ಸುಪ್ರೀಂ ಕೋರ್ಟು ತೀರ್ಪು :ಬೀದಿ ನಾಯಿಗಳು ಮತ್ತೆ ಬೀದಿಗೆ ಬರಲಿ! ಬೀದಿಯಲ್ಲಿ ತಿನಿಸು ಕೊಡುವುದು ಅಪರಾಧ

ಬೀದಿ ನಾಯಿಗಳು ಮತ್ತೆ ಬೀದಿಗೆ ಬಂದು ತಿರುಗಾಡಬಹುದು ಆದರೆ ಬೀದಿಯಲ್ಲಿ ಬೀದಿ ನಾಯಿಗಳಿಗೆ ತಿನಿಸು ಕೊಡುವುದು ಅಪರಾಧ ಎಂದು ಸುಪ್ರೀಂ ಕೋರ್ಟು ಹಿಂದಿನ ತೀರ್ಪನ್ನು ಬದಲಿಸಿ ತೀರ್ಪಿತ್ತಿದೆ.ಎಲ್ಲ ಬೀದಿ ನಾಯಿಗಳಿಗೆ ನಾಯಿ ಮನೆ ಕಟ್ಟುವುದು ಕಷ್ಟ ಎಂದು ದಿಲ್ಲಿಯ ಬಿಜೆಪಿ ಸರಕಾರವು ಹೇಳಿತ್ತು. ನಾಯಿ ಪ್ರಿಯರುಗಳು ಬೀದಿ ನಾಯಿಗಳ ಮೇಲೆ ಕಠಿಣ ಕ್ರಮ ಸರಿಯಲ್ಲ ಎಂದು ವಾದಿಸಿದ್ದವು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ, ಎನ್. ವಿ. ಅಂಜಾರಿಯಾ ಅವರುಗಳಿದ್ದ ನ್ಯಾಯಪೀಠವು ಬೀದಿ ನಾಯಿಗಳ ಬಗೆಗೆ ರಾಷ್ಟ್ರೀಯ ನೀತಿ ಮಾಡಲು ಐದು ಅಂಶಗಳನ್ನು ಹೇಳಿದೆ

ಬೀದಿ ನಾಯಿಗಳಿಗೆ ಇಂಜೆಕ್ಷನ್ ನೀಡಿ ಹಿಡಿದ ಸ್ಥಳಗಳಲ್ಲೇ ಬಿಡಬೇಕು. ರೇಬೀಸ್ ಇರುವ ಮತ್ತು ಉಗ್ರಾವತಾರ ತಾಳುವ ನಾಯಿಗಳನ್ನು ಬಿಡಬಾರದು.ಬೀದಿ ನಾಯಿಗಳಿಗೆ ಬೀದಿಯಲ್ಲಿ ಯಾರೂ ಆಹಾರ ನೀಡಬಾರದು. ದಿಲ್ಲಿ ಮಹಾನಗರ ಪಾಲಿಕೆಯು ಆಹಾರ ನೀಡುವ ನಿಶ್ಚಿತ ಸ್ಥಳ ಗೊತ್ತು ಮಾಡಬಹುದು.ಯಾರಾದರೂ ಬೀದಿಯಲ್ಲಿ ನಾಯಿಗಳಿಗೆ ತಿಂಡಿ ಕೊಟ್ಟರೆ, ಕಾನೂನು ಕ್ರಮ ತೆಗೆದುಕೊಳ್ಳಬೇಕು.

ಅಂತಾ ಸ್ಥಳಗಳಲ್ಲಿ ಮಾತ್ರ ನಾಯಿಗಳಿಗೆ ತಿನಿಸು ನೀಡುವಂತೆ ತಿಳಿವಳಿಕೆ ಪತ್ರ ಹೊರಡಿಸಬೇಕು.ನಿಶ್ಚಿತ ಆಹಾರ ಕೊಡುವ ಜಾಗಗಳನ್ನು ಪಾಲಿಕೆಗಳು ಗುರುತಿಸಿ, ಸೂಕ್ತ ಭದ್ರತೆ ವಹಿಸಬೇಕು.ಈ ಐದು ಸೂತ್ರಗಳನ್ನು ಎಲ್ಲ ಮಹಾನಗರಗಳು ಪಾಲಿಸುವಂತೆ ರಾಜ್ಯ ಸರಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ನ್ಯಾಯ ತೀರ್ಪಿನಲ್ಲಿ ವಿವರಿಸಲಾಗಿದೆ.
