Home 2025 June (Page 4)

ಮಂಗಳೂರು:ಮುಂದುವರಿದ ಮಳೆ: ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ, ಸಂಚಾರಕ್ಕೆ ಅಡ್ಡಿ

ಮಂಗಳೂರು: ನಗರದಲ್ಲಿ ಭಾರಿ ಮಳೆ ಮುಂದುವರಿದಿದೆ. ನಗರದ ಹೊರ ವಲಯದ ಕೆತ್ತಿಕಲ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಜರಿದಿದ್ದು, ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ನಗರದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಜಲಾವೃತವಾಗಿದ್ದ ಕೊಡಿಯಾಲ್ ಬೈಲ್, ಜಪ್ಪಿನಮೊಗರು ಮತ್ತಿತರ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಇಳಿದಿದೆ. ಮನೆಯೊಳಗೆ ತುಂಬಿದ್ದ ಕೆಸರು ನೀರನ್ನು

ಮಂಗಳೂರು: ಭಾರೀ ಮಳೆ ಹಿನ್ನೆಲೆ: ಸಂತ್ರಸ್ತರಿಗೆ ಕದ್ರಿ ಕ್ಷೇತ್ರದಲ್ಲಿ ಮಧ್ಯಾಹ್ನದ ಊಟದ ವ್ಯವಸ್ಥೆ

ನಗರದಲ್ಲಿ ಮಳೆಯಿಂದ ಸಂತ್ರಸ್ತರಿಗೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ರವಿವಾರ ಮಧ್ಯಾಹ್ನ ಊಟದ ವ್ಯವಸ್ಥೆ ನೀಡಲು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನಿರ್ಧಾರ ಮಾಡಿದೆ. ಮಂಗಳೂರು ನಗರದ ಹಲವು ಪ್ರದೇಶಗಳು ಜಲಾವೃತವಾಗಿದ್ದು, ಮನೆಯ ಒಳಗಡೆ ನೀರು ನುಗ್ಗಿ ಜನರಿಗೆ ಇಂದು ಮಧ್ಯಾಹ್ನ ಅಡುಗೆ ಮಾಡಲು ಕೂಡ ತೊಂದರೆಯಾಗಿದೆ. ಈ ಸಂದರ್ಭದಲ್ಲಿ ಮಧ್ಯಾಹ್ನದ ಊಟದ

ದಕ್ಷಿಣ ಕನ್ನಡದಲ್ಲಿ ಬಿರುಸಿನ ಮಳೆ: ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ

ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಎಲ್ಲಾ ತಹಶೀಲ್ದಾರರು ಹಾಗೂ ಇನ್ಸಿಡೆಂಟ್ ಕಮಾಂಡರ್ ಗಳು ಅಪಾಯದಂಚಿನಲ್ಲಿರುವ ಮನೆಗಳ ಕುಟುಂಬಗಳನ್ನು ಕಾಳಜಿ ಕೇಂದ್ರ /ಸುರಕ್ಷಿತ ಸ್ಥಳಗಳಿಗೆ ಕೂಡಲೇ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.ನೆರೆ ಉಂಟಾಗುವ ಪ್ರದೇಶಗಳ ಮೇಲೆ ತೀರಾ ನಿಗಾ ವಹಿಸಿ ಎಲ್ಲಾ ರಕ್ಷಣಾ ಸಾಮಾಗ್ರಿಗಳನ್ನು

ಕರಾವಳಿ ಸಹಿತ 3 ಜಿಲ್ಲೆಗಳಲ್ಲಿ ಭಾರೀ ಮಳೆ:ರೆಡ್‌ ಅಲರ್ಟ್‌ ಘೋಷಣೆ

ರಾಜ್ಯದಲ್ಲಿ ಮುಂಗಾರು ಮಳೆ ಹಲವೆಡೆ ವ್ಯಾಪಿಸಿ ಉತ್ತಮ ಮಳೆಯಾಗುತ್ತಿದ್ದು, ಕೆಲವು ಉತ್ತಮ ಮಳೆಯಾಗಿ ಜನಜೀವನ ವ್ಯಸ್ತಗೊಂಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾನುವಾರವೂ ಉತ್ತಮ ಮಳೆಯಾಗುತ್ತಿದ್ದು, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸಹಿತ ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾನುವಾರ (ಜೂ.15) ಭಾರೀ ಮಳೆಯಾಗುವ

ಹರಿತ್ ಯೋಗ – ಯೋಗ ಹಾಗು ಪರಿಸರದ ಸಂಯೋಗ ಕಾರ್ಯಕ್ರಮ

ಸುಳ್ಯ: ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 13.06.2025 ರಂದು ವಿಶ್ವ ಯೋಗ ದಿನದ ಅಂಗವಾಗಿ ಹರಿತ್ ಯೋಗ – ಯೋಗ ಹಾಗು ಪರಿಸರದ ಸಂಯೋಗ ಕಾರ್ಯಕ್ರಮವನ್ನು ಸೋಣoಗೇರಿಯಲ್ಲಿರುವ ಕೆ ವಿ ಜಿ ಆಯುರ್ವೇದ ಮೂಲಿಕಾ ಉದ್ಯಾನವನದಲ್ಲಿ ಕಾಲೇಜಿನ ದ್ರವ್ಯಗುಣ, ಸ್ವಸ್ಥವೃತ್ತ ವಿಭಾಗ ಹಾಗು ಎನ್ ಎಸ್ ಎಸ್ ವಿಭಾಗದ

