ಗುಜರಾತ್‌ನ ಮಿಲಿಟರಿ ಆಸ್ಪತ್ರೆಯ ಇನ್‌ಚಾರ್ಜ್ ಆಗಿ ಲೆಫ್ಟಿನಂಟ್ ಕರ್ನಲ್ ರುಕಿಯಾ ಶಾಫಿ ಬೀಜದಕಟ್ಟೆ ನೇಮಕ

ನಿವೃತ ಯೋಧ ಶಾಫಿ ಬೀಜದಕಟ್ಟೆ ಯವರ ಧರ್ಮ ಪತ್ನಿ ಲೆಫ್ಟಿನೆಂಟ್ ಕರ್ನಲ್ ರುಕಿಯಾ ಶಾಫಿ ಬೀಜದಕಟ್ಟೆ ಯವರು ಗುಜರಾತಿನ ಧ್ರನಂಗಧಾರ ಮಿಲಿಟರಿ ಅಸ್ಪತ್ರೆಯ ಇನ್ಚಾರ್ಜ್ ಆಗಿ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಇವರು ಸುಳ್ಯ ತಾಲೂಕು ಸಂಪಾಜೆ ಗ್ರಾಮದ ನಿವಾಸಿಯಾಗಿರುವ ದಿ. ಸೈದು ಹಾಜಿ ಮತ್ತು ಆಸಿಯಮ್ಮ ದಂಪತಿಗಳ ಪುತ್ರ ಹಾಗೂ ಸಜ್ಜನ ಪ್ರತಿಷ್ಠಾನ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಯವರ ಸಹೋದರ ಶಾಫಿ ಬೀಜದಕಟ್ಟೆ ಅವರ ಪತ್ನಿ ದೀರ್ಘಕಾಲದಿಂದ ಸೇನೆ ವೈದ್ಯಕೀಯ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ರುಕಿಯಾ ಶಾಫಿ ಅವರು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ಇದೀಗ ಮಹತ್ವದ ಹುದ್ದೆಗೆ ನೇಮಕವಾಗಿದ್ದಾರೆ.
ಲೆಫ್ಟಿಂನೆಂಟ್ ಕರ್ನಲ್ ರುಕಿಯ ಶಾಫಿ ಬೀಜದಕಟ್ಟೆ ಯವರು 1994 ರಿಂದ 1997 ವರೆಗೆ ಮಿಲಿಟರಿ ವೈದಕೀಯ ತರಬೇತಿಯನ್ನು ದೆಹಲಿಯ ಆರ್ಮಿ ವೈದಕೀಯ ಸಂಶೋಧನಾ ಮತ್ತು ರೆಫರಲ್ ಡೆಲ್ಲಿ ಮುಗಿಸಿ ಲೆಫ್ಟಿಂನೆಂಟ್ ಹುದ್ದೆಯಲ್ಲಿ ಸೇನೆಗೆ ಸೇರ್ಪಡೆಗೊಂಡರು.
ಪಂಜಾಬ್, ಉತ್ತರಕಂಡ್, ಸಿಕ್ಕಿಂ, ಹೈದ್ರಾಬಾದ್, ಲಾಕ್ನೋ, ಮುಂತಾದ ಕಡೆ ಮಿಲಿಟರಿ ಹಾಸ್ಪಿಟಲ್ ನಲ್ಲಿ ಸೇವೆ ಸಲ್ಲಿಸಿ ನಂತರ ಮುಂಬೈ, ಒರಿಸ್ಸಾ, ಕಾರವಾರ ನೌಕ ಸೇನೆಯ ಹಾಸ್ಪಿಟಲಿನಲ್ಲಿ ಸೇವೆ ಸಲ್ಲಿಸಿದ್ದಾರೆ.
ಬೀಜದಕಟ್ಟೆ ಕುಟುಂಬದಿಂದ ಅಭಿನಂದನೆ ಗ್ರಾಮದ ಮಟ್ಟದಿಂದ ದೇಶದ ಮಿಲಿಟರಿ ಆರೋಗ್ಯ ಇಲಾಖೆಯ ಉನ್ನತ ಹುದ್ದೆಗೆ ಸೇರಿರುವ ಇವರು, ಯುವ ಸಮುದಾಯಕ್ಕೆ ಪ್ರೇರಣೆಯ ಮೂಡಿಸಿರುವ ವ್ಯಕ್ತಿತ್ವ ಹೊಂದಿದವರು ಸುಳ್ಯ ಗೂನಡ್ಕ ಬೀಜದಕಟ್ಟೆ ದಿ| ಸೈದು ಹಾಜಿ ಯವರ ಕುಟುಂಬದಿಂದ ಮೂರು ಸದಸ್ಯರನ್ನು ದೇಶ ಸೇವೆಗೆ ಕೊಟ್ಟಿದ್ದಾರೆ ಇದರಿಂದ ಬೀಜದಕಟ್ಟೆ ಕುಟುಂಬಕ್ಕೂ ಹಾಗೂ ನೆರೆಹೊರೆಯವರಿಗೂ ಮತ್ತು ಕುಟುಂಬಸ್ಥರಿಗೂ ಹೆಮ್ಮೆಯನ್ನು ತಂದಿದೆ ಎಂದು ಡಾ.ಉಮ್ಮರ್ ಬೀಜದಕಟ್ಟೆ ಯವರು ಹರ್ಷ ವ್ಯಕ್ತಪಡಿಸಿದ್ದಾರೆ.