Home 2024 (Page 2)

ಮೀನುಗಳಿಗಿಂತ ಮುಂಚೆ ಮರುವಾಯಿ ತಿನಿಸು

ಮೀನು ಪುರಾತನ ಕಾಲದಿಂದಲೂ ಮಾನವನ ಆಹಾರವಾಗಿದೆ. ತುಳು ಕರಾವಳಿಯ ಮುಖ್ಯವಾಗಿ ಮಂಗಳೂರು ಮತ್ತು ಮಲ್ಪೆ ಮೀನುಗಾರಿಕಾ ಬಂದರುಗಳಲ್ಲಿ ಒಟ್ಟಾರೆ ಮೀನು ಸಿಗುವುದು ತೃಪ್ತಿಕರವಾಗಿಲ್ಲ ಎಂದು ವರದಿಯಾಗಿದೆ. ವಹಿವಾಟು ಕೂಡ ಬಿಸಿ ಕಳೆದುಕೊಂಡಿದ್ದು ಮೀನುಗಾರರು ಚಿಂತೆಗೆ ಬಿದ್ದಿದ್ದಾರೆ. ಮಲ್ಪೆ, ಮಂಗಳೂರುಗಳ ಇನ್ನೊಂದು ಸಮಸ್ಯೆಯೆಂದರೆ ಮೀನಿನ ಬೋಟುಗಳು ಇಲ್ಲಿಯವರದೇ ಆದರೂ

ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ನರೇಶ್ಚಂದ್ ಹೆಗ್ಡೆ ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಚುನಾವಣೆ ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ನಾಮಪತ್ರ ಸಲ್ಲಿಸಿದರು. ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಶಿಕ್ಷಕರೂ, ಖ್ಯಾತ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರೂ,

ಮುಂಬೈ: NDA ಸರ್ಕಾರ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲ – ರಮಾನಾಥ ರೈ

ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ ಮುಂಬಯಿ-ಕರ್ನಾಟಕದ ಜನತೆಯ ಜನ್ಮಭೂಮಿ-ಕರ್ಮಭೂಮಿಯ ರೈಲು, ವಿಮಾನ, ಬಸ್ ಪ್ರಯಾಣದ ತೊಂದರೆ ನಿಭಾಯಿಸಲಿದೆ. ಕರ್ನಾಟಕದಂತೆ ಕೇಂದ್ರ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಂಡಿಯಾ ಕೂಟಕ್ಕೆ ವರದಾನವಾಗಲಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದರು. ಅವರು ಮುಂಬೈಯ ಅಂಧೇರಿ ಪೂರ್ವದ ಚಕಲಾ ಹೊಟೇಲ್ ಸಾಯಿ ಪ್ಯಾಲೇಸ್‌ನಲ್ಲಿ

ಪಲಿಮಾರು : ಮೇ 18ರಂದು ಯುವ ವಿಪ್ರ ಸಮಾವೇಶ

ಶ್ರೀ ಪಲಿಮಾರು ಮೂಲ ಮಠದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯ 18 – 40ರ ವಯೋಮಿತಿಯ ತ್ರಮತಸ್ಥ ಬ್ರಾಹ್ಮಣ ಯುವಕರ ಸಮಾವೇಶ ವಿಹಿತಮ್ ಮೇ 18 ಶನಿವಾರದಂದು ನಡೆಯಲಿದೆ ಎಂದು ಪಲಿಮಾರು ಮಠಾಧೀಶ ಶ್ರೀವಿದ್ಯಾದೀಶ ತೀರ್ಥರು ಹೇಳಿದ್ದಾರೆ. ಪಲಿಮಾರು ಮಠದಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾತಃ ಸ್ಮರಣೀಯರಾದ ಶ್ರೀ

ಹೆಜಮಾಡಿ : ಹೆದ್ದಾರಿಯಂಚಿಗೆ ಮೀನಿನ ನೀರು ಚೆಲ್ಲಿದ ವಾಹನ -ಗ್ರಾ.ಪಂ.ನಿಂದ 5 ಸಾವಿರ ದಂಡ

ಹೆಜಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ದಾರಿ ಇಕ್ಕೆಲಲ್ಲಿ ಭಟ್ಕಳ ಮೂಲದ ಮೀನಿನ ವಾಹನವೊಂದರಿಂದ ದುರ್ನಾತ ಬೀರುವ ಮೀನಿನ ನೀರನ್ನು ಚೆಲ್ಲಿದ ತಪ್ಪಿಗೆ ಹೆಜಮಾಡಿ ಗ್ರಾಮ ಪಂಚಾಯಿತಿ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ. ನೀರು ಚೆಲ್ಲುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು ಗ್ರಾ.ಪಂ. ಸದಸ್ಯರು ಸಹಿತ ಸ್ಥಳೀಯ ಟೋಲ್ ಸಿಬ್ಬಂದಿಗಳು ಸೇರಿ ಲಾರಿಯನ್ನು ತಡೆದು,

