ಬೈಂದೂರು ಬಂಟರಯಾನೆ ನಾಡವರ ಸಂಘ ನೂತನ ಅಧ್ಯಕ್ಷರಾದ ಗೋಕುಲ್ ಶೆಟ್ಟಿ ಉಪ್ಪುಂದ ಪದಪ್ರದಾನ ಸಮಾರಂಭ

ಬೈಂದೂರು ಬಂಟರ ಯಾನೆ ನಾಡವರ ಸಂಘ ರಿ. ಇದರ ನೂತನ ಅಧ್ಯಕ್ಷರಾದ ಗೋಕುಲ್ ಶೆಟ್ಟಿ ಉಪ್ಪಂದ ಪ್ರದಪ್ರದಾನ ಸಮಾರಂಭ
ಬೈಂದೂರು ಯಡ್ತರೆ ಮಂಜಯ್ಯ ಶೆಟ್ಟಿ ಸಂಕೀರ್ಣದ ಬಿ.ಜೆ. ಸಭಾಭವನದಲ್ಲಿ ಸಂಭ್ರಮದಲ್ಲಿ ನಡೆಯಿತು
ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಸಮಾಜಕ್ಕಾಗಿ ಏನು ಮಾಡಿರುತ್ತೇವೆ ಅದು ಮಾತ್ರ ಶಾಶ್ವತವಾಗಿರುತ್ತದೆ. ಸಮುದಾಯದ ಏಳಿಗೆಗಾಗಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದು ಅಗತ್ಯ ಇದರಿಂದ ಸಂಘಟನೆ ಬಲಿಷ್ಠವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಗೋಕುಲ್ ಶೆಟ್ಟಿ ಅವರು ಉತ್ತಮ ದೂರದ್ರಷ್ಟಿವುಳ್ಳ ನಾಯಕರಾಗಿದ್ದು ಸಮಾಜದಲ್ಲಿನ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುವ ವಿಶ್ವಾಸ ಇದೆ ಎಂದರು.
ಮಾಜಿ ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ಪ್ರದಪ್ರದಾನ ನೆರವೇರಿಸಿ ಮಾತನಾಡಿ, ಸಮುದಾಯದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಡುಗೆ ನೀಡಿದಾಗ ಇಡೀ ಸಮಾಜದ ಸಮ್ರದ್ದಿ ಸಾಧಿಸಲು ಸಾಧ್ಯ ಎಂದು ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.
ಉದ್ಯಮಿ ಉಪ್ಪುಂದ ಯು. ಬಿ. ಶೆಟ್ಟಿ ಮಾತನಾಡಿ, ದೇವರು ನಮಗೆ ನೀಡಿದ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಾಗ ಶ್ರೇಷ್ಠ ವ್ಯಕ್ತಿಯಾಗಿ ಗುರುತಿಸಿಕೊಳ್ಳಲು ಸಾಧ್ಯವಿದೆ ಎಂದರು.
ಬೈಂದೂರು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಜಿ. ಗೋಕುಲ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಘದ ಅಭಿವೃದ್ಧಿಗೆ ಸುಮಾರು 1.5ಕೋಟಿ ವೆಚ್ಚದಲ್ಲಿ ಜಾಗ ಖರೀದಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಯೋಜನೆಗಳನ್ನು ಹಮ್ಮಿಕೊಂಡಿದ್ದು ಸಂಘದ ಅಭಿವೃದ್ಧಿಗೆ ಎಲ್ಲರು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಸಿ.ಎಮ್.ಡಿ., J.N.S.ಕನ್ ಸ್ಟ್ರಕ್ಷನ್ ಪ್ರೈ.ಲಿ. ಘಟಪ್ರಭಾ ಸಿ.ಎಮ್.ಡಿ., ಜಯಶೀಲ ಶೆಟ್ಟಿ ಹೇರಂಜಾಲು ಸಂಘದ ಎಲ್ಲಾ ಚಟುವಟಿಕೆಗಳಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ವೈದ್ಯರಾದ ಯಡ್ತರೆ ಡಾ| ಸಚ್ಚಿದಾನಂದ ಶೆಟ್ಟಿ ಮತ್ತು ಭಾರತೀಯ ರೈಲ್ವೆಯಲ್ಲಿ I.R.T.S.(S.D.O.M.) ಉನ್ನತ ಸ್ಥಾನದಲ್ಲಿರುವ ಪ್ರೀಯಾ ಶೆಟ್ಟಿ ಅವರನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಚಿತ್ತೂರು ಮಂಜಯ್ಯ ಶೆಟ್ಟಿ, ಚಿಕ್ಕಮಂಗಳೂರು ಲೈಪ್ ಲೈನ್ ಪೀಡ್ಸ್ (ಇಂಡಿಯ ಪ್ರೈ. ಲಿ.), ಸಿ.ಎಮ್.ಡಿ. ಕಿಶೋರ್ ಕುಮಾರ್ ಹೆಗ್ಡೆ, ಕೋಟೇಶ್ವರ ಯುವಮೇರಿಡಿಯನ್ ಸಿ.ಎಮ್.ಡಿ. ಉದಯ ಕುಮಾರ್ ಶೆಟ್ಟಿ, ಬೈಂದೂರು ಯುವ ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಗುರುರಾಜ್ ಶೆಟ್ಟಿ ಬೈಂದೂರು, ಮಹಿಳಾ ಸಂಘದ ಗೌರವಾಧ್ಯಕ್ಷ ಚಂದ್ರಕಲಾ ಶೆಟ್ಟಿ, ಮಹಿಳಾ ಸಂಘದ ಅಧ್ಯಕ್ಷೆ ಗೀತಾ ಗೋಕುಲ್ ಶೆಟ್ಟಿ, ಸಂಘದ ಕೋಶಾಧಿಕಾರಿ ಜಯರಾಮ ಶೆಟ್ಟಿ ಬಿಜೂರು ಮೊದಲಾದವರು ಉಪಸ್ಥಿತರಿದ್ದರು.
ಸಂಘದ ನೂತನ ಅಧ್ಯಕ್ಷ ಉಪ್ಪುಂದ ಜಿ. ಗೋಕುಲ್ ಶೆಟ್ಟಿ ಸ್ವಾಗತಿಸಿದರು. ಹಳ್ನಾಡು ಹೆಚ್. ಭೋಜರಾಜ್ ಶೆಟ್ಟಿ ಪ್ರಾಸ್ತಾವಿಸಿದರು. ಅಧ್ಯಾಪಕ ವಿಶ್ವನಾಥ ಶೆಟ್ಟಿ ಹಳಗೇರಿ ನಿರೂಪಿಸಿದರು. ಬೈಂದೂರು ಬಂಟರಯಾನೆ ನಾಡವರ ಸಂಘದ ಕಾರ್ಯದರ್ಶಿ ಬಿ. ನಿತಿನ್ ಶೆಟ್ಟಿ ವಂದಿಸಿದರು.