ಸರ್ಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣ: ಉಡುಪಿ ತಾಲೂಕಿನ ಜಿ.ಎಚ್.ಪಿ.ಸಿ ಉದ್ಯಾವರ ವೆಸ್ಟ್ ಹಾಗೂ ಜಿ.ಎಚ್.ಪಿ.ಸಿ ರಾಜೀವನಗರ ಶಾಲೆ ಆಯ್ಕೆ
ಕಾಪು:ರಾಜ್ಯದಲ್ಲಿರುವ ಆಯ್ದ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಿಸಿ ಹೆಚ್ಚುವರಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾಪು ವಿಧಾನಸಭಾ ಕ್ಷೇತ್ರದ ಉಡುಪಿ ತಾಲೂಕಿನ ಜಿ.ಎಚ್.ಪಿ.ಸಿ ಉದ್ಯಾವರ ವೆಸ್ಟ್ ಹಾಗೂ ಜಿ.ಎಚ್.ಪಿ.ಸಿ ರಾಜೀವನಗರ ಶಾಲೆಯನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ ಶೆಟ್ಟಿ ತಿಳಿಸಿದ್ದಾರೆ.


