ಬ್ರಹ್ಮಾವರ : ಹೆದ್ದಾರಿ ಬದಿ ಸ್ವಚ್ಛತಾ ನಿರ್ವಹಣೆ

ಬ್ರಹ್ಮಾವರ : ರಾಷ್ಟ್ರೀಯ ಹೆದ್ದಾರಿ 66 ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ಸರಿಯಾಗಿ ಹರಿದುಹೋಗದೆ ರಸ್ತೆಯಲ್ಲಿಯೇ ತುಂಬಿಹರಿಯುವ ಸಮಸ್ಯೆಗೆ ಬ್ರಹ್ಮಾವರ ಭಾಗದಲ್ಲಿ ಪೂರ್ವಸಿದ್ಧತೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಪ್ರತೀವರ್ಷ ರಸ್ತೆಯಲ್ಲಿ ನೀರುನಿಂತು ರಸ್ತೆ ಬದಿಯಲ್ಲಿ ಹೋಗುವ ಪ್ರಯಾಣಿಕರಿಗೆ ಮತ್ತು ಬೇರೆ ವಾಹನಗಳಿಗೆ ಕೊಳಕು ನೀರು ಹಾರಿ ರಾದ್ಧಾಂತವಾಗುವ

ಪುತ್ತೂರು : ವೈದ್ಯರ ಎಡವಟ್ಟಿನಿಂದ ವ್ಯಕ್ತಿ ಸಾವು

ಪುತ್ತೂರು : ವೈದ್ಯರ ಎಡವಟ್ಟಿಗೆ ರೋಗಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ರಾತ್ರೋರಾತ್ರಿ ರೋಗಿಯ ಸಂಬಂಧಿಕರು ಮತ್ತು ಸಾರ್ವಜನಿಕರು ಆಸ್ಪತ್ರೆಯ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಕಕ್ಕೆಪದವಿನ ಪಿಲಿಬೈಲ್ ನಿವಾಸಿ ಕೃಷ್ಣಪ್ಪ ಗೌಡ ಎಂಬವರು ಜ್ವರದ ಕಾರಣ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ

ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ…ಮೇ 16

ಪ್ರತಿ ವರ್ಷ ಮೇ 16ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ ಎಂದು ಆಚರಿಸಲಾಗುತ್ತದೆ ಮತ್ತು ಡೆಂಗ್ಯೂ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ . 2023ರ ಆಚರಣೆಯ ಘೋಷ ವಾಕ್ಯ ಎಲ್ಲರ ಸಹಭಾಗಿತ್ವ ದಿಂದ ಡೆಂಗ್ಯೂ ಸೋಲಿಸೋಣ ಎಂಬುದಾಗಿದೆ. ಏನಿದು ಡೆಂಗ್ಯೂ ಜ್ವರ? ಡೆಂಗ್ಯೂ ಜ್ವರ ಮತ್ತು

ಡೆಂಗೆ ಜ್ವರ ಯಾಕೆ, ಹೇಗೆ?

ಡೆಂಗೆ ಜ್ವರ ಯಾಕೆ, ಹೇಗೆ?ಡೆಂಗೆ ಜ್ವರ ಮತ್ತು ಡೆಂಗೆ ರಕ್ತಸ್ರಾವ ಜ್ವರಗಳು ಉಷ್ಣವಲಯದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿಯಾದ, ತೀವ್ರ ಜ್ವರಲಕ್ಷಣದ ಒಂದು ರೋಗವಾಗಿದೆ. ಡೆಂಗೇ ಎಂಬ ವೈರಸ್ ಸೋಂಕುವಿನಿಂದ ಉಂಟಾಗುವ ಈ ಜ್ವರವು ‘ಏಡಿಸ್’ ಎಂಬ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಡೆಂಗೇ ಜ್ವರವು ಸಾಂಕ್ರಾಮಿಕ ರೋಗವಾಗಿರುತ್ತದೆ. ಈ ರೋಗಕ್ಕ ‘ಲಸಿಕೆ’

ವಿಶ್ವ ವಕ್ರದಂತ ಆರೋಗ್ಯ ದಿನ…ಮೇ 15

ವಕ್ರದಂತ ರೋಗಿಗಳಿಗೆ ಶುಕ್ರದೆಸೆ ತಂದ “ದಂತ ಕ್ಲಿಯರ್ ಅಲೈನರ್” ನಸುಗುಲಾಬಿ ಬಣ್ಣದ ವಸಡಿನ ಮೇಲೆ ಮುತ್ತು ಪೋಣಿಸಿದಂತೆ ಸಾಲಾಗಿ ಶುಭ್ರ ದಂತ ಪಂಕ್ತಿಗಳು ಪಳಪಳನೆ ಹೊಳೆಯುತ್ತಿದ್ದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರಿಗೂ ಸುಂದರ ದಂತ ಪಂಕ್ತಿಗಳು ಇರಬೇಕೆಂಬ ಮಹದಾಷೆ ಇರುವುದಂತು ಸತ್ಯ. ಹಲ್ಲುಗಳು ಎಲ್ಲೆಂದರಲ್ಲಿ ಮೊಳೆದು, ಎರಾಬಿರ್ರಿಯಾಗಿ ವಸಡಿನಲ್ಲಿ