ಕಾಪುವಿನ ಅಮ್ಮನ ನೂತನ ದೇಗುಲದಲ್ಲಿ ಮೊದಲ ನವರಾತ್ರಿ : ಮಹಾನವಮಿಗೆ ವಾಗೀಶ್ವರಿ ಪೂಜೆ ಸಂಪನ್ನ

ಲೋಕ ಕಲ್ಯಾಣಾರ್ಥವಾಗಿ ಮತ್ತು ಸಾನಿಧ್ಯ ವೃದ್ದಿಗಾಗಿ ಕಾಪುವಿನ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಬಾವಿಯಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನವದುರ್ಗಾ ಲೇಖನ ಯಜ್ಞವನ್ನು ಹಮ್ಮಿಕೊಂಡಿದ್ದು, ಪುಸ್ತಕದಲ್ಲಿ ಮಾರಿಯಮ್ಮನ ಪ್ರೀತ್ಯರ್ಥ ದುರ್ಗೆಯರ ಹೆಸರನ್ನು ಬರೆಯುವುದಾಗಿದೆ, ನಾಡಿದಾದ್ಯಂತ ಸಹಸ್ರಾರು ಭಕ್ತರು ಈ ಲೇಖನವನ್ನು ಬರೆದಿದ್ದು, ಬರೆದು ಸಮರ್ಪಿಸಿದ ಪುಸ್ತಕಗಳಿಗೆ ಶರನ್ನವರಾತ್ರಿ ಮಹೋತ್ಸವದ ಮಹಾನವಮಿಯಂದು ವಾಗೀಶ್ವರಿ ಪೂಜೆ ಸಲ್ಲುತ್ತದೆ, ಇಂದು ಅಕ್ಟೋಬರ್ 1ರಂದು ಶ್ರೀ ದೇವಳದಲ್ಲಿ ಭಕ್ತರು ಸಮರ್ಪಿಸಿದ ಪುಸ್ತಕಗಳಿಗೆ ದೇವಳದ ಪ್ರಧಾನ ತಂತ್ರಿಗಳಾದ ಕೊರಂಗ್ರಪಾಡಿ ವಿದ್ವಾನ್ ಕೆ. ಪಿ ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಮತ್ತು ಪ್ರಧಾನ ಅರ್ಚಕರಾದ ಕಲ್ಯ ವೇದಮೂರ್ತಿ ಶ್ರೀನಿವಾಸ ತಂತ್ರಿಯವರ ಸಹಯೋಗದಲ್ಲಿ ಪುಸ್ತಕಸ್ಥ ವಾಗ್ದೇವತಾ ಪೂಜನಮ್ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿಯವರು ಭಕ್ತರು ಕಷ್ಟ ಕಾರ್ಪಣ್ಯಗಳ ನಿವಾರಣೆಗಾಗಿ ನವದುರ್ಗಾ ಲೇಖನವನ್ನು ಬರೆಯುತ್ತಿದ್ದು, ಈಗಾಗಲೇ 99,999 ಪುಸ್ತಕಗಳು ಮುದ್ರಣವಾಗಿದ್ದು, ನಾಡಿನಾದ್ಯಂತ ಬಹಳಷ್ಟು ಮಂದಿ ಇದನ್ನು ಬರೆದಿದ್ದಾರೆ, ಅಮ್ಮನ ಭಕ್ತರು ಈ ಸೇವೆಯನ್ನು ನೀಡುವ ಮೂಲಕ ತಮ್ಮ ಕಷ್ಟವನ್ನು ಪರಿಹರಿಸಿಕೊಳ್ಳಬಹುದು, ಈ ಸೇವೆ 99,999 ಪುಸ್ತಕಗಳವರೆಗೆ ಮುಂದುವರೆಯುತ್ತದೆ ಎಂದರು.

ಲೇಖನದೊಂದಿಗೆ ಶಾಶ್ವತ ಸೇವೆಯನ್ನು ಸಮರ್ಪಿಸಿದ ಭಕ್ತರು ಪೂಜೆಯ ಸಂಕಲ್ಪದಲ್ಲಿ ಭಾಗಿಯಾದರು, ಸಂಕಲ್ಪ ಪ್ರಸಾದವನ್ನು ಭಕ್ತರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕ ಉದಯ ಸುಂದರ್ ಶೆಟ್ಟಿ, ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ಉಡುಪಿ, ಪ್ರಧಾನ ಕಾರ್ಯದರ್ಶಿ ಮತ್ತು ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಧಾರ್ಮಿಕ ಸಮಿತಿಯ ಪ್ರಧಾನ ಸಂಚಾಲಕ ಭಗವಾನ್ ದಾಸ್ ಶೆಟ್ಟಿಗಾರ್, ನವದುರ್ಗಾ ಲೇಖನ ಯಜ್ಞ ಸಮಿತಿಯ ಕೋಶಾಧಿಕಾರಿ ಕೆ. ವಿಶ್ವನಾಥ್, ಮಹಿಳಾ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್,ಗೀತಾಂಜಲಿ ಎಂ. ಸುವರ್ಣ, ಘಂಟಾನಾದ ಸೇವಾ ಸಮಿತಿಯ ಮಹಿಳಾ ಪ್ರಧಾನ ಸಂಚಾಲಕಿ ಬೀನಾ ವಿ. ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.