭಾಗದಲ್ಲಿ

ಮಂಗಳೂರು : ಫೆ.24ರಂದು ಕೆ.ಟಿ.ಗಟ್ಟಿ ಅವರಿಗೆ ನುಡಿ ನಮನ

ಮಂಗಳೂರು : ಇತ್ತೀಚೆಗೆ ನಿಧನರಾದ ಖ್ಯಾತ ಕಾದಂಬರಿಕಾರ , ಭಾಷಾ ತಜ್ಞ, ಶಿಕ್ಷಕ ಕೆ.ಟಿ.ಗಟ್ಟಿ ಅವರಿಗೆ ನುಡಿ ನಮನ ಸಲ್ಲಿಸುವ ಕಾರ್ಯಕ್ರಮ ಫೆ.24 ರ ಶನಿವಾರ ಅಪರಾಹ್ನ ಗಂಟೆ 3.30ಕ್ಕೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ವೃತ್ತದ ಸಮೀಪ ಇರುವ ಮ್ಯಾಪ್ಸ್ ಕಾಲೇಜಿನಲ್ಲಿ ನಡೆಯಲಿದೆ.‌ಕೆ.ಟಿ.ಗಟ್ಟಿಯವರ ಅಭಿಮಾನಿಗಳು, ಸಾಹಿತ್ಯ, ಸಾಮಾಜಿಕ, ರಾಜಕೀಯ , ಶೈಕ್ಷಣಿಕ

ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ : ವೈ. ಎಸ್. ಶರ್ಮಿಳಾ ಬಂಧನ

ಜಿಲ್ಲಾ ಆಯ್ಕೆ ಸಮಿತಿಯಿಂದ ಶಿಕ್ಷಕರ ನೇಮಕಾತಿ ಪಟ್ಟಿ ಆಗಿದ್ದರೂ ಸಚಿವಾಲಯವು ಆ ಪಟ್ಟಿ ತಡೆ ಹಿಡಿದಿರುವುದರ ವಿರುದ್ಧ ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಈ ವೇಳೆ ಎಪಿಸಿಸಿ ಅಧ್ಯಕ್ಷೆ ವೈ. ಎಸ್. ಶರ್ಮಿಳಾ ಮತ್ತಿತರರನ್ನು ಪೋಲೀಸರು ವಶಕ್ಕೆ ಪಡೆದರು.ಮನೆಗೆ ಹೋದರೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂದು ರಾತ್ರಿ ಕಾಂಗ್ರೆಸ್ ಕಚೇರಿಯಲ್ಲೇ ಮಲಗಿದ್ದ

ರೈತ ಶುಭಕರಣ್ ಸಿಂಗ್ ಸಾವು : ದಿಲ್ಲಿ ಹರಿಯಾಣ ಗಡಿಯಲ್ಲಿ ಕೊಲೆ : ಸೂಕ್ತ ಪರಿಹಾರಕ್ಕೆ ರೈತರ ಆಗ್ರಹ

21ರ ಪ್ರಾಯದ ಶುಭಕರಣ್ ಸಿಂಗ್ ಎರಡು ಎಕರೆ ಹೊಲ ಹೊಂದಿದ್ದಾನೆ. ತಂಗಿಯ ಮದುವೆಗಾಗಿ ಸಾಲ ಮಾಡಿದ್ದ. ಈಗ ರೈತರ ಚಳವಳಿಯಲ್ಲಿ ದಿಲ್ಲಿ ಹರಿಯಾಣ ಗಡಿಯಲ್ಲಿ ಸರಕಾರದ ರೈತ ಚಳವಳಿ ಹತ್ತಿಕ್ಕುವ ಹೋರಾಟದಲ್ಲಿ ಬಲಿಯಾಗಿದ್ದಾನೆ.ಪಂಜಾಬದ ಭಟಿಂಡಾ ಜಿಲ್ಲೆಯ ಬಾಲೋಕ್ ಗ್ರಾಮದ ಯುವಕ ರೈತನಿವನು. ಈಗ ಪೋಲೀಸರ ದಾಳಿಯಲ್ಲಿ ರೈತರ ಪ್ರಕಾರ ಕೊಲೆಯಾಗಿದ್ದಾನೆ. ಸರಕಾರ ಸರಿಯಾದ ಪರಿಹಾರ

ದಿಲ್ಲಿ ಲೋಕ ಸಭಾ ಕ್ಷೇತ್ರ : ಕಾಂಗ್ರೆಸ್ ಎಎಪಿ ಮೈತ್ರಿ ಹಂಚಿಕೆ : ಎಎಪಿ 4, ಕಾಂಗ್ರೆಸ್ 3 ಕಡೆ ಸ್ಪರ್ಧೆ

ದಿಲ್ಲಿ ಲೋಕಸಭಾ ಕ್ಷೇತ್ರಗಳ ಬಗೆಗೆ ಇಂಡಿಯಾ ಮೈತ್ರಿಕೂಟದ ಅಂಗ ಪಕ್ಷಗಳಾದ ಎಎಪಿ ಮತ್ತು ಕಾಂಗ್ರೆಸ್ ಪಕ್ಷಗಳು ಇಂದು ಒಡಂಬಡಿಕೆಗೆ ಬಂದವು. ಅದರಂತೆ ದಿಲ್ಲಿಯ 7 ರಲ್ಲಿ 4 ಕಡೆ ಎಎಪಿ ಮತ್ತು 3 ಕಡೆ ಕಾಂಗ್ರೆಸ್ ಪಕ್ಷಗಳು ಸ್ಪರ್ಧಿಸಲಿವೆ.ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ಅವರು ಈ ಬಗೆಗೆ