ವಾಲಿಬಾಲ್ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗ್ಲಾಯ್ ದರ್ಬೆ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಾಲಿಬಾಲ್ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ಪಾಂಗ್ಲಾಯ್ ದರ್ಬೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ಕರ್ನಾಟಕ ಸರ್ಕಾರ,ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಶಾಲಾ ಶಿಕ್ಷಣ ಇಲಾಖೆಚಿಕ್ಕಮಗಳೂರು ಜಿಲ್ಲೆ, ತಾಲ್ಲೂಕು ಆಡಳಿತ, ತಾಲ್ಲೂಕು ಚಂಪಾಯಿತಿ ತರೀಕೆರೆ-ಅಜ್ಜಂಪುರ, ಪುರಸಭೆ ತರೀಕೆರೆ, ಪಟ್ಟಣ ಪಂಚಾಯಿತಿ ಅಜ್ಜಂಪುರ, ಉಪನಿರ್ದೇಶಕರ ಕಛೇರಿ (ಆಡಳಿತ), (ಅಭಿವೃದ್ಧಿ), ಚಿಕ್ಕಮಗಳೂರು ಜಿಲ್ಲೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಶಾಲಾ ಶಿಕ್ಷಣ ಇಲಾಖೆ, ತರೀಕೆರೆ, ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಎಲ್ಲಾ ವೃಂದ ಶೈಕ್ಷಣಿಕ ಸಂಘಗಳ ಸಂಯುಕ್ತ ಅಶ್ರಯದಲ್ಲಿ, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನ, ತರೀಕೆರೆಯಲ್ಲಿ, ನಡೆದ 14 ವಯೋಮಾನದ ಬಾಲಕರ ಹೊನಲು ಬೆಳಕಿನ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಬೆಥನಿ ಆಂಗ್ಲ ಮಾಧ್ಯಮ ಶಾಲೆ ದರ್ಬೆ ಪುತ್ತೂರು ಪ್ರಥಮ ಸ್ಥಾನ ದೊಂದಿಗೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೆ ಯಾಗಿದೆ.ಶಾಲಾ ಕ್ರಿಯಾಶೀಲಾ ಮುಖ್ಯ ಶಿಕ್ಷಕಿ ಭಗಿನಿ ಅನಿತಾ ಟ್ರೆಸ್ಸಿ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ನಿರಂಜನ್ ಮತ್ತು ಅಕ್ಷಯ್ ರವರು ತರಬೇತಿ ನೀಡಿದ್ದಾರೆ.