ದೇರಳಕಟ್ಟೆ: ಯುವಕ ಹೃದಯಾಘಾತದಿಂದ ಮೃತ್ಯು

ಉಳ್ಳಾಲ : ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೇರಳಕಟ್ಟೆ ಕಾನೆಕೆರೆ ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ. ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ ವಿನಯ್ ಕುಮಾರ್ (25) ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದವರು. ನಸುಕಿನ ಜಾವ ಹೃದಯ ಭಾಗದಲ್ಲಿ ನೋವುಂಟಾಗಿದ್ದು, ಕೆಲ ಕ್ಷಣಗಳಲ್ಲೇ ವಿನಯ್ ಸಾವನ್ನಪ್ಪಿದ್ದಾರೆ.ನಡುಪದವು

ಬೆಳ್ತಂಗಡಿಗೆಹೊಸ ನ್ಯಾಯಾಲಯ ಕಟ್ಟಡಕ್ಕೆ ಸರ್ಕಾರದಿಂದ 9 ಕೋಟಿ ಅನುದಾನ ಮಂಜೂರು: ಸಚಿವರಿಗೆ ಅಭಿನಂದನೆ

ಬೆಳ್ತಂಗಡಿ. ತಾಲೂಕಿನ ಸುಮಾರು 60 ವರ್ಷ ಹಳೆಯದಾದ ಬೆಳ್ತಂಗಡಿಯ ನ್ಯಾಯಾಲಯದ ಕಟ್ಟಡ ನಾದುರಸ್ತಿಯಲ್ಲಿದ್ದು ಹೊಸ ನ್ಯಾಯಾಲಯದ ಕಟ್ಟಡಕ್ಕೆ ಸರ್ಕಾರ 9 ಕೋಟಿ ಅನುದಾನ ಮಂಜೂರು ಗೊಳಿಸಿದೆ. ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಸಚಿವರಾದ ಎಚ್ ಕೆ ಪಾಟೀಲ್ ರವರನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನು ಭೇಟಿ ಮಾಡಿ ಅಭಿನಂದನೆ

ಕರಾವಳಿ ಭಾಗದಲ್ಲಿ ಘಟನಾವಳಿ ಆಧಾರದಲ್ಲಿ ಕಾರ್ಯಪಡೆ ರಚನೆ : ಡಾ. ಜಿ ಪರಮೇಶ್ವರ್

ಉಡುಪಿ: ಕರಾವಳಿ ಭಾಗದಲ್ಲಿ ನಡೆದಿರುವ, ನಡೆಯುತ್ತಿರುವ ಘಟನಾವಳಿಗಳ ಆಧಾರದಲ್ಲಿ ಕೋಮು ಸಂಘರ್ಷಗಳ ತಡೆಗಾಗಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ಯಾವುದೇ ಜಿಲ್ಲೆಯನ್ನ ಕೋಮು ಸೂಕ್ಷ್ಮ ಪ್ರದೇಶ ಎಂದು ಬಿಂಬಿಸಲು ನಾವು ಇದನ್ನು ಮಾಡಿಲ್ಲ. ಇದರ ಅಗತ್ಯವೂ ಎಲ್ಲೂ ಬರಬಾರದೆಂದು ಈಗಾಗಲೇ ಹೇಳಿದ್ದೇನೆ ಎಂದು ರಾಜ್ಯ ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.

ಮಂಗಳೂರು: ಆವಿಷ್ಕಾರ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಯೋಗ ತರಬೇತಿ ಶಿಬಿರ

ದಕ್ಷಿಣ ಕನ್ನಡ ಜಿಲ್ಲಾ ಆಯುಷ್ ಇಲಾಖೆ ಹಾಗೂ ಆವಿಷ್ಕಾರ ಯೋಗ ಮಂಗಳೂರು ಇದರ ಸಹಯೋಗದಲ್ಲಿ ಜೂನ್ 17 ರಿಂದ 21ರ ವರೆಗೆ ಆವಿಷ್ಕಾರ ಯೋಗ ಚಿಕಿತ್ಸಾ ಕೇಂದ್ರ ಬಿಜೈ ಮತ್ತು ಬಂಟ್ಸ್ ಹಾಸ್ಟೆಲ್‌ನಲ್ಲಿ ಯೋಗ ದಿನದ ಸಾಮಾನ್ಯ ಪ್ರೊಟೋಕಾಲ್‌ನ ಯೋಗ ತರಬೇತಿಯು ನಡೆಯಲಿದೆ. ಈ ಶಿಬಿರ ಉಚಿತವಾಗಿದ್ದು ಸಾರ್ವಜನಿಕರು ತರಬೇತಿಗೆ ಭಾಗವಹಿಸಬಹುದು. ತರಬೇತಿ ಸಿಗುವ ಸಮಯ ಬೆಳಿಗ್ಗೆ 6

ಮಂಗಳೂರು:ಸ್ಪೆಷಲ್ ಆ್ಯಕ್ಷನ್ ಫೋರ್ಸ್ ಗೆ ಚಾಲನೆ

ಕರಾವಳಿಯಲ್ಲಿ ಕೋಮು ಸಂಘರ್ಷ ತಡೆಯುವ ನಿಟ್ಟಿನಲ್ಲಿ ರಚಿಸಲಾದ ವಿಶೇಷ ಕಾರ್ಯ ಪಡೆ (ಸ್ಪೆಷಲ್ ಆ್ಯಕ್ಷನ್ ಫೋರ್ಸ್) ನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು. ನಗರ ಪೊಲೀಸ್ ಕಮಿಷನರ್ ಕಚೇರಿ ಬಳಿಯ ಗೆಸ್ಟ್ ಹೌಸ್ ಕಟ್ಟಡದಲ್ಲಿ ವಿಶೇಷ ಕಾರ್ಯ ಪಡೆ ಕಚೇರಿ ಕಾರ್ಯಾಚರಣೆ ನಡೆಸಲಿದೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್