ದಿಲ್ಲಿ ಮುಖ್ಯಮಂತ್ರಿಯ ಕೆನ್ನೆಗೆ ಏಟು.ಸಭೆಯಲ್ಲಿ ರೇಖಾ ಗುಪ್ತ ಮೇಲೆ ಹಲ್ಲೆದಾಳಿಕೋರನನ್ನು ಬಂಧಿಸಿದ ಪೋಲೀಸರು

ದಿಲ್ಲಿಯ ಮಖ್ಯಮಂತ್ರಿ ಮನೆ ಕಚೇರಿ ಬಳಿ ಕೂಟವೊಂದರ ಜೊತೆಗೆ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಮಾತನಾಡುವಾಗ ಅಪರಿಚಿತನೊಬ್ಬನು ನುಗ್ಗಿ ಬಂದು ಅವರ ಕೆನ್ನೆಗೆ ಹೊಡೆದಿದ್ದಾನೆ.ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು ಜನ್ ಸುನ್‌ವಯ್ ಎಂಬ ಜನರ ಅಹವಾಲು ಸ್ವೀಕರಿಸುವಾಗ ಈ ಘಟನೆ ನಡೆದಿದೆ ಎಂದಿರುವ ದಿಲ್ಲಿ ಬಿಜೆಪಿ ಘಟಕವು ಘಟನೆಯನ್ನು ಖಂಡಿಸಿದೆ. ನುಗ್ಗಿದ ವ್ಯಕ್ತಿಯು ಮುಖ್ಯಮಂತ್ರಿಯ ಕೂದಲು ಎಳೆದು, ಕೆನ್ನೆಗೆ ಒಂದು ಬಾರಿಸಿ ತೂರಿ ಹೋದುದಾಗಿ ಹೇಳಲಾಗಿದೆ. ಈ ಸಂಬಂಧ ಕೂಡಲೆ ಸಂಶಯಿತ ವ್ಯಕ್ತಿಯನ್ನು ಬಂಧಿಸಲಾಗಿದೆ.

ಅಲ್ಲಿ ಸೇರಿದ್ದ ಜನರು ಮುಖ್ಯಮಂತ್ರಿಗೆ ಮನವಿ ನೀಡಲು ಆತುರದಲ್ಲಿದ್ದುದರಿಂದ ನಿಜವಾಗಿ ಏನು ನಡೆಯಿತು ಎಂದು ಸ್ಪಷ್ಟವಾಗಿ ನೋಡಿಲ್ಲ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಮೇಲೆ ಹಲ್ಲೆಯಾಗಿ ಅವರು ಎಚ್ಚರದಪ್ಪಿ ಬಿದ್ದರು ಎನ್ನುವುದೆಲ್ಲ ಕಟ್ಟುಕತೆ. ಒಬ್ಬ ವ್ಯಕ್ತಿ ಕೆನ್ನೆಗೆ ಹೊಡೆಯಲು ನುಗ್ಗಿದ್ದು ಸತ್ಯ ಎಂದು ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚದೇವ್ ಹೇಳಿದ್ದಾರೆ. ವಾರಕ್ಕೊಮ್ಮೆ ದಿಲ್ಲಿ ಮುಖ್ಯಮಂತ್ರಿ ಜನ್ ಸುನ್‌ವಯ್ ನಡೆಸುತ್ತಾರೆ. ಅದರಲ್ಲಿ ಈ ಅಹಿತಕರ ಘಟನೆ ನಡೆದಿದೆ ಎಂದು ವರದಿಯಾಗಿದೆ.

Related Posts

Leave a Reply

Your email address will not be published.