ಭಾರತದಲ್ಲಿ ಆನ್‍ಲೈನ್ ಗೇಮಿಂಗ್,ಪ್ರತಿ ವರುಷ 20,000 ಕೋಟಿ ನಷ್ಟ

ಭಾರತದಲ್ಲಿ ಪ್ರತಿ ವರುಷ ಆನ್‍ಲೈನ್ ಗೇಮ್ ಆಡಿ 45 ಕೋಟಿ ಭಾರತೀಯರು 20,000 ಕೋಟಿ ರೂಪಾಯಿ ಕಳೆದುಕೊಳ್ಳುತ್ತಿರುವುದಾಗಿ ತಿಳಿದು ಬಂದಿದೆ.ಕಳೆದೊಂದು ದಶಕದಿಂದ ಭಾರತದಲ್ಲಿ ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಳ್ಳುತ್ತಿರುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಈಗ ಕಾನೂನು ಮೂಲಕ ಆನ್‍ಲೈನ್ ಗೇಮಿಂಗ್ ತಡೆಯಲು ನಿಯಮಾವಳಿ ತರಲಾಗುತ್ತಿದೆ.

ಇದೊಂದು ಸಾಮಾಜಿಕ ಪಿಡುಗಾಗಿ ಬೆಳೆದಿದ್ದು, ಹಲವರು ಸಾಲಗಾರರಾಗಿದ್ದಾರೆ. ಮತ್ತೆ ಕೆಲವರು ಸಾಲಗಾರರ ಕಾಟ ತಾಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಭಾರತ ಮತ್ತು ಭಾರತದ ಎಲ್ಲ ರಾಜ್ಯಗಳ ಸಮಾಜ ಕಲ್ಯಾಣ ಇಲಾಖೆಗಳು ಇದರಿಂದ ಗಾಬರಿಗೊಂಡಿವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ. ಕಾನೂನು ಮೂಲಕ ತೊಡೆಯುವುದು ಸಾಧ್ಯವೇ ಎಂಬುದು ಚರ್ಚೆಯ ವಿಷಯ. ಆಡುವವರ ಮೇಲೆ ಕಠಿಣ ತೆರಿಗೆ ಹಾಕಿದರೆ ಬೇಗನೆ ಅವರು ಆ ದಾರಿಗೆ ಬೆನ್ನು ಹಾಕುವ ಸಾಧ್ಯತೆಯಿದೆ ಎನ್ನುವುದು ಹೊಸ ಆಲೋಚನೆಯಾಗಿದೆ.
