ಬಾರಕೂರು  : ಆಳುಪೋತ್ಸವ ನಡೆದಲ್ಲಿ ಕಾಡು ಪೊದೆಗಳ ರಾಜ್ಯ

ತುಳುನಾಡ ರಾಜಧಾನಿ ಆಗಿದ್ದ ದೇವಾಲಯಗಳ, ರಾಜ ಮಹಾರಾಜರುಗಳ  ಖ್ಯಾತಿಯ  ಬಾರಕೂರು  ಕೋಟೆಯಲ್ಲಿ 5 ವರ್ಷಗಳ ಹಿಂದೆ  ನಡೆದ ಅಳುಪೋತ್ಸವ ನಡೆದಿತ್ತು. ಅಲ್ಲಿ ಈಗ ಮುಳ್ಳು ಪೊದೆಗಳು ರಾಜ್ಯಭಾರ ನಡೆಸಿವೆ. 

2019 ಜನವರಿ  25ರಿಂದ 27ರತನಕ  ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕನ್ನಡ  ಮತ್ತು  ಸಂಸ್ಕೃತಿ ಇಲಾಖೆ, ಉಡುಪಿ ಜಿಲ್ಲಾಡಳಿತ  ಮತ್ತು ಸ್ಥಳಿಯ ಸಂಘ ಸಂಸ್ಥೆಗಳ ಸಹಕಾರದಲ್ಲಿ  ನಡೆದ ಅಳುಪೋತ್ಸವ  ಬಾರಕೂರಿನ  ಗತ ವೈಭವಕ್ಕೆ  ಸಾಕ್ಷಿಯಾಗಿತ್ತು. ಕೋಟೆಯ ಸುತ್ತ ಏರು ಪೇರು ಸಮತಟ್ಟು ಮಾಡಿ ಭೂತಾಳಪಾಂಡ್ಯ  ಬೃಹತ್ ವೇದಿಕೆಯಲ್ಲಿ ರಾಷ್ಟ್ರ ಮಟ್ಟದ  ಜನನಾಯಕರು, ಕಲಾವಿದರು ಎಂದು ಅಳುಪೋತ್ಸವ ವೈಭವದಿಂದ ನಡೆದಿತ್ತು. ಅದನ್ನು  ಪ್ರತೀ ೨ ವರ್ಷಕೊಮ್ಮೆ  ನಡೆಸಿ ಬಾರಕೂರನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಬೇಕು  ಎಂದು ಹೇಳಲಾಗಿತ್ತು.

ಆದರೆ ಯಾರೂ ಅತ್ತ ಗಮನ ಹರಿಸದ್ದರಿಂದ ಅಲ್ಲಿ ಮುಳ್ಳು ಪೊದೆಗಳು ಬೆಳೆದು ಹಾವು ಇತ್ಯಾದಿಗಳ ವಾಸಸ್ಥಾನವಾಗಿದೆ. ಕೋಟೆಯ ರಾಣಿಯ ಸ್ನಾನದ ಸರೋವರ,  ಆನೆ ಕುದುರೆ ಕಟ್ಟುವಲ್ಲೆಲ್ಲ ಕಾಟು ಮರಗಿಡಗಳು ಬೆಳೆದು ಗುರುತು ಸಿಗದ ಸ್ಥಿತಿ ಇದೆ. ಜಿಲ್ಲಾಡಳಿತ ಕೂಡಲೆ ಇತ್ತ ದೃಷ್ಟಿ ಹರಿಸಬೇಕಾಗಿದೆ.

Related Posts

Leave a Reply

Your email address will not be published.