*ವಿಟ್ಲ: ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ: ಶ್ರೀದೇವರ ದರ್ಶನ ಬಲಿಸೇವೆ
ವಿಟ್ಲ: ಮಹಾತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಇಂದು ಶ್ರೀ ಕ್ಷೇತ್ರದಲ್ಲಿ ದರ್ಶನ ಬಲಿಸೇವೆಯು ನಡೆಯಿತು.
ಜನವರಿ 14 ರಂದು ಧ್ವಜರೋಹಣ ಮೂಲಕ ವರ್ಷಾವಧಿ ಜಾತ್ರೋತ್ಸವಕ್ಕೆ ಚಾಲನೆ ನೀಡಲಾಗಿತ್ತು. ಅದೇ ದಿನ ರಾತ್ರಿ ಲಕ್ಷದೀಪೋತ್ಸವ, ಉತ್ಸವ ಬಲಿ, ಪ್ರತಿನಿತ್ಯ ರಾತ್ರಿ ನಿತ್ಯೋತ್ಸವ ನಡೆಯುತ್ತಿದೆ. 18ರಂದು ಕೇಪುನಿಂದ ಶ್ರೀ ಮಲರಾಯ ದೈವದ ಭಂಡಾರ ಆಗಮಿಸಿ, ರಾತ್ರಿ ಬಯ್ಯದ ಬಲಿ ನಡೆದಿದೆ.
ಜ.20ರಂದು ಹೂತೇರು ಸೇವೆ ನಡೆದಿದ್ದು, ಇಂದು ಬೆಳಿಗ್ಗೆ ದರ್ಶನ ಬಲಿ ಸೇವೆಯು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಂಜೆ ಕಡಂಬುನಿಂದ ಕೊಡೆಮಣಿತ್ತಾಯ ದೈವದ ಭಂಡಾರ ಕ್ಷೇತ್ರಕ್ಕೆ ಆಗಮನ, ರಾತ್ರಿ ಮಹಾರಥೋತ್ಸವ ನಡೆಯಲಿದೆ.