ಹಾಸನದ ಸಂತ್ರಸ್ತೆಯರು ಹಿಂದೂ ಹೆಣ್ಣು ಮಕ್ಕಳಲ್ಲವೆ? ಕೂಡಲೆ ಬಂಧಿಸಿ ಕರೆತನ್ನಿ- ಕಾಂಗ್ರೆಸ್ ಪಕ್ಷದ ಒತ್ತಾಯ
ಸಂಸದ ಪ್ರಜ್ವಲ್ ರೇವಣ್ಣರಿಂದ ಶೋಷಿತರಾದ ಹೆಣ್ಣುಮಕ್ಕಳು ಹಿಂದೂಗಳಲ್ಲವೆ? ವಿದೇಶಕ್ಕೆ ಪರಾರಿಯಾಗಲು ಬಿಜೆಪಿ ನೆರವು ನೀಡಿದ್ದೇಕೆ ಎಂದಿತ್ಯಾದಿಯಾಗಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ಸಿನವರು ಪ್ರಶ್ನಿಸಿದರು.
ಹೆಣ ಇಟ್ಟು ರಾಜಕೀಯ ಮಾಡುವ, ಹಿಂದೂ ಶಬ್ದದ ರಾಜಕೀಯ ಮಾಡುವ ಬಿಜೆಪಿಯವರಿಗೆ ಹಾಸನದಲ್ಲಿ ಅವರ ಮೈತ್ರಿ ಸಂಸದರಿಂದ ಅನ್ಯಾಯಕ್ಕೆ ಒಳಗಾದವರು ಹಿಂದೂ ಹೆಣ್ಣುಮಕ್ಕಳು ಎಂದು ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿಯಾಗಲು ಬಿಜೆಪಿ ನೆರವು ನೀಡಿದೆ. ಇದು ನಿಮ್ಮ ದೇಶಪ್ರೇಮವೆ ಎಂದು ಕಾಂಗ್ರೆಸ್ ಪ್ರತಿಭಟನಾಕಾರರು ಕೇಳಿದರು.
ಪ್ರಜ್ವಲ್ ರೇವಣ್ಣರನ್ನು ಬಂಧಿಸಿ ಕರೆತಂದು ಕ್ರಮ ಕೈಗೊಳ್ಳುವಂತೆ ಮಾಡಲು ಕರ್ನಾಟಕದ ಬಿಜೆಪಿಯವರು ಮೋದಿ ಸರಕಾರದ ಮೇಲೆ ಒತ್ತಡ ಹೇರಬೇಕು ಎಂದೂ ಕಾಂಗ್ರೆಸ್ಸಿನವರು ಒತ್ತಾಯ ಮಾಡಿದರು.