Home 2024 (Page 49)

ಪಡುಬಿದ್ರಿ: ತೀವ್ರಗೊಂಡ ಕಡಲ್ಕೊರೆತ: ತೆಂಗಿನ ಮರ ಸಮುದ್ರ ಪಾಲಾಗುವ ಸಾಧ್ಯತೆ

ಪಡುಬಿದ್ರಿ ನಡಿಪಟ್ಣ ಪ್ರದೇಶದಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದ್ದು ಮೀನುಗಾರಿಕಾ ಶೆಡ್ ಸಹಿತ ಹತ್ತಾರು ತೆಂಗಿನ ಮರಗಳು ಸಮುದ್ರ ಪಾಲಾಗುವ ಸಾಧ್ಯತೆ ನಿಶ್ಚಲವಾಗಿದ್ದೂ ಜನಪ್ರತಿನಿಧಿಗಳು ಸಹಿತ ಅಧಿಕಾರಿಗಳು ನಮ್ಮ ಮನವಿಗೆ ಪೂರಕವಾಗಿ ಸ್ಪಂಧಿಸಿಲ್ಲ ಎಂಬುದಾಗಿ ಮೀನುಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.  ಈ ಬಗ್ಗೆ ಮಾತನಾಡಿದ ಮೀನುಗಾರ ನೂತನ್ ಪುತ್ರನ್,

ಬಂಟ್ವಾಳ: ನದಿ ತೀರದ ತಗ್ಗು ಪ್ರದೇಶಗಳು ನೆರೆ ನೀರಿನಿಂದ ಜಲಾವೃತ

ಬಂಟ್ವಾಳ: ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ರಾತ್ರಿಯಿಡಿ ಭಾರಿ ಮಳೆ ಸುರಿದಿದ್ದು ನದಿ ತೀರದ ತಗ್ಗು ಪ್ರದೇಶಗಳು ನೆರೆ ನೀರಿನಿಂದ ಜಲಾವೃತಗೊಂಡಿದೆ. ನೇತ್ರಾವತಿ ನದಿಯಲ್ಲಿ ಗುರುವಾರ ಬೆಳಗ್ಗಿನ ವೇಳೆ ನೀರಿನ ಮಟ್ಟ7.8 ಮೀಟರ್ ದಾಖಲಾಗಿದ್ದು ಅಪಾಯದ ಮಟ್ಟವನ್ನು ಮೀರುವ ರೀತಿ ನದಿಯಲ್ಲಿ ನೀರು ಹರಿದು ಬರುತ್ತಿದ್ದು ಜನರಲ್ಲಿ ಆತಂಕ ಮನೆಮಾಡಿತ್ತು. ಪಾಣೆಮಂಗಳೂರು

ಮಣಿಪಾಲ : ಪದ್ಮವಿಭೂಷಣ ಡಾ.ಎಂ.ಎಸ್ ವಲಿಯಾಥನ್ ನಿಧನ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಮಾಜಿ ಕುಲಪತಿ, ವಿಶ್ವ ವಿಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಹಾಗೂ ಖ್ಯಾತ ಶಿಕ್ಷಣ ತಜ್ಞ ಪ್ರೊಫೆಸರ್ ಮಾರ್ತಾಂಡ ವರ್ಮ ಶಂಕರನ್ ವಲಿಯಥಾನ್ (ಎಂ ಎಸ್ ವಲಿಯಥಾನ್) ತನ್ನ 90 ನೇ ವಯಸ್ಸಿನಲ್ಲಿ ಮಣಿಪಾಲದಲ್ಲಿ ನಿಧನರಾದರು. ಪ್ರೊ. ವಲಿಯಾಥನ್ ಅವರು ಹೃದಯ ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ತಂತ್ರಜ್ಞಾನಕ್ಕೆ ನೀಡಿದ ಕೊಡುಗೆ

ಸುರತ್ಕಲ್: ಜುಲೈ 19ರಂದು ಬಿಎಂಆರ್ ಗ್ರೂಪ್ ವತಿಯಿಂದ ಬಿಎಂಆರ್ ಗ್ರ್ಯಾಂಡ್ ಸಿಟಿ ಬ್ರೋಚರ್ ಬಿಡುಗಡೆ

