ತಮ್ಮನ ಮೃತದೇಹ ನೋಡಲು ಬಂದ ಅಣ್ಣನೂ ಹೃದಯಾಘಾತದಿಂದ ಸಾವು

ಮೂಡುಬಿದಿರೆ : ಅನಾರೋಗ್ಯದಿಂದ ಸಾವನ್ನಪ್ಪಿದ ತಮ್ಮನ ಮೃತದೇಹವನ್ನು ನೋಡಲು ದೂರದ ಗುಜರಾತಿನಿಂದ ಬಂದಿದ್ದ ಅಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಶನಿವಾರ ನಿಡ್ಡೋಡಿಯಲ್ಲಿ ನಡೆದಿದೆ.

ತಾಲೂಕಿನ ನಿಡ್ಡೋಡಿಯಲ್ಲಿ ನಿವಾಸಿ, ಜನಪರ ಕೆಲಸಗಳಿಂದ ಪರಿಸರದಲ್ಲಿ ಗುರುತಿಸಿಕೊಂಡಿದ್ದ ಪ್ರವೀಣ್ ಶೆಟ್ಟಿ ಅವರು ಕೆಲಕಾಲದ ಅಸೌಖ್ಯದಿಂದ ಆಸ್ಪತ್ರೆ ಸೇರಿದ್ದರು. ಸಾಕಷ್ಟು ಖರ್ಚು ಮಾಡಿದ್ದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಸಹೋದರ ಮೃತಪಟ್ಟ ಸುದ್ಧಿ ತಿಳಿದು ಗುಜರಾತ್ ನಲ್ಲಿದ್ದ ಅವರ ಅಣ್ಣ ಸಾಯಿ ಪ್ರಸಾದ್ ಅವರು ಪತ್ನಿ ಸಮೇತ ಊರಿಗೆ ಬಂದಿದ್ದರು. ಸಾಯಿಪ್ರಸಾದ್ ಮನೆಗೆ ಬಂದು ಸಹೋದರನ ಮೃತದೇಹ ನೋಡುತ್ತಲೇ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದರೆನ್ನಲಾಗಿದೆ.
ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ ಪ್ರಯೋಜನವಾಗದೆ ಮೃತಪಟ್ಟಿದ್ದಾರೆ.
ಒಂದೇ ದಿನ ಮನೆಯಲ್ಲಿ ನಡೆದ ಇಬ್ಬರ ಸಾವು ಮನೆಮಂದಿ ಮಾತ್ರವಲ್ಲದೆ ಇಡೀ ನಿಡ್ಡೋಡಿಯ ಜನತೆಗೆ ನೋವು ನೀಡಿದೆ.

Related Posts

Leave a Reply

Your email address will not be published.