ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯ ಹಾಗೂ ಹಿರಿಯ ನರರೋಗ ತಜ್ಞ ಡಾ.ರಾಜಾ ರವಿವಾರ ಹೃದಯಾಘಾತದಿಂದ ನಿಧನರಾದರು. ಮಣಿಪಾಲದ ರಾಜೀವನಗರದ ಮನೆಯಲ್ಲಿ ಬೆಳಗ್ಗೆ ಹೃದಯಾಘಾತಕ್ಕೆ ಒಳಗಾದ ಇವರನ್ನು ಕೂಡಲೇ ಉಡುಪಿ ಆದರ್ಶ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದರು. ಇವರು ಪತ್ನಿ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ
Month: June 2024
ಮೂಡುಬಿದಿರೆ: ಸಿಡಿಲು ಬಡಿದು ಹಾನಿಗೊಳಗಾಗಿದ್ದ ತೆಂಗಿನ ಮರವನ್ನು ಕಡಿಯಲು ಹತ್ತಿದ್ದ ಕೂಲಿ ಕಾರ್ಮಿಕರೊಬ್ಬರು ತೆಂಗಿನ ಮರ ತುಂಡಾಗಿ ಕೆಳಗೆ ಬಿದ್ದ ಪರಿಣಾಮವಾಗಿ ಸಾವನ್ನಪ್ಪಿದ ಘಟನೆ ಪಡುಮಾರ್ನಾಡು ಗ್ರಾಮದ ಬಸವನಕಜೆ ಎಂಬಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ ನಡೆದಿದೆ.ಸಾವನ್ನಪ್ಪಿದ ಕೂಲಿ ಕಾರ್ಮಿಕ ಅಲಂಗಾರು ಚಂದ್ರಾಪುರ ನಿವಾಸಿ ನವೀನ್ ಪ್ರಕಾಶ್
ಕಾರ್ಕಳ : ಪಂಡಿತರತ್ನ ಎತ್ತೂರು ಶಾಂತಿರಾಜ ಶಾಸ್ತ್ರಿ ಟ್ರಸ್ಟ್‌ನ ಆಶ್ರಯದಲ್ಲಿ ಇರ್ವತ್ತೂರಿನ ಭಗವಾನ್ ಶ್ರೀ ಆದಿನಾಥ ಸ್ವಾಮಿ ಸನ್ನಿಧಿಯಲ್ಲಿ ಟ್ರಸ್ಟಿನ ವತಿಯಿಂದ “ಗ್ರಂಥ ಭಂಡಾರ ಸ್ಥಾಪನಾ”ಕಾರ್ಯಕ್ರಮ ನಡೆಯಿತು. ಕಾರ್ಕಳ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಹಾಗೂ ಶ್ರೀ ಜೈನಮಠ, ಮೂಡುಬಿದಿರೆ
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮವನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಲೇಜಿನ ಆಡಳಿತ ಅಧಿಕಾರಿ ಚಂದ್ರಶೇಖರ್ ಪೇರಾಲ್ ಮಾತನಾಡಿ, ಸಕಾರಾತ್ಮಕ ಮನೋಭಾವದೊಂದಿಗೆ ಜೀವನ ರೂಪಿಸಿಕೊಳ್ಳಿ. ಯಾವುದೇ ವೃತ್ತಿಯ ಬಗ್ಗೆ ಕೀಳರಿಮೆ ಬೇಡ. ಪಡೆದ ಪದವಿ
ಪುತ್ತೂರು ತಾಲೂಕು ಕುಂಬ್ರ ನಿವಾಸಿ ವಿದ್ಯಾ ರೈ ಎಂಬವರ ಸುಮಾರು 27 ಗ್ರಾಂ ತೂಕದ ಚಿನ್ನದ ಸರ ಪುತ್ತೂರು ಗಾಂಧಿ ಕಟ್ಟೆ ಬಳಿ ಕಳೆದುಕೊಂಡಿದ್ದರು. ಈ ಬಂಗಾರದ ಸರ ಕೊಡಿಪಾಡಿ ನಿವಾಸಿ ದಿನೇಶ್ ಭವನ ಲಾಡ್ಜ್ ನೌಕರರಿಗೆ ಸಿಕ್ಕಿದ್ದು ಅದನ್ನು ಪ್ರಾಮಾಣಿಕತೆಯಿಂದ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದು ಬಳಿಕ ವಿದ್ಯಾ ರೈ ಅವರನ್ನು ಠಾಣೆಗೆ ಕರೆಯಿಸಿ ಅವರಿಗೆ