ಮಂಗಳೂರಿನ ಬಿಎಂಆರ್ ಗ್ರೂಪ್ ವತಿಯಿಂದ ಬಿಎಂಆರ್ ಗ್ರ್ಯಾಂಡ್ ಸಿಟಿ ಇದರ ಬ್ರೋಚರ್ ಬಿಡುಗಡೆ ಸಮಾರಂಭವು ಸುರತ್ಕಲ್‌ನ ಕೃಷ್ಣಾಪುರದಲ್ಲಿ ನಾಳೆ ನಡೆಯಲಿದೆ. ಜುಲೈ 19ರ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಬ್ರೋಚರ್ ಬಿಡುಗಡೆ ಸಮಾರಂಭ ನಡೆಯಲಿದ್ದು, ಬಿಎಂಆರ್ ಗ್ರೂಪ್‌ನ ಚೇರ್‌ಮೆನ್ ಹಾಜಿ ಕೆ. ಇಬ್ರಾಹಿಂ, ಖತೀಬ್ ಮುಸ್ತಫಾ ಸಅದಿ, ಮಾಜಿ ಶಾಸಕ ಮೊಯ್ದಿನ್ ಬಾವಾ,

ಬೈಂದೂರು: ಸೋಮೇಶ್ವರದ ಬಳಿ ಗುಡ್ಡ ಕುಸಿದರೆ ಅಧಿಕಾರಿಗಳೇ ಹೊಣೆ – ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಶಾಸಕರಾದ ಗುರುರಾಜ್ ಗಂಟಿಹೊಳೆ ಖಡಕ್ ಸೂಚನೆ

ಬೈಂದೂರು: ಬೈಂದೂರಿನ ಪಡುವರಿಯ ಸೋಮೇಶ್ವರ ಬೀಚ್ ಗೆ ತೆರಳುವ ರಸ್ತೆಯಲ್ಲಿ ಗುಡ್ಡ ಕುಸಿಯುವ ಆತಂಕ ಎದುರಾಗಿದ್ದು, ಈ ಸಂಬಂಧ ಅಗತ್ಯ ಕಾಮಗಾರಿ ವ್ಯವಸ್ಥಿತ ರೀತಿಯಲ್ಲಿ ನಡೆಸುವಂತೆ ಈ ಹಿಂದೆಯೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು.‌ ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಈಗ ಮಳೆಗೆ ಗುಡ್ಡ ಕುಸಿದರೆ ಅಧಿಕಾರಿಗಳೇ ಅದಕ್ಕೆ ಜವಾಬ್ದಾರರು. ತಕ್ಷಣವೇ

ಚಿಕ್ಕಮಗಳೂರು : ಮುಳ್ಳಯ್ಯನಗಿರಿಗೆ ಆಗಮಿಸುವ ಪ್ರವಾಸಿಗರಿಗೆ ಪ್ರವೇಶ ನಿಷೇಧ – ಜಿಲ್ಲಾಧಿಕಾರಿ ಮೀನಾ ನಾಗರಾಜ್

ಚಿಕ್ಕಮಗಳೂರು: ಶೃಂಗೇರಿ, ನರಸಿಂಹರಾಜಪುರ, ಮೂಡಿ ಗೆರೆ, ಕಳಸ ಕುದುರೆಮುಖ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಜಿಲ್ಲೆಯಲ್ಲಿನ ಪ್ರವಾಸಿತಾಣಗಳಿಗೆ ಬರುವ ಪ್ರವಾಸಿಗರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಮನವಿ ಮಾಡಿ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಜು.22ರ ವರೆಗೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಅತಿಯಾದ ಮಳೆಯಿಂದಾಗಿ

ಮಂಗಳೂರು : ಡೆಂಗ್ಯೂ ಬಾದಿಸದಂತೆ ಎಚ್ಚರ ವಹಿಸಿ- ಡೆಂಗ್ಯೂ ನಿರ್ಮೂಲನೆ ಸಮಿತಿಯ ಸಭೆಯಲ್ಲಿ ಅಧಿಕಾರಿಗಳಿಗೆ ಮೇಯರ್ ಸೂಚನೆ

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಬಾದಿಸದಂತೆ ಎಚ್ಚರಿಕೆ ವಹಿಸಬೇಕಾಗಿರುವುದನ್ನು ಗಮನಿಸಿ ಮೇಯರ್ ಸುಧೀರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಡೆಂಗ್ಯೂ ನಿಮೂ೯ಲನೆ ಸಮಿತಿಯ ಸಭೆ ಜರಗಿತು. ಸಭೆಯಲ್ಲಿ ಮಾತನಾಡಿದ ಮೇಯರ್ ರವರು ಡೆಂಗ್ಯೂಯನ್ನು ತಡೆಗಟ್ಟಲು ಮೊತ್ತ ಮೊದಲನೇಯದಾಗಿ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬೇಕು.

