ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ : ವೈ. ಎಸ್. ಶರ್ಮಿಳಾ ಬಂಧನ
ಜಿಲ್ಲಾ ಆಯ್ಕೆ ಸಮಿತಿಯಿಂದ ಶಿಕ್ಷಕರ ನೇಮಕಾತಿ ಪಟ್ಟಿ ಆಗಿದ್ದರೂ ಸಚಿವಾಲಯವು ಆ ಪಟ್ಟಿ ತಡೆ ಹಿಡಿದಿರುವುದರ ವಿರುದ್ಧ ವಿಜಯವಾಡಾದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಈ ವೇಳೆ ಎಪಿಸಿಸಿ ಅಧ್ಯಕ್ಷೆ ವೈ. ಎಸ್. ಶರ್ಮಿಳಾ ಮತ್ತಿತರರನ್ನು ಪೋಲೀಸರು ವಶಕ್ಕೆ ಪಡೆದರು.
ಮನೆಗೆ ಹೋದರೆ ಗೃಹ ಬಂಧನಕ್ಕೆ ಒಳಪಡಿಸಬಹುದು ಎಂದು ರಾತ್ರಿ ಕಾಂಗ್ರೆಸ್ ಕಚೇರಿಯಲ್ಲೇ ಮಲಗಿದ್ದ ಶರ್ಮಿಳಾ ಅವರು ಬೆಳಿಗ್ಗೆ ನೇರ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದರು. ಶರ್ಮಿಳಾ ಅವರು ಆಂಧ್ರದ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿಯವರ ಸಹೋದರಿಯೇ ಆಗಿದ್ದಾರೆ. ತೆಲಂಗಾಣದಲ್ಲಿ ಸ್ವಂತ ಪಕ್ಷ ಸ್ಥಾಪಿಸಿದ್ದ ಅವರು ಕೊನೆಗೆ ಕಾಂಗ್ರೆಸ್ ಸೇರಿ ಆಂಧ್ರ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಆಗಿದ್ದಾರೆ.
ಪ್ರತಿಭಟನೆ ಸಂಬಂಧ ಶರ್ಮಿಳಾರಲ್ಲದೆ 40 ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿರುವುದಾಗಿಯೂ ಏಲೂರು ರಸ್ತೆಯ ಸಂಚಾರ ಪೋಲೀಸು ವಿಭಾಗದ ವಿಜಯವಾಡ ಉಪ ಆಯುಕ್ತ ಬಿ. ರವಿಕುಮಾರ್ ತಿಳಿಸಿದ್ದಾರೆ.