ನೋಯ್ಡಾ:ವರದಕ್ಷಿಣೆ ಬಾಕಿಗೆ ಸುಟ್ಟು ಕೊಲೆ ಆರು ವರುಷದ ಮಗನೆದುರು ಹತ್ಯೆ

ನೋಯ್ಡಾದಲ್ಲಿ ವರದಕ್ಷಿಣೆ ಬಾಕಿಗಾಗಿ ಆರು ವರುಷದ ಮಗನ ತಾಯಿಯನ್ನು ಗಂಡನ ಮನೆಯವರು ಜೀವಂತ ಸುಟ್ಟು ಕೊಂದುದರ ಸಂಬಂಧ ಪೋಲೀಸರು ಮೂವರನ್ನು ಬಂಧಿಸಿದ್ದಾರೆ.ಆರು ವರುಷದ ಹುಡುಗನ ಹೇಳಿಕೆ ಹೀಗಿದೆ. ಮೊದಲು ಅವರ ಅಮ್ಮನ ಮೇಲೆ ಏನೋ ಸುರಿದರು. ಅನಂತರ ಕೆನ್ನೆಗೆ ಹೊಡೆದರು. ಅಪ್ಪ ಲೈಟರ್‌ನಿಂದ ಬೆಂಕಿ ಹಚ್ಚಿದಾಗ ಅಮ್ಮ ದಗದಗ ಬೆಂಕಿಯಲ್ಲಿ ಅರಚುತ್ತ ಸುಟ್ಟು ಹೋದಳು. ನನ್ನನ್ನು ಗಟ್ಟಿಯಾಗಿ ಮುಖ ಅಮುಕಿ ಹಿಡಿದುಕೊಂಡಿದ್ದಾರೆ.

ಗಂಡನ ಮನೆಯಲ್ಲಿ ಬೆಂಕಿ ಇಡಲ್ಪಟ್ಟು ಸುಡಲ್ಪಟ್ಟ ನಿಕ್ಕಿ ಭಾಟಿ ಇವರ ಕತೆ ಎದೆ ಹಿಂಡುತ್ತದೆ. ಗಂಡ ವಿಪಿನ್ ಭಾಟಿಯನ್ನು ಈ ಸಂಬಂಧ ಬಂಧಿಸಿ ಕರೆದೊಯ್ಯುವಾಗ ಆತನು ಪೋಲೀಸರನ್ನು ದೂಡಿ ತಪ್ಪಿಸಿಕೊಳ್ಳಲು ನೋಡಿದ್ದು, ಆತನ ಕಾಲಿಗೆ ಪೋಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. 2015 ರಲ್ಲಿ ನಿಕ್ಕಿ ಮತ್ತು ವಿಪಿನ್ ಮದುವೆಯಾಗಿತ್ತು. ಈಗ 28 ರ ನಿಕ್ಕಿ ಬರೇ ಬೂದಿ.

ನಿಕ್ಕಿಯ ಅತ್ತೆ ದಯಾ ಭಾಟಿಯವರನ್ನು ಭಾನುವಾರ ಬಂಧಿಸಲಾಗಿದೆ. ವಿಪಿನ್ ಭಾಟಿಯ ತಮ್ಮ ರೋಹಿತ್ ಭಾಟಿಯು ನಿಕ್ಕಿಯ ತಂಗಿಯನ್ನು ಮದುವೆಯಾಗಿದ್ದ. ಆಕೆಗೂ ಹೊಡೆದು ಹಿಂಸಿಸಿರುವುದು ಬಯಲಾಗಿದೆ. ಸೋಮವಾರ ಬೆಳಿಗ್ಗೆ ರೋಹಿತ್ ಭಾಟಿಯನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ೧೪ ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ವಿಪಿನ್ ಭಾಟಿ ಪ್ರಕಾರ ಆಕೆ ಬ್ಯೂಟಿ ಪಾರ್ಲರ್ ನಡೆಸುವುದು ಇಷ್ಟವಿಲ್ಲ. ಅದಕ್ಕಾಗಿ ಸುಟ್ಟಿದ್ದೇನೆ. ಆತ ಈ ಹೇಳಿಕೆ ನೀಡಿದ್ದಾಗಿ ಪೋಲೀಸರು ತಿಳಿಸಿದ್ದಾರೆ.ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಿಕ್ಕಿ ಗರ್ಭಿಣಿಯಾಗಿದ್ದಾಗ ಅದನ್ನು ನಿಲ್ಲಿಸಿದ್ದಳು. ಇತ್ತೀಚೆಗೆ ಮತ್ತೆ ಆರಂಭಿಸಲು ಓಡಾಡುತ್ತಿದ್ದಳು ಎನ್ನಲಾಗಿದೆ.
