Home 2024 February (Page 5)

ಜಸ್ಟ್ ಪಾಸ್ ಪಾಸ್‌ಪೋರ್ಟ್

ಜಾಗತಿಕ ಪಾಸ್‌ಪೋರ್ಟ್ ಪ್ರಭಾವ ಹೇಳುವ ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ 2024ರದು ಹೊರಬಿದ್ದಿದೆ. ಪೋರ್ಬ್ಸ್ ಅದನ್ನು ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ಪಾಸ್‌ಪೋರ್ಟ್ ಪ್ರಭಾವವು ಮತ್ತೆ 5 ಸ್ಥಾನ ಕೆಳಕ್ಕೆ ಇಳಿದು 85ನೇ ರಿಯಾಂಕಿಗೆ ಹೋಗಿದೆ. ಕಳೆದ ಬಾರಿ 80ರಲ್ಲಿತ್ತು. ಭಾರತದ ಪಾಸ್‌ಪೋರ್ಟ್ ಇದ್ದರೆ 58 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದಿತ್ತು. ಈಗ

“ಪ್ರಶ್ನೆಯಾದ ಜಯಲಲಿತಾ ವಜ್ರಾಭರಣ”

ತಮಿಳುನಾಡು ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದ ಭ್ರಷ್ಟಾಚಾರ ಸಂಬಂಧ ಆರೋಪ ಸಾಬೀತಾಗಿದ್ದ ದಿವಂಗತ ಜಯಲಲಿತಾ ಅವರ ಚಿನ್ನಾಭರಣ ಒಯ್ಯಲು ಬೆಂಗಳೂರಿನ 36ನೇ ಸಿಟಿ ಸಿವಿಲ್ ಮತ್ತು ಸೆಶನ್ಸ್ ನ್ಯಾಯಾಲಯವು ಮಾರ್ಚ್ 6 ಮತ್ತು 7ನೇ ದಿನಾಂಕಗಳನ್ನು ನೀಡಿದೆ. ಜಯಲಲಿತಾರ ಭ್ರಷ್ಟಾಚಾರ ಪ್ರಕರಣ ಬೆಂಗಳೂರಿನಲ್ಲಿ ವಿಚಾರಣೆ ಆಗಿದ್ದು ಅವರು ಮತ್ತು ಅವರ ಮೂವರು ಸಹಚರರಿಗೆ ತಲಾ 4

ಉಡುಪಿ: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024

ಉಡುಪಿ: ವಾಹನ ಚಾಲಕರು ಸಕಾಲಕ್ಕೆ ಕಣ್ಣಿನ ತಪಾಸಣೆ ಮಾಡಿಸಿ ಕೊಂಡು ರಸ್ತೆ ಅಪಘಾತವನ್ನು ತಡೆಗಟ್ಟುವಲ್ಲಿ ಸಹ ಕರಿಸಬೇಕು ಎಂದು ನಗರದ ಪ್ರಸಾದ್ ನೇತ್ರಾಲಯದ ಡಾ.ಕೃಷ್ಣಪ್ರಸಾದ್ ಹೇಳಿದ್ದಾರೆ. ಮಣಿಪಾಲದ ಪ್ರಾದೇಶಿಕ ಸಾರಿಗೆ ಕಛೇaರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ವತಿ ಯಿಂದ ಸೋಮವಾರ ಆಯೋಜಿಸಿದ ರಾಷ್ಟ್ರೀಯ ರಸ್ತೆ ಸುರಕ್ಷತಾ

ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

ಜಗನ್ನಿಯಾಮಕನಾದ ಭಗವಂತನಿಗೆ ನಾವು ಪ್ರತಿಷ್ಠೆ, ಬ್ರಹ್ಮಕಲಶ ಮಾಡಲು ಸಾಧ್ಯವಿಲ್ಲ. ಹಾಗಿದ್ದರೂ ದೇವಸ್ಥಾನ ಕಟ್ಟಿ ಪ್ರತಿಷ್ಠಾದಿ ಉತ್ಸವಗಳನ್ನು ಮಾಡುವುದರ ಹಿಂದೆ ಆತ್ಮ ಸಾಕ್ಷಾತ್ಕಾರದ ಒಳಮರ್ಮವಿದೆ. ಮನುಷ್ಯ ತನ್ನ ಬದುಕು ಹಸನು ಮಾಡಿಕೊಳ್ಳಲು ಧರ್ಮದ ಹಾದಿಯಲ್ಲಿ ನಡೆಯಬೇಕು. ದೇವಸ್ಥಾನಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕೂಡ ಧರ್ಮಜೀವನಕ್ಕೆ ಒಂದು ಮೆಟ್ಟಿಲಾಗಿ ಫಲ

ಹೃದಯಸ್ಪರ್ಶಿ ಸನ್ನಿವೇಶಕ್ಕೆ ಸಾಕ್ಷಿಯಾದ ನಳೀಲು ಬ್ರಹ್ಮಕಲಶೋತ್ಸವದ ವೇದಿಕೆ

ಪುತ್ತೂರು : ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇದಿಕೆ ಹೃದಯಸ್ಪರ್ಶಿ ಸನ್ನವೇಶಕ್ಕೆ ಸಾಕ್ಷಿಯಾಯಿತು. ಫೆ.19ರಂದು ಮಧ್ಯಾಹ್ನ ಮಣಿಕ್ಕರ ಸ.ಹಿ.ಪ್ರಾ.ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿದವರನ್ನು ನೆನಪಿಸುವ ಕಿರು ನಾಟಕ ನಡೆಯಿತು. ಈ

