ಪಡುಬಿದ್ರಿ: ಹೆದ್ದಾರಿ ಹೊಂಡ ತಪ್ಪಿಸಲು ಹೋದ ಕಾರು ಸ್ಕೂಟರ್‌ಗೆ ಡಿಕ್ಕಿ – ಸ್ಕೂಟರ್ ಸವಾರಗೆ ಗಂಭೀರ ಗಾಯ

ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಸೀದಿ ಸಮೀಪ ಹೆದ್ದಾರಿಯ ಹೊಂಡ ತಪ್ಪಿಸಲು ಹೋದ ಕಾರು ಚಾಲಕನೋರ್ವ ಸ್ಕೂಟರ್ ಗೆ ಡಿಕ್ಕಿಯಾದ ಪರಿಣಾಮ ಗಂಭೀರ ಗಾಯಗೊಂಡಿದ್ದು ತಕ್ಷಣ ಆತನನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಕೂಟರ್ ದಾಖಲೆ ಪರಿಶೀಲನೆ ಮಾಡಿದ ಸ್ಥಳೀಯ ಅದಮಾರು ನಿವಾಸಿ ನವನೀತ್ ಪಿ. ಎಂಬವರಿಗೆ ಸೇರಿದ್ದಾಗಿದ್ದು, ಅವರೇ ಈ ಸ್ಕೂಟರನ್ನು ಚಲಸಯಿಸುತ್ತಿದ್ದರೋ ಎಂಬುದು ದೃಢಪಟ್ಟಿಲ್ಲ.

ಅದಮಾರು ಕಡೆಯಿಂದ ಹೆದ್ದಾರಿಗೆ ಬಂದ ಸ್ಕೂಟರ್ ಮಂಗಳೂರು ಕಡೆಗೆ ಹೋಗುತ್ತಿದ್ದ ವೇಳೆ, ಅದೇ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಮಹೇಂದ್ರ ಕಾರಿನ ಚಾಲಕ ಹೆದ್ದಾರಿಯ ಹೊಂಡ ತಪ್ಪಿಸಲು ಯಾವುದೇ ಸೂಚನೆ ನೀಡದೆ ತಿರುಗಿಸಿದ್ದರ ಪರಿಣಾಮ ಸ್ಕೂಟರ್ ಗೆ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಎಸೆಯಲ್ಪಟ್ಟಿದ್ದ ಸ್ಕೂಟರ್ ಸವಾರ ಅದೇ ಕಡೆಯಿಂದ ಬರುತ್ತಿದ್ದ ಮಾರುತಿ ಕಾರಿಗೆ ಡಿಕ್ಕಿಯಾಗಿದ್ದ, ಮಾರುತಿ ಕಾರಿನ ಚಾಲಕನ ಸಮಯ ಪ್ರಜ್ಞೆಯಿಂದ ಸ್ಕೂಟರ್ ಸವಾರ ಪ್ರಾಣಾಪಾಯದಿಂದ ಪಾರಾಗುವಂತ್ತಾಗಿದೆ ಎಂಬುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದು, ಈ ಅಪಘಾತಕ್ಕೆ ಹೊಂಡಮಯ ಹೆದ್ದಾರಿ ಕಾರಣ ಎಂಬುದಾಗಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