ರಾಷ್ಟ್ರಪ್ರಶಸ್ತಿ ವಿಜೇತ ರಂಗಕರ್ಮಿ ಸದಾನಂದ ಸುವರ್ಣ ನಿಧನ

ರಂಗ ಕರ್ಮಿ, ನಾಟಕಕಾರ, ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ತಯಾರಕ, ನಿರ್ದೇಶಕ ಸದಾನಂದ ಸುವರ್ಣ ಅವರು ಮಂಗಳೂರಿನ ಕಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.ಅವರಿಗೆ 93 ವರುಷ ವಯಸ್ಸಾಗಿತ್ತು. ಮುಂಬಯಿಯಲ್ಲಿ ತುಳು ಕನ್ನಡ ನಾಟಕಕಾರ ನಟರಾಗಿ ಖ್ಯಾತಿ ಗಳಿಸಿದ್ದ ಸದಾನಂದ ಸುವರ್ಣ ಅವರು ಕಳೆದ ಕಾಲು ಶತಮಾನದಿಂದ ಮಂಗಳೂರು ನಿವಾಸಿಯಾಗಿದ್ದರು. ಕುಬಿ ಮತ್ತು

MRPL 4 ನೇ ಹಂತದ ನಿರ್ವಸಿತರ ಉದ್ಯೋಗ ಹಾಗೂ ಪುನರ್ವಸತಿ ಬೇಡಿಕೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ, ಅಧಿಕಾರಿಗಳ ಸ್ಪಂದನೆ

ಸುರತ್ಕಲ್ : MRPL 4ನೇ ಹಂತದ ಭೂ ನಿರ್ವಸಿತರಾಗುವ ಕುತ್ತೆತೂರು ಪೆರ್ಮುದೆ ಎಕ್ತಾರು ಗ್ರಾಮದ ನಿವಾಸಿಗಳಿಗೆ ಸಿಗಬೇಕಾದ ಪುನರ್ವಸತಿ ಹಾಗೂ ಉದ್ಯೋಗ ಮತ್ತಿತ್ತರ ಬೇಡಿಕೆಗಳ ಈಡೇರಿಸುವ ಕುರಿತಂತೆ ದ.ಕ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜು.12ರಂದು ಮಹತ್ವದ ಸಭೆ ನಡೆಯಿತು. ಸ್ಥಳೀಯ ಶಾಸಕರು ಮತ್ತು ದ.ಕ ಜಿಲ್ಲಾ ಸಂಸದರು

ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ ಸಂಘ ಸಂಸ್ಥೆಗಳ ಪಾತ್ರ ಮಹತ್ತರವಾದುದು – ಮಾರ್ಗರೇಟ್ ಸುದರ್ಶಿನಿ

ಭಾರತ ಸರಕಾರದ ನೆಹರು ಯುವ ಕೇಂದ್ರ ಮಂಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ರೋಟರಿ ಕ್ಲಬ್ ಬೈಕಂಪಾಡಿ,ಪೂಜಾ ಎರೇಂಜರ್ಸ್ ಮತ್ತು ಪೂಜಾ ಫ್ರೆಂಡ್ಸ್ ಹಳೆಯಂಗಡಿ, ಗ್ರಾಮ ಪಂಚಾಯತ್ ಪಡುಪಣಂಬೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಅತ್ತೂರು ಕೆಮ್ರಾಲ್ ಇದರ ಜಂಟಿ ಆಶ್ರಯದಲ್ಲಿ ಫೇಮಸ್ ಯೂತ್ ಕ್ಲಬ್ (ರಿ) ಮತ್ತು ಮಹಿಳಾ ಮಂಡಲ 10ನೇ ತೋಕೂರು, ಹಳೆಯಂಗಡಿ