ಬೀಪ್ ಸ್ಟಾಲ್ ನಿರ್ಮಾಣವಾದ್ರೆ ಸೆಂಟ್ರಲ್ ಮಾರ್ಕೆಟ್‌ಗೆ ಶಿಲಾನ್ಯಾಸವೇ ಮಾಡುವುದಿಲ್ಲ : ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ನಾನು ನಾಲ್ಕು ವರ್ಷದಿಂದ ಶಾಸಕನಾಗಿದ್ದೇನೆ. ಆದ್ರೆ ಬಾಲ್ಯದಿಂದಲೇ ನಾನು ಸ್ಚಯಂ ಸೇವಕ ಸಂಘದ ಸೇವಕ‌. ಗೋಹತ್ಯೆಯನ್ನು ನಾನು ಕಟಿಬದ್ಧವಾಗಿ ಖಂಡಿಸುತ್ತೇನೆ, ಬಿಜೆಪಿ ಸರ್ಕಾರ ಇತ್ತೀಚೆಗೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದೆ. ಈ ಮಧ್ಯೆ ಬೀಪ್ ಸ್ಟಾಲ್ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ಒಂದು ವೇಳೆ ಸ್ಟಾಲ್ ನಿರ್ಮಾಣವಾದ್ರೆ ನಾನಂತೂ ಸೆಂಟ್ರಲ್ ಮಾರ್ಕೆಟ್‌ ನಿರ್ಮಾಣವಾದ ಬಳಿಕ ಶಿಲಾನ್ಯಾಸವೇ ಮಾಡುವುದಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಖಾರವಾಗಿ ಹೇಳಿಕೆ ನೀಡಿದರು.

ಸ್ಮಾರ್ಟ್ ಸಿಟಿಯ ಸೆಂಟ್ರಲ್ ಮಾರ್ಕೆಟ್ ಕಟ್ಟಡದಲ್ಲಿ 9 ಬೀಫ್ ಸ್ಟಾಲ್ ನಿರ್ಮಾಣ ವಿಚಾರವಾಗಿ ವಿಎಚ್‌ಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಶಾಸಕ ಕಾಮತ್‌ಗೆ ಮನವಿ ಮಾಡಿದರು.ಈ ಸಂದರ್ಭ ಮಾತನಾಡಿದ ಅವರು ‘ಸ್ಮಾರ್ಟ್‌ಸಿಟಿಯಲ್ಲಿ ಈ ಮಾರುಕಟ್ಟೆ ನನ್ನ ಕ್ಷೇತ್ರದ ಪುರಾತನ ಮಾರುಕಟ್ಟೆ.

ನಿರ್ಮಾಣ ಆಗಲಿರುವ ಮಾರುಕಟ್ಟೆಯಲ್ಲಿ ಬೀಪ್ ಸ್ಟಾಲ್ ಯೋಜನೆ ಕೈ ಬಿಡದಿದ್ರೆ ನಾನು ಶಿಲಾನ್ಯಾಸವೇ ಮಾಡಲ್ಲ. ಈ ಹಿಂದಿನ ಸರ್ಕಾರದಲ್ಲಿ ಈ ಕಟ್ಟಡದ ಯೋಜನೆ ಹಾಕಲಾಗಿತ್ತು. ಆದ್ರೆ ಹಿಂದೆನೇ ಕಾಮಗಾರಿ ಆಗಬೇಕಿತ್ತು. ಆದ್ರೆ ಕಾಂಗ್ರೆಸ್ ಇದಕ್ಕೆ ಕೋರ್ಟ್‌ ನಿಂದ ಸ್ಟೇ ತಂದಿತ್ತು. ಇಲ್ಲಿ ವಿವಿಧ ಯೋಜನೆಗಳಿಗೆ ಕಾಂಗ್ರೆಸ್ ಅಡ್ಡಿ ಪಡಿಸಿದೆ. ಈ ಯೋಜನೆ ಈ ಹಿಂದೆ ಅನುಷ್ಠಾನ ಆಗಿತ್ತು.


ಆದರೆ ಗೋ ಹತ್ಯೆ ನಿಷೇಧದ ಬಳಿಕ ಈ ಯೋಜನೆ ಬದಲಾವಣೆಗೆ ಗಮನ ಹರಿಸಿರಲಿಲ್ಲ. ಈಗ ನಾವು ಗಮನ ಹರಿಸುತ್ತಿದ್ದೇವೆ. ಸೆಂಟ್ರಲ್ ಮಾರ್ಕೆಟ್ ನಲ್ಲಿ ಯಾವುದೇ ಬೀಪ್ ಸ್ಟಾಲ್ ಆಗದಂತೆ ನೋಡ್ತೇವೆ.

ಅಕ್ರಮ ಕಸಾಯಿ ಖಾನೆ ಬಗ್ಗೆ ಎಲ್ಲಾ ಶಾಸಕರು ಜಾಗೃತರಾಗಿದ್ದಾರೆ. ಅಕ್ರಮ ಕಸಾಯಿ ಖಾನೆ ಎಲ್ಲೇ ಇದ್ರು ಅಂತಹ ಸ್ಥಳ ಗುರುತಿಸಿ ಸರ್ಕಾರದ ಮೂಲಕ ಆಸ್ತಿ ಮುಟ್ಟುಗೋಲು ಹಾಕಲಾಗುತ್ತೆ‌.

ಈ ಬಗ್ಗೆ ಈಗಾಗಲೇ ಹಲವು ಆಸ್ತಿ ಕಾನೂನು ಮೂಲಕ ಜಪ್ತಿ ಮಾಡಲಾಗಿದೆ. ಇದರ ಮೂಲಕ ಗೋ ಹತ್ಯೆ ನಿಷೇಧ ಮಾಡುವ ಮೂಲಕ ಜನ್ರಲ್ಲಿ ಜಾಗೃತಿ ಮೂಡಿಸಲಾಗುತ್ತೆ’ ಎಂದು ಹೇಳಿದರು.

Related Posts

Leave a Reply

Your email address will not be published.