ವತ್ತಿನೆಣೆ ಶ್ರೀಗುರುರಾಘವೇಂದ್ರ ಸ್ವಾಮಿ ಮಠ ಕಿರು ಮಂತ್ರಾಲಯ: 354ನೇ ಗುರುಗಳ ಆರಾಧನ ಮಹೋತ್ಸವ

ಬೈಂದೂರು: ಶ್ರೀಗುರುರಾಘವೇಂದ್ರ ಸ್ವಾಮಿ ಮಠ ವತ್ತಿನೆಣೆ ಬೈಂದೂರು ಇದರ 354ನೇ ಆರಾಧನ ಮಹೋತ್ಸವ ನಡೆಯಿತು.
ಬೆಳಿಗ್ಗೆ ಪಾದಪೂಜೆ, ಅರ್ಚನೆ, ಆಂಜನೇಯ ಸ್ವಾಮಿಗೆ ಬೆಣ್ಣೆ ಸೇವೆ, ಮಹಾಪೂಜೆ, ಮಹಾಮಂಗಳಾರತಿ,ಪ್ರಸಾದ ವಿತರಣೆ ,ಮದ್ಯಾಹ್ನ ಮಹಾಅನ್ನಸಂತರ್ಪಣೆ,ಭಜನಾ ಕಾರ್ಯಕ್ರಮ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಸಾವಿರಾರು ಭಕ್ತರು ಆಗಮಿಸಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.



ಗುರು ಸಾರ್ವಭೌಮರ ಆರಾಧನ ಮಹೋತ್ಸವದ ಪ್ರಯುಕ್ತ ಸೇವಾ ಸಂಗಮ ಶಿಶು ಮಂದಿರ ಬೈಂದೂರು ಇಲ್ಲಿನ ಮಾತೆಯರಿಂದ ಭಗವದ್ಗೀತೆ ಪಠಣ,ವಿಷ್ಣು ಸಹಸ್ರನಾಮ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸೂಲಿಯಣ್ಣ ಶೆಟ್ಟಿ ಅಧ್ಯಕ್ಷರು, ಎಸ್. ರಾಜು ಪೂಜಾರಿ ಉಪಾಧ್ಯಕ್ಷರು,ಮಂಜುನಾಥ ಶೆಟ್ಟಿ ಕಾರ್ಯದರ್ಶಿ ಸದಸ್ಯರಾದ ಉದಯ ಪಡಿಯಾರ್ ಶ್ರೀ ದಿನೇಶ ಕೆ.,ರವೀಂದ್ರ ಶ್ಯಾನುಭಾಗ್, ನಾಗರಾಜ (ರಾಜು) ದೇವಾಡಿಗ, ದಿನಕರ ಶೆಟ್ಟಿ ಶ್ರೀ ಸೋಮಶೇಖರ,ಕೃಷ್ಣ ದೇವಾಡಿಗ, ಮಂಜುನಾಥ ಎಲ್, ಶ್ರೀಮತಿ ಅನ್ನಪೂರ್ಣ ಅರುಣ ಅಡಿಗ,ಅರ್ಚಕರಾದ ತಿರುಮಲ ಭಟ್ ಮಕ್ಕಿದೇವಸ್ಥಾನ, ಸುಬ್ರಾಯ ನಾವಡ,
ಮುರಳೀಧರ ನಾವಡ, ಕುತ್ಯಾರು ಕೇಂಜ ಶ್ರೀಧರ ತಂತ್ರಿಗಳು, ಸಿಬ್ಬಂದಿ ವರ್ಗ ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.
