ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನ : ಗುರುರಾಯರ 354ನೇ ಆರಾಧನಾ ಮಹೋತ್ಸವ

ಬೆಳ್ತಂಗಡಿ:ರಾಘವೇಂದ್ರ ಸೇವಾ ಪ್ರತಿಷ್ಠಾಪನಾ ವತಿಯಿಂದ ಗುರುರಾಯರ 354ನೇ ಆರಾಧನಾ ಮಹೋತ್ಸವ ಪ್ರಯುಕ್ತ ಆಗಸ್ಟ್ 10ರಿಂದ 12ರವರೆಗೆ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಆಗಸ್ಟ್ 10 ನೇ ತಾರೀಖು ಭಾನುವಾರದಂದು ಬೆಳಿಗ್ಗೆ ಆರಾಧನಾ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಮುರಳಿ ಬಿ. ಬಲಿಪ, ಬೆಳ್ತಂಗಡಿ ಪೊಲೀಸ್ ನಿರೀಕ್ಷಕ ಬಿ. ಜೆ. ಸುಬ್ಬಾಪುರ ಮಠ, ತಾಲೂಕು ತುಳು ಶಿವಳ್ಳಿ ಸಭಾ ಅಧ್ಯಕ್ಷ ರಾಜ್‌ ಪ್ರಸಾದ್‌ ಪೊಲ್ನಾಯ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆಸುಗಂಧಿ ಜಗನ್ನಾಥ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಆರಾಧನ ಮಹೋತ್ಸವದ ಅಂಗವಾಗಿ ಕನ್ಯಾಡಿ ಸ್ವರ ತ್ರಿವೇಣಿ ತಂಡ ದವರಿಂದ ಭಕ್ತಿ ರಸ ಮಂಜರಿ ನಡೆಯಲಿದೆ.

ಆಗಸ್ಟ್ 11 ನೇ ಸೋಮವಾರ ದಂದು ನೂತನವಾಗಿ ನಿರ್ಮಿತವಾದ ಶ್ರೀ ಗುರುಪ್ರಸಾದ ಮಂಟಪದ ಉದ್ಘಾಟನಾ
ಸಮಾರಂಭ ನಡೆಯಲಿದ್ದು, ಹೊಸಪೇಟೆ ಶಾಸಕ ಎಚ್‌. ಆರ್. ಗವಿಯಪ್ಪ ಉದ್ಘಾಟಿಸಲಿದ್ದಾರೆ.

ಗಂಗಾವತಿ ಮಾಜಿ ಶಾಸಕ ಎಚ್.ಎಸ್. ಮುರಳೀಧರ್, ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ, ಬೆಸ್ಟ್ ಫೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಮ್, ನಾರಾಯಣ ಬೇಗೂರು, ಸುಜಿತಾ ವಿ,ಬಂಗೇರ, ಪ್ರಸಾದ್ ಶೆಟ್ಟಿ ಏಣಿಂಜೆ ಭಾಗವಹಿಸಲಿದ್ದಾರೆ.

ರಾಘವೇಂದ್ರ ಪ್ರತಿಷ್ಠಾಪನಾದ ಅಧ್ಯಕ್ಷ ಪೀತಾಂಬರ ಹೇರಾಜೆ ಅಧ್ಯಕ್ಷತೆ ವಹಿಸಲಿದ್ದಾರೆ.ನೂತನ ನಿರ್ಮಿಸಿದ ಶ್ರೀ ಗುರುಪ್ರಸಾದ ಮಂಟಪದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದಲ್ಲಿವಿವಿಧ ಭಜನಾ ತಂಡಗಳಿಂದ ಭಜನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Posts

Leave a Reply

Your email address will not be published.