ಮಂಗಳೂರು: ಐಐಎಂಎಂ ಮಂಗಳೂರು ಶಾಖೆಯ ನೂತನ ಪದಾಧಿಕಾರಿಗಳ ಆಯ್ಕೆ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್ಮೆಂಟ್‌ನ ಮಂಗಳೂರು ಶಾಖೆಯ ವಾರ್ಷಿಕ ಸಭೆಯು ನಡೆಯಿತು. ಸಭೆಯಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟೀರಿಯಲ್ಸ್ ಮ್ಯಾನೇಜ್‌ಮೆಂಟ್ ಮಂಗಳೂರು ಶಾಖೆಯ ವಾರ್ಷಿಕ ಮಹಾಸಭೆಯು ಮಂಗಳೂರಿನ ಬಿಜೈನಲ್ಲಿರುವ ಹೋಟೆಲ್ ಓಷನ್ ಪರ್ಲ್ ಇನ್‌ನಲ್ಲಿ ನಡೆದಿದ್ದು, 2024-25 ರ ಅವಧಿಗೆ ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ ಸತೀಶ್ ಸತ್ಯನಾರಾಯಣ ಅವರನ್ನು ಶಾಖೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.ಉಪಾಧ್ಯಕ್ಷರಾಗಿ ಕೇತನ್ ಸಾಂಘ್ವಿ, ಕಾರ್ಯದರ್ಶಿ ಅನಮ್ ಸೊಂಟಕ್ಕೆ, ಖಜಾಂಚಿ ಅಲಿಶಾ ಮೇರಿ ಫಿಲಿಪ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಜಯ್ ಬಹದ್ದೂರ್ ಶೆಲ್ಕೆ ಮತ್ತು ಕೆ. ಚನ್ನಯ್ಯ,ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ಫಿಲಿಪ್ ಸಿಸಿ, ಶೇಖರ್ ಪೂಜಾರಿ ಆಯ್ಕೆಯಾದರು.ಕುಮಾರ್ ಅರಿಜಿತ್, ಮಂದರ್ ವಿ ಕಾಳೆ ಮತ್ತು ಸುರೇಶ್ ಕುಮಾರ್ ಜೆ ಇತರ ಸಮಿತಿ ಸದಸ್ಯರಾಗಿದ್ದಾರೆ.ಐಐಎಂಎA ಭಾರತದ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಪಿ ಎಂ ಬಿದ್ದಪ್ಪ ಮತ್ತು ಐಐಎಂಎಂ ಬೆಂಗಳೂರಿನ ಶ್ರೀನಿವಾಸ್ ರಾವ್ ಅವರು ಸಭೆಯಲ್ಲಿ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ನಡೆಸಿದರು.

add - S.L Shet ..march 2025

Related Posts

Leave a Reply

Your email address will not be published.