ಪುತ್ತೂರು : ಸಂವಿಧಾನ ಜಾಗೃತಿ ಜಾಥಾ 2024

ಪುತ್ತೂರಿನ ಆರ್ಯಾಪು ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ 2024 ರಲ್ಲಿ ಅಕ್ಷಯ ಕಾಲೇಜಿನ ಸುಮಾರು 50ಕ್ಕೂ ಹೆಚ್ಚು‌ ಸ್ವಯಂಸೇವಕರು ಭಾಗವಹಿಸಿರುತ್ತಾರೆ. ಜಾಥವನ್ನು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರೊಂದಿಗೆ ಪ್ರಾರಂಭಿಸಿ ನಂತರ ಸಂವಿಧಾನದ ಕುರಿತು ಮಾಹಿತಿ ನೀಡಲಾಯಿತು. ಸಂವಿಧಾನ ಮಾಹಿತಿ ಜಾಥವು ಗ್ರಾಮ ಪಂಚಾಯಿತಿಯಿಂದ ಹೊರಟು

ಮಂಗಳೂರು: ನೆಕ್ಸಾ ಶೋರೂಂನಲ್ಲಿ ಮೇಘಾ ಎಕ್ಸ್‌ಚೇಂಜ್ ಆಫರ್ ಮೇಳ

ಮಾರುತಿ ಸುಜುಕಿಯ ಗ್ರಾಂಡ್ ವಿತಾರ ಕಾರು ಒಂದು ಫುಲ್ ಟ್ಯಾಂಕ್‌ನಲ್ಲಿ 1436 ಕಿ.ಮೀ ಮೈಲೇಜು ನೀಡುವುದರೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಮಾಡುವ ಮೂಲಕ ದಾಖಲೆ ಬರೆದಿದ್ದು, ಮಂಗಳೂರಿನ ನೆಕ್ಸಾ ಮಾಂಡೋವಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಶೋರೂಂನಲ್ಲಿ ಮೇಘಾ ಎಕ್ಸ್‌ಚೇಂಜ್ ಆಫರ್‌ಗಳು ಘೋಷಿಸಲಾಗಿದೆ.ಪ್ರತಿ ಖರೀದಿಯ ಮೇಲೆ ರೂ.79100ವರೆಗೆ ರಿಯಾಯಿತಿಯನ್ನು

ಕೊಂಡೆವೂರಿನಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ ಮತ್ತು ಚಂಡಿಕಾ ಯಾಗ

ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಶ್ರೀ ಗಾಯತ್ರೀ ದೇವಿ ಹಾಗೂ ಭಗವಾನ್ ನಿತ್ಯಾನಂದ ಗುರುದೇವರ ಪ್ರತಿಷ್ಠಾ ವರ್ಧಂತಿ ಕಾರ್ಯಕ್ರಮವು ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ, ಶ್ರೀಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ದಿ.

ನಂದಿಕೂರು ವ್ಯಕ್ತಿ ನೇಣಿಗೆ ಶರಣು

ಪಡುಬಿದ್ರಿ: ನಂದಿಕೂರಿನ ಮನೆಯೊಂದರಲ್ಲಿ ಏಕಾಂಗಿಯಾಗಿ ಜೀವಿಸುತ್ತಿದ್ದ ವ್ಯಕ್ತಿಯೋರ್ವರು ತಮ್ಮದೇ ಮನೆ ಜಗಲಿಯ ಮೇಲಿನ ಪಕ್ಕಾಸಿಗೆ ನೇಣು ಹಾಕಿಕೊಂಡು ಜೀವಾಂತ್ಯಗೊಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನಂದಿಕೂರು ಶೆಟ್ಟಿ ಬೆಟ್ಟು ಸಾಲ್ಯಾನ್ ನಿವಾಸದ ವಾಸಿ ಶೇಖರ್ ಪೂಜಾರಿ(67), ಹೆಂಡತಿ ಅನಾರೋಗ್ಯದ ಸಮಸ್ಯೆಯಿಂದ ತನ್ನ ತಾಯಿ ಮನೆ ಕಾರ್ಕಳದ ಕಲ್ಯಾ

ಬೈಕ್ ಮತ್ತು ಬಸ್ ನಡುವೆ ಅಪಘಾತ: ಬೈಕ್ ಸವಾರ ಸಾವು

ಕಡಬ, ಬೈಕ್ ಗೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಸೋಮವಾರದಂದು ನಡೆದಿದೆ. ಮೃತ ಬೈಕ್ ಸವಾರನನ್ನು ಕೊಂಬಾರು ಮಣಿಭಾಂಡ ತೇರೆಬೀದಿ ನಿವಾಸಿ ನೆಟ್ಟಣದಲ್ಲಿ ಮೆಕ್ಯಾನಿಕ್ ಆಗಿದ್ದ ವಾಸುದೇವ ಗೌಡ ಎಂದು ಗುರುತಿಸಲಾಗಿದೆ. ಕೆಎಸ್ಸಾರ್ಟಿಸಿ ಬಸ್ ಓವರ್ ಟೇಕ್