ಮಂಗಳೂರಿನ ಪತ್ರಿಕಾಭವನದಲ್ಲಿ ಉದ್ಯಮಿ ಡಾ. ರೊನಾಲ್ಡ್ ಕೊಲಾಸೊ ಅವರಿಗೆ ಅವರು ಪ್ರೆಸ್ ಕ್ಲಬ್ ಗೌರವ ಅತಿಥಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮ ವನ್ನು ಉದ್ಘಾಟಿಸಿದ ಮಹಾರಾಷ್ಟ್ರ ಕನ್ನಡಿಗ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ ಉದ್ಘಾಟಿಸಿದರು. ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸಮಾರಂಭದ ಅಧ್ಯಕ್ಷತೆ
ಮಂಗಳೂರಿನ ವಾಮಂಜೂರಿನಲ್ಲಿರುವ ಮಾನಸ ವಾಟರ್ ಪಾರ್ಕ್‌ನಲ್ಲಿ ಮಾನಸ ಮ್ಯಾಕ್ಸ್ ರಾಯಲ್ ಪ್ರೀಮಿಯಂ ಕ್ಲಬ್ ಸದಸ್ಯತ್ವ ಆರಂಭಗೊಂಡಿದ್ದು, ಆ ಮೂಲಕ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳಬಹದು. ಮನೋರಂಜನೆಯ ವಾಟರ್ ಪಾರ್ಕ್ ಮಾನಸ ಅಮ್ಯೂಸ್‌ಮೆಂಟ್ ವಾಟರ್ ಪಾರ್ಕ್, ಹಚ್ಚ ಹಸಿರಿನ ಪರಿಸರದಲ್ಲಿ ಪ್ರವಾಸಿಗರಿಗೆ ಮನೋರಂಜನೆ ನೀಡುವ ಪಾರ್ಕ್ ಆಗಿದ್ದು, ಅನೇಕ ಸೌಲಭ್ಯಗಳನ್ನು
ಮೂಡುಬಿದಿರೆ: ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಮೂಡುಬಿದಿರೆ ಮತ್ತು ಸರ್ವೋದಯ ಫ್ರೆಂಡ್ಸ್ ಇವುಗಳ ವತಿಯಿಂದ ಮಾಸ್ತಿಕಟ್ಟೆ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತ ಕೊಡೆ ಮತ್ತು ಪುಸ್ತಕವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್, ಗ್ಯಾರೇಜ್ ಮಾಲೀಕರ ಸಂಘದ ಅಧ್ಯಕ್ಷ ಗುರುಪ್ರಸಾದ್ ಭಂಡಾರಿ, ಪ್ರಧಾನ ಕಾರ್ಯದರ್ಶಿ ನವೀನ
ವಿಶ್ವ ಪರಿಸರ ದಿನದ ಅಂಗವಾಗಿ ನಗರದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿಯಾದ ರೋಹನ್ ಕಾರ್ಪೊರೇಷನ್ ತನ್ನ ರೋಹನ್ ಸಿಟಿ ಆವರಣದಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ರೋಹನ್ ಕಾರ್ಪೋರೇಶನ್ ನಿನ ವ್ಯವಸ್ಥಾಪಕ ನಿರ್ದೇಶಕರಾದ ರೋಹನ್ ಮೊಂತೇರೊ ರವರು ತಮ್ಮ ಉದ್ಯೋಗಿಗಳೊಂದಿಗೆ ಸಸಿಗಳನ್ನು ನೆಟ್ಟು , ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ
ಬಂಟ್ವಾಳ: ಸ್ಮಾರ್ಟ್ ಗೈಸ್ ಕೈಕಂಬ, ಅಂಬೇಡ್ಕರ್ ಯುವವೇದಿಕೆ ಬಂಟ್ವಾಳ ಆಶ್ರಯದಲ್ಲಿ ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಸಮಾಜಮುಖಿ, ಮಾನವತಾವಾದಿ ದಿ.ರಾಜ ಪಲ್ಲಮಜಲು ಅವರು ನಿಧನ ಹೊಂದಿ 3ನೇ ವರ್ಷದ ಸ್ಮರಣಾರ್ಥ, ನುಡಿನಮನ, ಪ್ರತಿಭಾ ಪುರಸ್ಕಾರ ಮತ್ತು ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾಟ ಎಸ್.ಜಿ.ಕೆ. ಟ್ರೋಫಿ 2024