ನಿಂತಿಕಲ್ಲು ಮಾಸಾಶನ ಪತ್ರ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಸುಳ್ಯ ತಾಲೂಕಿನ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಿಂತಿಕಲ್ಲು ವಲಯದ ಕುಕ್ಕಯ್ಯಕೇಡಿ ಎಂಬಲ್ಲಿ ವಾಸವಾಗಿರುವ ತೀರ ಬಡತನದಲ್ಲಿರುವ ಸದಸ್ಯರಾದ ಬಾಬು ರೈ ಮತ್ತು ದೈಯಕ್ಕು ದಂಪತಿಗಳಿಗೆ ಶ್ರೀ ಕ್ಷೇತ್ರದಿಂದ ತಿಂಗಳಿಗೆ 2000/- ಮಾಸಾಶನ ಮೊತ್ತ ಮಂಜೂರಾಗಿದ್ದು, ಇವರಿಗೆ ಮಂಜೂರಾತಿ ಪತ್ರವನ್ನು ಊರಿನ ಗಣ್ಯರಾದ ಶ್ರೀಯುತ ಸುಧೀರ್ ಕುಮಾರ್ ಶೆಟ್ಟಿ ಕುಕ್ಕಯ್ಯಕೇಡಿ ಇವರು ವಿತರಿಸಿದರು.ಈ ಸಂದರ್ಭದಲ್ಲಿ ನಿಂತಿಕಲ್ಲು ವಲಯದ ಅಧ್ಯಕ್ಷರಾದ ಶ್ರೀ ವಸಂತ ಗೌಡ, ವಲಯ ಮೇಲ್ವೀಚಾರಕರು ಶ್ರೀಮತಿ ಸವಿತಾ, ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಲಕ್ಷ್ಮೀ ಹಾಗೂ ನಿಂತಿಕಲ್ಲು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಶ್ರೀಮತಿ ಲೀಲಾವತಿಯವರು ಉಪಸ್ಥಿತರಿದ್ದರು.